4 ವರ್ಷದ ಬಾಲಕಿ ಆಟಕ್ಕೆ ಧೋನಿ ಫಿದಾ!- ಮಂದಾನ ಸ್ಟೈಲ್.. ಕ್ರಿಕೆಟ್ ಲೋಕವೇ ಮೆಚ್ಚಿದ ಶ್ರೇಯಾ ಯಾರು?

ಈಕೆ ವಯಸ್ಸು ಜಸ್ಟ್ 4.. ಆದ್ರೆ ಈ ಪುಟಾಣಿ ಬ್ಯಾಟಿಂಗ್ ಮೂಲಕವೇ ಎಲ್ಲರನ್ನ ಕೂಡ ಮೋಡಿ ಮಾಡಿದ್ದಾಳೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಈ ಬಾಲಕಿಯ ಬ್ಯಾಟಿಂಗ್ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪುಟ್ಟ ಹುಡುಗಿ ಬ್ಯಾಟಿಂಗ್ ಮಾಡೋ ವಿಡಿಯೋ ಟ್ರೆಂಡ್ ಸೆಟ್ ಮಾಡಿದೆ.
ಇದನ್ನೂ ಓದಿ: Rankingನಲ್ಲೂ ಜಾರಿಬಿದ್ದ ಸೂರ್ಯ – T-20 ವಿಶ್ವಕಪ್ ಕೊನೇ ಅಗ್ನಿಪರೀಕ್ಷೆ
ಈಗೇನಿದ್ರೂ ಆನ್ಲೈನ್ ಗೇಮ್ ಜಮಾನ. ಮೈದಾನದಲ್ಲಿ ಮಕ್ಕಳು ಆಡೋದೆ ಕಡಿಮೆ ಆಗಿದೆ. ಆದ್ರೆ ಇಲ್ಲೊಂದು ಪುಟ್ಟ ಪ್ರತಿಭೆ ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟಿದೆ. ಆಕೆ ಬ್ಯಾಟ್ ಬೀಸೋ ಸ್ಟೈಲ್ಗೆ ಇಡೀ ಕ್ರಿಕೆಟ್ ಲೋಕವೇ ಫಿದಾ ಆಗಿದೆ. 4 ವರ್ಷದ ಶ್ರೇಯಾ ಕೆ ಸಿಂಗ್ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳು ಮಾತ್ರ ಅಲ್ಲ ಎಂ ಎಸ್ ಧೋನಿ ಕೂಡ ಥ್ರಿಲ್ ಆಗಿದ್ದಾರೆ.
ಕಳೆದ ಕೆಲ ದಿನಗಳಿಂದ ಶ್ರೇಯಾ ಕೆ ಸಿಂಗ್ ಎಂಬ ಹುಡುಗಿ ಕ್ರಿಕೆಟ್ ಆಡೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಈಕೆ ಒಂದೊಂದು ಬಾಲ್ನ್ನು ಕೂಡ ಮೈದಾನಕ್ಕೆ ಅಟ್ಟುವ ಶೈಲಿ ಬಹಳ ವಿಭಿನ್ನವಾಗಿದೆ. ಶ್ರೇಯಾ ಬ್ಯಾಟಿಂಗ್ ಸ್ಟೈಲ್ ಗೆ ಕೂಲ್ ಕ್ಯಾಪ್ಟನ್ ಫಿಲ್ ಫಿದಾ ಆಗಿದ್ದಾರೆ. ಪುಟಾಣಿ ಬ್ಯಾಟಿಂಗ್ಗೆ ಮಾಹಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೋಗೆ ವಾಹ್ ಎಂದು ಬರೆದು ಹಾರ್ಟ್ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
shreyaksingh.28 ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಶ್ರೇಯಾ ಕ್ರಿಕೆಟ್ ಅಭ್ಯಾಸ ಮಾಡುವ ವಿಡಿಯೋಗಳನ್ನ ಅಪ್ಲೋಡ್ ಮಾಡಲಾಗಿದೆ. ಇದ್ರಲ್ಲಿ ಶ್ರೇಯಾ ಕ್ರಿಕೆಟ್ ಆಡುತ್ತಿರುವ ವಿಭಿನ್ನ ಶೈಲಿಯ ಹಲವು ವಿಡಿಯೋಗಳನ್ನ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗಳನ್ನ ನೋಡಿದಾಗ ಶ್ರೇಯಾ ಸೀರಿಯಸ್ ಆಗಿ ಪ್ರ್ಯಾಕ್ಟಿಸ್ ಮಾಡ್ತಿದ್ದಾಳೆ ಅನ್ನೋದು ಗೊತ್ತಾಗುತ್ತೆ. ಸದ್ಯ ಆಝೆ ಕ್ರಿಕೆಟ್ ಕೋಚಿಂಗ್ಗೆ ಹೋಗ್ತಾ ಇದ್ದಾಳೆಂತೆ. ಮನೆಯಿಂದ 15 ಕಿಲೋಮೀಟರ್ನಲ್ಲಿ ಕ್ರಿಕೆಟ್ ತರಬೇತಿ ಕೇಂದ್ರ ಇದೆ. ಪ್ರತಿದಿನ ಕ್ರಿಕೆಟ್ ಪ್ರಾಕ್ಟಿಸ್ಗಾಗಿ ಮುಂಜಾನೆ 6 ಗಂಟೆಗೆ ಮೈದಾನಕ್ಕೆ ಹೋಗ್ತಾಳೆ. ಸುಮಾರು ಒಂದು ಕಿಲೋಮೀಟರ್ ವಾಕ್ ಮಾಡಿ ಬಳಿಕ ಅಭ್ಯಾಸ ಶುರು ಮಾಡುತ್ತಾಳೆ ಎಂದು ಹೇಳಲಾಗ್ತಿದೆ. ಆದ್ರೆ ಆಕೆ ಯಾವ ಊರಿನವಳು? ಆಕೆಯ ತಂದೆ ತಾಯಿ ಯಾರು ಅನ್ನೋದು ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಸದ್ಯ ಈಕೆ ಪ್ರ್ಯಾಕ್ಟಿಸ್ ಮಾಡ್ತಿರೋ ವೀಡಿಯೋ ವೈರಲ್ ಆಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತ ಖಾತೆಯಿಂದಲೂ ಕಾಮೆಂಟ್ ಬಂದಿದೆ.
ಇನ್ನು ಶ್ರೇಯಾ ಕ್ರಿಕೆಟ್ ಅಭ್ಯಾಸದ ವಿಡಿಯೋಗೆ ಕ್ರಿಕೆಟ್ ಪ್ರೇಮಿಗಳು ನಾನಾ ಕಮೆಂಟ್ ಮಾಡ್ತಿದ್ದಾರೆ. ಈಕೆ ದೇಹದ ಸಮತೋಲನ ಚೆನ್ನಾಗಿದೆ. ಬಾಲ್ ಮೇಲೆ ಇಟ್ಟ ಗುರಿ ಸೂಪರ್.. ಪರಿಪೂರ್ಣ ಪಾದಗಳ ಚಲನೆ ಸೂಪರ್.. ವಿರಾಟ್ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಾ ಇದ್ದಾಳೆ. ನಮ್ಮ ಕ್ರಿಕೆಟ್ನ ಭವಿಷ್ಯ ಇಲ್ಲಿದೆ.. ಜೂನಿಯರ್ ಸೃತಿ ಮಂದಾನಾ, ಜೂನಿಯರ್ ಹರ್ಮನ್ ಪ್ರೀತ್ ಕೌರ್ ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಟೀಮ್ ಇಂಡಿಯಾ ಪೇಜ್, ಭಾರತದ ಆಟಗಾರರ ಅಧಿಕೃತ ಪೇಜ್ಗೆ ಶ್ರೇಯಾ ಪ್ರ್ಯಾಕ್ಟಿಸ್ ಮಾಡ್ತಿರೋ ವಿಡಿಯೋ ಟ್ಯಾಗ್ ಮಾಡಿ ಆಕೆಯ ಮೇಲೆ ನಿಗಾ ಇಡಿ ಎಂದು ಕ್ರಿಕೆಟ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಒಟ್ಟಾರೆ ಈ ಪೋರಿ ಈಗ ತನ್ನ ಪ್ರತಿಭೆಯಿಂದಲೇ ನೆಟ್ಟಿಗರ ಮನಗೆದ್ದಿದ್ದಾಳೆ. ಹೀಗೆ ಶ್ರೇಯಾ ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ಮುಂದೊಂದು ದಿನ ಸ್ಟಾರ್ ಕ್ರಿಕೆಟರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ನೋಡಿರಿ

