39 ವರ್ಷಕ್ಕೆ ಅಜ್ಜಿಯಾದ ಮಹಿಳೆ! – ವೈರಲ್ ಆಯ್ತು ಅಜ್ಜಿ ಮೊಮ್ಮಗುವಿನ ಫೋಟೋ!

ಅಜ್ಜಿ ಅಂದಾಗ ನಮಗೆ ನೆನಪಾಗೋದೇ ಬಿಳಿ ಕೂದಲು, ಬಾಗಿದ ಬೆನ್ನು.. ಅಯ್ಯೋ ವಯಸ್ಸಾಯ್ತು ಅಂತಾ ಹೇಳೋರೇ ಜಾಸ್ತಿ.. ಆದ್ರೆ ಇಲ್ಲೊಬ್ಬಳು, ಸಣ್ಣ ವಯಸ್ಸಲ್ಲೇ ಅಜ್ಜಿ ಅಂತಾ ಕರೆಸಿಕೊಂಡಿದ್ದಾಳೆ.. ತನ್ನ ಮೊಮ್ಮಗುವಿನ ಜೊತೆ ಫೋಟೋ ತೆಗೆಸಿಕೊಂಡಿದ್ದು, ಅದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸೇಫ್ ಆಗಿ ಭೂಮಿಗೆ ಲ್ಯಾಂಡ್ ಆದ ಸುನಿತಾ ವಿಲಿಯಮ್ಸ್ – ನುಡಿದಂತೆ ನಡೆದಿದ್ದೇವೆ ಎಂದ ಟ್ರಂಪ್!
ಚೀನಾದ ಈಶಾನ್ಯ ಪ್ರಾಂತ್ಯದ ಅನ್ಹುಯಿಯ ಸುಚೌವ್‌ನಿಂದ ಬಂದ ಯುವತಿ ಸಣ್ಣ ವಯಸ್ಸಿಗೆ ಅಜ್ಜಿ ಅಂತಾ ಕರೆಸಿಕೊಂಡಿದ್ದಾಳೆ. 39ನೇ ವಯಸ್ಸಿನಲ್ಲಿ ಅಜ್ಜಿಯಾದ ಈಕೆ, ಮೊಮ್ಮಗುವಿನ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಫೋಟೋ ಮತ್ತು ವಿಡಿಯೋ ನೋಡಿದವರೆಲ್ಲಾ ಆಕೆ ಅಜ್ಜಿಯಲ್ಲ, ಮಗುವಿನ ಅಮ್ಮ ಅಂತ ಅಂದುಕೊಂಡಿದ್ರು.. ಆದ್ರೆ ಆಕೆಯ ಸ್ನೇಹಿತೆಯ ಕಾಮೆಂಟ್ ನಿಂದ ಗೊತ್ತಾಗಿದ್ದು, ಆ ಮಗು, ಆಕೆಯ ಮೊಮ್ಮಗು ಎಂದು.
1985ರಲ್ಲಿ ಹುಟ್ಟಿದ ಯುವತಿ ವೈರಲ್ ಆದ ಫೋಟೋದಲ್ಲಿ ಇದ್ದಾರೆ ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ. ಅಂದ್ರೆ ಆ ಯುವತಿಗೆ ಈಗ 39 ವರ್ಷ ವಯಸ್ಸು. ಕೂದಲು ಪೋನಿಟೆಲ್ ಹಾಕಿ, ಸ್ವಲ್ಪ ಮೇಕಪ್ ಹಾಕೊಂಡು, ಯಂಗ್ ಆಗಿರೋ ತರ ಕಾಣೋ ಯುವತಿ ತನ್ನ ಮೊಮ್ಮಗುವಿಗೆ ನಗುತ್ತಾ ಊಟ ಬಡಿಸುತ್ತಿರೋ ಫೋಟೋ, ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಗುವನ್ನ ಎತ್ತಿಕೊಂಡು ಮನೆಯ ಕೆಲಸ ಮಾಡೋದು, ಮಗುವಿನ ನ್ಯಾಪ್ಕಿನ್ ಚೇಂಜ್ ಮಾಡೋದು, ಅವನ ಬೇರೆ ಅವಶ್ಯಕತೆಗಳಿಗೆ ಮತ್ತು ಊಟ ಮಾಡೋಕೆ ಓಡಾಡೋ ಯುವತಿಯನ್ನ ನೋಡಬಹುದು.
ಆದ್ರೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಬಗ್ಗೆ ವರದಿಯೊಂದನ್ನ ಮಾಡಿದೆ. ಮಹಿಳೆಗೆ ಇದು ಮೊದಲ ಮೊಮ್ಮಗು ಅಂತ ವರದಿ ಮಾಡಿದೆ. ವೈರಲ್ ಆದ ವಿಡಿಯೋದಲ್ಲಿ ಯುವತಿಯ ಸೊಸೆ ಕಾಣಿಸಿಕೊಂಡಿದ್ದಾರೆ. ಇದೀಗ ಇಬ್ಬರ ವಯಸ್ಸೆಷ್ಟು ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಇದು ಸುಳ್ಳು ಸುದ್ದಿ, ಸಂಬಂಧದಲ್ಲಿ ಆಕೆ ಅಜ್ಜಿ ಅಂತಾ ಕರೆಸಿಕೊಂಡಿರ್ಬೋದು.. ಆಕೆಯ ಮಕ್ಕಳಿಗೆ ಇನ್ನೂ ಮದುವೆ ಆಗಿರ್ಲಿಕ್ಕಿಲ್ಲ ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಆದ್ರೆ ಆ ಯುವತಿಯ ಸ್ನೇಹಿತೆ, ನಾನು ಕೂಡ ಅವಳ ವಯಸ್ಸಿನವಳೇ. ಆದರೆ, ಇನ್ನೂ ನನಗೆ ಇನ್ನೂ ಮದುವೆ ಆಗಿಲ್ಲ. ಅವಳು ಈಗ ಅಜ್ಜಿಯಾದ್ಲು ಅಂತಾ ಕಾಮೆಂಟ್ ಮಾಡಿದ್ದಾರೆ.