ಮೋದಿ ಉದ್ಘಾಟಿಸಿದ್ದ ಮೆಟ್ರೋ ನಿಲ್ದಾಣ ಜಲಾವೃತ – ಧಾರಾಕಾರ ಮಳೆಗೆ ಬಯಲಾಯ್ತು ಬಣ್ಣ

ಮೋದಿ ಉದ್ಘಾಟಿಸಿದ್ದ ಮೆಟ್ರೋ ನಿಲ್ದಾಣ ಜಲಾವೃತ – ಧಾರಾಕಾರ ಮಳೆಗೆ ಬಯಲಾಯ್ತು ಬಣ್ಣ

ಬೆಂಗಳೂರು: ಕಳೆದ ವಾರವಷ್ಟೇ ಪ್ರಧಾನಿ ಮೋದಿ ಬೆಂಗಳೂರಿನ ನಲ್ಲೂರುಹಳ್ಳಿಯಲ್ಲಿ ಹೊಸ ಮೆಟ್ರೋ ಲೈನ್​ನನ್ನ ಉದ್ಘಾಟನೆ ಮಾಡಿದ್ರು. ಆದ್ರೀಗ ಅಕಾಲಿಕ ಮಳೆಯಾಗುತ್ತಲೇ ಮೆಟ್ರೋ ನಿಲ್ದಾಣದೊಳಗೆ ನೀರು ತುಂಬಿಕೊಂಡಿದೆ. ಮೆಟ್ರೋ ನಿಲ್ದಾಣದ ಪ್ಲಾಟ್​ಫಾರ್ಮ್ ಸೇರಿದಂತೆ ಟಿಕೆಟ್ ಕೌಂಟರ್​​ ಎಲ್ಲವೂ ಜಲಾವೃತವಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಕೇಸ್ – ಆನ್ ಲೈನ್ ನಲ್ಲೇ ವಾದ ಮಂಡಿಸಿ ಎಂದ ಸುಪ್ರೀಂ ಜಡ್ಜ್

ಈಗಲೇ ಪರಿಸ್ಥಿತಿ ಹೀಗಾದ್ರೆ ಮಳೆಗಾಲದಲ್ಲಿ ಕಥೆಯೇನು ಅಂತಾ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹಲವು ಮಂದಿ ಮೆಟ್ರೋ ಕಾಮಗಾರಿಯಲ್ಲಾಗಿರುವ ಲೋಪದೋಷವನ್ನ ಪ್ರಶ್ನಿಸಿ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ನಿರ್ಮಿಸಲಾಗಿರುವ ಕೆಆರ್ ಪುರಂ – ಬೈಯ್ಯಪ್ಪನ ಹಳ್ಳಿ ಮೆಟ್ರೋ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು. ಮೊದಲ ದಿನವೇ ಸುಮಾರು 16 ಸಾವಿರಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

suddiyaana