ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ – ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ

ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ – ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ

ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಜೀವನಪೂರ್ತಿ ನೋವು ಅನುಭವಿಸುವ ಹಾಗಾಗಿದೆ ಬೆಂಗಳೂರು ಜಲಮಂಡಳಿ ಮಾಡಿರುವ ಕೆಲಸ. ಜಲಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ದಾರುಣವಾಗಿ ಬಲಿಯಾಗಿದೆ.

ಇದನ್ನೂ ಓದಿ: ಆ್ಯಕ್ಸಿಡೆಂಟ್ ಹಾಟ್ ಸ್ಪಾಟ್ ಆಗುತ್ತಿದ್ಯಾ ಸಿಲಿಕಾನ್ ಸಿಟಿ? – 3 ತಿಂಗಳಲ್ಲಿ ಅಪಘಾತಕ್ಕೆ ಬಲಿಯಾದವರೆಷ್ಟು?

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಕಾಮಗಾರಿಗೆ ಎಂದು ಗುಂಡಿಯನ್ನು ತೆರೆಯಲಾಗಿತ್ತು. ಆದರೆ, ಅಧಿಕಾರಿಗಳಿಗೆ ಅದೇನ್ ಅರ್ಜೆಂಟ್ ಕೆಲಸವಿತ್ತೋ.. ಇಲ್ಲ.. ಕಾಮಗಾರಿ ಮುಗಿದಾಯ್ತು.. ನಮ್ಮ ಕೆಲಸ ಇಷ್ಟೇ ಅನ್ನುವ ಬೇಜವಬ್ದಾರಿಯೋ.. ಕಾಮಗಾರಿಗೆ ತೆಗೆದಿದ್ದ ಗುಂಡಿಯನ್ನು ಮುಚ್ಚದೇ ನಿರ್ಲಕ್ಷ್ಯವಹಿಸಿದ್ದಾರೆ. ಇದೇ ಗುಂಡಿಗೆ ಕಾರ್ತಿಕ್ ಎಂಬ 2 ವರ್ಷದ ಮಗು ಬಿದ್ದು ಸಾವನ್ನಪ್ಪಿದೆ. ಹನುಮಾನ್ ಮತ್ತು ಹಂಸ ದಂಪತಿಯ ಮುದ್ದು ಮಗ ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಬೇಜವಬ್ದಾರಿಗೆ ಬಲಿಯಾಗಿದ್ದಾನೆ. ಕಾಮಗಾರಿಗೆ ಎಂದು ತೆಗೆದಿದ್ದ ಗುಂಡಿ ಮುಚ್ಚದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಹನುಮಾನ್, ಹಂಸ ದಂಪತಿ ಆರೋಪ ಮಾಡಿದ್ದಾರೆ. ಜಲಮಂಡಳಿ ಇಂಜಿನಿಯರ್, ಕಾಂಟ್ರ್ಯಾಕ್ಟರ್ ವಿರುದ್ಧ ಕೇಸ್ ದಾಖಲಾಗಿದ್ದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddiyaana