ಆಸ್ಪತ್ರೆಗೆ 7 ಕಿ.ಮೀ ನಡೆದುಕೊಂಡು ಹೋದ 9 ತಿಂಗಳ ಗರ್ಭಿಣಿ – ಬಿಸಿಲಿನ ತಾಪಕ್ಕೆ ಜೀವವೇ ಹೋಯ್ತು!

ಆಸ್ಪತ್ರೆಗೆ 7 ಕಿ.ಮೀ ನಡೆದುಕೊಂಡು ಹೋದ 9 ತಿಂಗಳ ಗರ್ಭಿಣಿ – ಬಿಸಿಲಿನ ತಾಪಕ್ಕೆ ಜೀವವೇ ಹೋಯ್ತು!

9 ತಿಂಗಳ ತುಂಬು ಗರ್ಭಿಣಿ. ರಣ ರಣ ಬಿಸಿಲು. ಒಡಲಲ್ಲಿ ಕಂದನನ್ನ ಇಟ್ಟುಕೊಂಡೇ ಆಸ್ಪತ್ರೆಗೆ ಹೆಜ್ಜೆ ಹಾಕಿದ್ಲು. ಕಾಲ್ನಡಿಗೆಯಲ್ಲೇ ಹೋಗಿ ಚೆಕಪ್ ಮಾಡಿಸಿದ್ಲು. ತಾಯಿ, ಮಗು ಆರೋಗ್ಯವಾಗಿರೋದಾಗಿ ವೈದ್ಯರೂ ಹೇಳಿದ್ರು. ಇನ್ನೇನು ಪುಟ್ಟ ಕಂದ ಮಡಿಲು ತುಂಬುತ್ತೆ ಅನ್ನೋ ಕನಸಿನಲ್ಲೇ ಆ ಗರ್ಭಿಣಿ ಮನೆ ಸೇರಿದ್ದಳು. ಆದರೆ ರಣಬಿಸಿಲು ಅವಳ ಜೀವವನ್ನೇ ಹಿಂಡಿದೆ.

ಇದನ್ನೂ ಓದಿ : ‘ಕೊಟ್ಟರೆ ಸಿಎಂ ಹುದ್ದೆ ನೀಡಿ.. ನಾನಂತೂ ಸಚಿವನಾಗಲ್ಲ’ – ಡಿಕೆಶಿ ಹಠದಿಂದ ಹೈಕಮಾಂಡ್ ಗೆ ತಲೆಬಿಸಿ!

ದಿನದಿಂದ ದಿನಕ್ಕೆ ಸೂರ್ಯನ ತಾಪ ಏರುತ್ತಲೇ ಇದೆ. ನೆರೆಯ ಮಹಾರಾಷ್ಟ್ರದಲ್ಲೂ ಕೂಡ ಬಿಸಿಲ ಝಳ ಜೋರಾಗಿದೆ. ಇದೇ ತಾಪಮಾನ ಗರ್ಭಿಣಿಯ ಜೀವ ತೆಗೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಮನೆಗೆ ಹಿಂದಿರುಗಲು ಗ್ರಾಮದಿಂದ 7 ಕಿಮೀ ನಡೆದುಕೊಂಡು (Walk) ಬರುತ್ತಿದ್ದ ಗರ್ಭಿಣಿಯೊಬ್ಬಳು (Pregnant) ಸೂರ್ಯನ ಶಾಖಕ್ಕೆ (Heat Stroke) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಸಾವನ್ನಪ್ಪಿದ ಮಹಿಳೆ. ಈಕೆ 3.5 ಕಿ.ಮೀ ನಡೆದು ಅಲ್ಲಿಂದ ಆಟೋದಲ್ಲಿ ಪ್ರಾಥಮಿಕ ಕೇಂದ್ರಕ್ಕೆ ತೆರಳಿದ್ದಾಳೆ. 9ನೇ ತಿಂಗಳಿನಲ್ಲಿದ್ದ ಮಹಿಳೆಗೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಆಕೆ ಬಿಸಿಲಿನಲ್ಲಿ 3.5 ಕಿಮೀ ಪುನಃ ನಡೆದುಕೊಂಡು ಬಂದಿದ್ದಾಳೆ.

ಬಿಸಿಲಿನಿಂದ ಬಳಲಿದ್ದ ಸೋನಾಲಿಗೆ ಸಂಜೆಯ ನಂತರ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಿಸಿಲಿನ ಶಾಖದಿಂದಾಗಿ ಆಕೆಗೆ ಅನಾರೋಗ್ಯ ಉಂಟಾಗಿದೆ ಎಂದು ದೃಢಪಡಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋನಾಲಿ ಸಾವನ್ನಪ್ಪಿದ್ದಾಳೆ. ಜೊತೆಗೆ ಹೊಟ್ಟೆಯಲ್ಲಿರುವ ಮಗುವು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

suddiyaana