ಪ್ರವಾಸಿಗರ ವಾಹನದ ಮೇಲೆ ದಾಳಿಗೆ ಮುಂದಾದ ಕಾಡಾನೆ! – ಆಮೇಲೆ ಏನಾಯ್ತು ಗೊತ್ತಾ?

ಪ್ರವಾಸಿಗರ ವಾಹನದ ಮೇಲೆ ದಾಳಿಗೆ ಮುಂದಾದ ಕಾಡಾನೆ! – ಆಮೇಲೆ ಏನಾಯ್ತು ಗೊತ್ತಾ?

ಸಫಾರಿಗೆ ಹೋದಂತಹ ಸಂದರ್ಭದಲ್ಲಿ ಆನೆಗಳು ಕೋಪಗೊಂಡು ಪ್ರವಾಸಿಗರಿದ್ದ ವಾಹನದತ್ತ ನುಗ್ಗುವುದು ಹೊಸದೇನೂ ಅಲ್ಲ. ಆಗಾಗ ಇಂತಹ ಘಟನೆಗಳು ನಡೆಯುತ್ತವೆ. ಇದೀಗ ಇಲ್ಲೊಂದು ಆನೆ ಪ್ರವಾಸಿಗ ವಾಹನವನ್ನು ಅಟ್ಟಿಸಿಕೊಂಡು ಬಂದಿದೆ. ಇದರ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಬುಡಕ್ಕೆ ಬೆಂಕಿ..! – ಭಾರತ ಹೆಣೆದಿರುವ ರಣತಂತ್ರ ಏನು?

ಕಾಡುಪ್ರಾಣಿಗಳು ಎಷ್ಟು ಶಾಂತ ಸ್ವಭಾವದಿಂದ ಇರುತ್ತವೋ, ಕೋಪಗೊಂಡರೆ ಅಷ್ಟೇ ಭಯಾನಕವಾಗಿರುತ್ತವೆ. ಕಾಡಾನೆಗಳು ಕೂಡ ಇದರ ಹೊರತಾಗಿಲ್ಲ. ಕಾಡಾನೆಗಳ ಕೋಪಕೊಂಡ್ರೆ ಅವುಗಳು ಎದುರು ಇದ್ದವರನ್ನು ಕೊಂದೇ ಹಾಕುತ್ತವೆ. ಇಂತಹ ಸಾಕಷ್ಟು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇಂತಹ ದೃಶ್ಯಗಳು ಸಹಜವಾಗಿಯೇ ನಮ್ಮ ಎದೆ ಬಡಿತ ಹೆಚ್ಚು ಮಾಡುತ್ತವೆ. ಇಲ್ಲೊಂದು ಕಾಡಾನೆ ಪ್ರವಾಸಿಗರ ವಾಹನವನ್ನು ಕಂಡು ಅಟ್ಯಾಕ್‌ ಮಾಡಲು ಮುಂದಾಗಿದೆ. ಈ ವೇಳೆ ವಾಹನ ಚಾಲಕ ಕೋಪಗೊಂಡು ಮುನ್ನುಗ್ಗಿದ ಆನೆಯನ್ನು ನಿಯಂತ್ರಿಸುವ ಪರಿಯನ್ನು ಕಂಡಾಗ ಅಚ್ಚರಿಯೂ ಆಗುತ್ತದೆ, ಉಸಿರು ನಿಂತಂತಹ ಅನುಭವವೂ ಆಗುತ್ತದೆ…!

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂತಹದ್ದೊಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆಗ ಅಲ್ಲೇ ಆನೆಗಳ ಹಿಂಡು ಕಾಣಿಸುತ್ತದೆ. ಇದನ್ನು ನೋಡಲು ಪ್ರವಾಸಿಗರು ನಿಂತಾಗ ಕೋಪಗೊಂಡ ಆನೆಯೊಂದು ಆ ವಾಹನದತ್ತ ನುಗ್ಗಿ ಬಂದಿತ್ತು. ಇದನ್ನು ಕಂಡು ಪ್ರವಾಸಿಗರಿಗೆ ಜೀವ ಹೋದಂತಹ ಅನುಭವ ಆಗಿರಬಹುದು. ಆದರೆ, ಅನುಭವಿ ಚಾಲಕ ಕೈ ಸನ್ನೆಯ ಮೂಲಕವೇ ಶಬ್ದ ಮಾಡಿ ಆನೆಯನ್ನು ನಿಯಂತ್ರಿಸಿದ್ದರು. ಹೀಗಾಗಿ ಹತ್ತಿರಕ್ಕೆ ಬಂದ ಆನೆ ಅಲ್ಲಿಂದ ಮರಳಿ ಹೋಗಿತ್ತು. ಹೀಗಾಗಿ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೆ, ಭಯಗೊಂಡಿದ್ದ ಪ್ರವಾಸಿಗರನ್ನು ಈ ಅನುಭವಿ ಚಾಲಕ ಸಮಾಧಾನ ಮಾಡುವ ದೃಶ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Shwetha M