ಮಹಾಕುಂಭದಲ್ಲಿ ರಷ್ಯಾ ಬಾಬಾ- ಭೀಮನಂತಿದೆ 7 ಅಡಿ ಎತ್ತರದ ದೇಹ!
ಆಧುನಿಕ ಕಾಲದ ಪರಶುರಾಮ ಇವರೇನಾ?

ಮಹಾಕುಂಭದಲ್ಲಿ ರಷ್ಯಾ ಬಾಬಾ- ಭೀಮನಂತಿದೆ 7 ಅಡಿ ಎತ್ತರದ ದೇಹ!ಆಧುನಿಕ ಕಾಲದ ಪರಶುರಾಮ ಇವರೇನಾ?

ಕಟ್ಟುಮಸ್ತಾದ ದೇಹ, ಮುಖದಲ್ಲಿ ಹೊಳೆಯುವ ಕಾಂತಿ ಹೊಂದಿರುವ ಈ ಬಾಬಾ ನೋಡಿದಾಕ್ಷಣ ಒಮ್ಮೆ ಮಹಾಭಾರತದ ಭೀಮ ಕಣ್ಮುಂದೆ ಬಂದು ಹೋದಂತಾಗುತ್ತದೆ. ಮಸ್ಕ್ಯೂಲರ್ ಬಾಬಾ ಎಂದೇ ಜನಪ್ರಿಯವಾಗಿರುವ ಆತ್ಮ ಪ್ರೇಮ ಗಿರಿ ಮಹಾರಾಜ್​. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಕೆಲವರು ಇವರಿಗೆ ಭೀಮ ಎಂದು ಕರೆದರೆ, ಮತ್ತೆ ಕೆಲವರು ಪರಶುರಾಮ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ: ಸೈಫ್ ಕುಟುಂಬದ ಆಸ್ತಿ ಸರ್ಕಾರಕ್ಕೆ? 15000 ಕೋಟಿ ಆಸ್ತಿ ಕೈ ಬಿಡುತ್ತಾ?

ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿರುವ ಪ್ರೇಮ ಗಿರಿ ಮಹಾರಾಜ ಎಂಬ ಈ ಸಾಧು ಬರೋಬ್ಬರಿ 7 ಅಡಿ ಎತ್ತರವಿದ್ದಾರೆ . ಇವರನ್ನು ಪ್ರೀತಿಯಿಂದ ಮಸ್ಕ್ಯುಲರ್ ಬಾಬಾ ಎಂದು ಕೂಡ ಕರೆಯುತ್ತಾರೆ. ಕಾರಣ ಇವರ ಎತ್ತರ ಹಾಗೂ ಕುಸ್ತಿಪಟುವಿನಂತ ಮೈಕಟ್ಟು. ಮೂಲತಃ ರಷ್ಯಾದವರಾದ ಈ ಪ್ರೇಮಗಿರಿ ಮಹಾರಾಜ ಅವರು ಸುಮಾರು 30 ವರ್ಷಗಳಿಂದ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ರಷ್ಯಾದಲ್ಲಿ ಉಪನ್ಯಾಸಕ ವೃತ್ತಿ ಮಾಡಿಕೊಂಡಿದ್ದ ಈ ಬಾಬಾ ಹಿಂದೂ ಧರ್ಮದಿಂದ ಪ್ರಭಾವಿತರಾಗಿ ಕಳೆದ ಮೂವತ್ತು ವರ್ಷಗಳಿಂದ ಆಧಾತ್ಮ ಲೋಕದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ನೇಪಾಳದಲ್ಲಿ ನೆಲೆಸಿರುವ ಬಾಬಾ ಈಗ ಮಹಾಕುಂಭಮೇಳಕ್ಕೆ ಆಗಮಿಸಿದ್ದು. ಕುಂಭಮೇಳದಲ್ಲಿ ಪ್ರಮುಖ ಆಕರ್ಷಣಿಯವಾಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ಆತ್ಮ ಪ್ರೇಮ ಗಿರಿ ಇನ್​​ಸ್ಟಾ ಪ್ರೋಫೈಲ್​ ವೈರಲ್​ ಆಗಿದೆ. ಇವರ ದೇಹ ನೋಡಿದ ಅನೇಕರು ಬೆರಗಾಗಿದ್ದಾರೆ. ಇವರು ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದು ಕಂಡಿದ್ದು, ಆಹಾರ ಮತ್ತು ಪಾನೀಯ ವಿಚಾರದಲ್ಲಿ ಕೂಡ ಇವರು ಹೆಚ್ಚಿನ ಗಮನ ಹೊಂದಿದ್ದಾರೆ. ಹರ ಹರ ಮಹದೇವ್ ಘೋಷಣೆಯೊಂದಿಗೆ ಸಕ್ರಿಯವಾಗಿ ಮಹಾಕುಂಭ ಮೇಳದಲ್ಲಿ ಪೇಮ್ ಗಿರಿ ಮಹಾರಾಜ್ ಪಾಲ್ಗೊಂಡಿದ್ದಾರೆ. ಪ್ರೇಮ್ ಗಿರಿ ಮಹಾರಾಜ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬೆನ್ನಲ್ಲೇ ಭಾರಿ ಜನಪ್ರಿಯರಾಗಿದ್ದಾರೆ. ಪ್ರೇಮ್ ಗಿರಿ ಮಹಾರಾಜ್ ಪ್ರತಿ ದಿನ ಹಿಂದೂ ಧರ್ಮದ ಆಚರಣೆ, ಪದ್ಧತಿಗನ್ನು ಅನುಸರಿಸುತ್ತಾರೆ. ಜೊತಗೆ ಪ್ರತಿ ದಿನ ವ್ಯಾಯಾಮ ಮಾಡಿ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟಿದ್ದಾರೆ. ಮಸ್ಕ್ಯುಲರ್ ಬಾಬಾರನ್ನು ಹಲವು ಭಕ್ತರು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಐತಿಹಾಸಿಕ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದು ಪ್ರೇಮ್ ಗಿರಿ ಮಹಾರಾಜ್ ಹೇಳಿದ್ದಾರೆ. ಒಟ್ನಲ್ಲಿ ಕುಂಭ ಮೇಳದಲ್ಲಿ ಸಾಕಷ್ಟು ಜನ ವಿಶೇಷ ವ್ಯಕ್ತಿಗಳು ಕಾಣುತ್ತಿದ್ದು, ಇಂತಹವರನ್ನ ನೋಡಿದಾಗ ನಮ್ಮ ನೆಲ, ಸಂಸ್ಕೈತಿ, ಆಚರಣೆ ಮೇಲೆ ಮತ್ತಷ್ಟು ಹೆಮ್ಮೆ ಬರುತ್ತೆ.

Kishor KV

Leave a Reply

Your email address will not be published. Required fields are marked *