ಸಿಲಿಕಾನ್ ಸಿಟಿಯಲ್ಲಿ ತುಂಬು ಗರ್ಭಿಣಿ ಅನುಮಾನಾಸ್ಪದ ಸಾವು – ಗಂಡನೇ ಕೊ*ದ್ನಾ?

ಸಿಲಿಕಾನ್ ಸಿಟಿಯಲ್ಲಿ ತುಂಬು ಗರ್ಭಿಣಿ ಅನುಮಾನಾಸ್ಪದ ಸಾವು – ಗಂಡನೇ ಕೊ*ದ್ನಾ?

ಬೆಂಗಳೂರಿನಲ್ಲಿ ತುಂಬು ಗರ್ಭಿಣಿಯೊಬ್ಬರು  ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.  ನೇಪಾಳ ಮೂಲದ ಸವಿತಾ ಮತ್ತು ಹೇಮರಾಜು ದಂಪತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು, ಆದರೆ  ಸವಿತಾ ಇದ್ದಕ್ಕಿದ್ದಂತೆ  ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಈ ಘಟನೆ ನಡೆದಿದೆ.

ಮೃತಳನ್ನು 21 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಮಗು ಸಮೇತ ಸವಿತಾ ಮೃತಪಟ್ಟಿದ್ದು, ಆಕೆಯ ಪತಿ ಹೇಮರಾಜು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನೇಪಾಳ ಮೂಲದ ಸವಿತಾ ಮತ್ತು ಹೇಮರಾಜು ದಂಪತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಹಳೆ ಚಂದಾಪುರದಲ್ಲಿ ವಾಸವಿದ್ದರು. ಸವಿತಾ ಈಗ ತುಂಬು ಗರ್ಭಿಣಿಯಾಗಿದ್ದರು. ಆದರೆ ಇದೀಗ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಸವಿತಾ ಪತಿಯ ವಿರುದ್ಧ ಕುಟುಂಬಸ್ಥರು ಸಾಲು ಸಾಲು ಆರೋಪ ಮಾಡಿದ್ದಾರೆ. ಆತನೇ ಮಗಳನ್ನು ಕೊಂದಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಅಜ್ಜಿ, ಮಾನ, ಅಮ್ಮನನ್ನ ಕೊಂದು ತಾನು ಸೂ*ಸೈಡ್- ತ್ರಿಬಲ್ ಮ*ರ್ಡರ್‌ಗೆ ಬೆಚ್ಚಿ ಬಿದ್ದ ಬೆಂಗಳೂರು

ಸವಿತಾ ಸಾವಿಗೆ ಪತಿ ಹೇಮರಾಜು ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಇದು ಕೊಲೆಯೇ, ಸಹಜ ಸಾವೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೂರ್ಯನಗರ ಪೊಲೀಸರು ಆರೋಪಿ ಹೇಮರಾಜುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Kishor KV

Leave a Reply

Your email address will not be published. Required fields are marked *