ಮಾಜಿ ಪ್ರೇಯಸಿ ಮದುವೆಗೆ ಬಾಂಬ್ ಇಟ್ಟು ಗಿಫ್ಟ್ ಕೊಟ್ಟ ಮಾಜಿ ಪ್ರಿಯಕರ – ಮುಂದೇನಾಯ್ತು ಗೊತ್ತಾ?
ಛತ್ತೀಸ್ ಗಢ: ಯುವತಿಯೊಬ್ಬಳ ಮಾಜಿ ಪ್ರಿಯಕರ ಕೊಟ್ಟ ಗಿಫ್ಟ್ನಿಂದಾಗಿ ಆಕೆಯ ಪತಿ ಮತ್ತು ಸಹೋದರನೇ ಬಲಿಯಾಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಹೇಮೇಂದ್ರ ಮೇರಾವಿ ಎಂಬಾತ ತನ್ನ ವಿವಾಹದಲ್ಲಿ ಪತ್ನಿಗೆ ಉಡುಗೊರೆಯಾಗಿ ಸಿಕ್ಕ ಥಿಯೇಟರ್ ಮ್ಯೂಸಿಕ್ ಸಿಸ್ಮ್ ಅನ್ನು ಮನೆಗೆ ಕೊಂಡೊಯ್ದಿದ್ದ. ಬಳಿಕ ಸಹೋದರ ಮ್ಯೂಸಿಕ್ ಸಿಸ್ಟಮ್ನ್ನ ಪ್ಲಗ್ಗೆ ಕನೆಕ್ಟ್ ಮಾಡಿ ಸ್ವಿಚ್ ಆನ್ ಮಾಡುತ್ತಲೇ ಮ್ಯೂಸಿಕ್ ಸ್ಟಿಸಮ್ ಸ್ಫೋಟಗೊಂಡಿದೆ.
ಇದನ್ನೂ ಓದಿ:ಉತ್ಸವದ ವೇಳೆ ನಡೆಯಿತು ದುರಂತ – ದೇವಸ್ಥಾನದ ಕೊಳದಲ್ಲಿ ಮುಳುಗಿ 5 ಮಂದಿ ಸಾವು
ಸ್ಫೋಟದ ತೀವ್ರತೆಗೆ ಮನೆಯ ಚಾವಣಿಯೇ ಕುಸಿದು ಬಿದ್ದಿದೆ. ಅಷ್ಟೇ ಅಲ್ಲದೇ ಆಗಷ್ಟೇ ವಿವಾಹವಾದ ಹೇಮೇಂದ್ರ ಮತ್ತು ಆತನ ಸಹೋದರ ಮೃತಪಟ್ಟಿದ್ದಾರೆ. ತನಿಖೆ ವೇಳೆ, ಯುವತಿಯ ಮಾಜಿ ಪ್ರಿಯಕರ ಸ್ಫೋಟಕ ತುಂಬಿದ್ದ ಮ್ಯೂಸಿಕ್ ಸ್ಟಿಸ್ಟಮ್ನ್ನ ಆಕೆಗೆ ಉಡುಗೊರೆಯಾಗಿ ನೀಡಿರೋ ವಿಚಾರ ಗೊತ್ತಾಗಿದೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಎಪ್ರಿಲ್ 1 ರಂದು ಹೇಮೇಂದ್ರ ಮೆರಾವಿ ಅವರ ವಿವಾಹವಾಗಿದ್ದು ಈ ವೇಳೆ ಸಾಕಷ್ಟು ಉಡುಗೊರೆಗಳು ಬಂದಿತ್ತು. ಮದುವೆಯ ಕಾರ್ಯಕ್ರಮಗಳು ಮುಗಿದ ಬಳಿಕ ಅಂದರೆ ಸೋಮವಾರ ಮನೆಮಂದಿ ಸೇರಿಕೊಂಡು ಮದುವೆಗೆ ಬಂದಿರುವ ಉಡುಗೊರೆಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಕೂಡಾ ಬಂದಿತ್ತು. ಮದುಮಗ ಹಾಗೂ ಆತನ ಸಹೋದರ ಸೇರಿ ಹೋಮ್ ಥಿಯೇಟರ್ ನ ವಯರ್ ಸೆಟ್ ಮಾಡಿ ಪ್ಲಗ್ ಸ್ವಿಚ್ ಹಾಕಿದ ಕೂಡಲೆ ಹೋಮ್ ಥಿಯೇಟರ್ ಸ್ಪೋಟಗೊಂಡಿದೆ. ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟರೆ ಸಹೋದರ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.