ಕಿಮ್ ಮತ್ತು ಲಿಯಾಂಡರ್ ಬ್ರೇಕಪ್ ? – ಟೆನಿಸ್ ಆಟಗಾರನಿಂದ ಬಾಲಿವುಡ್ ನಟಿ ದೂರ?
ಭಾರತದ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಬಾಲಿವುಡ್ ತಾರೆ ಕಿಮ್ ಶರ್ಮಾ ನಡುವೆ ಬ್ರೇಕಪ್ ಆಗಿದೆ ಎನ್ನಲಾಗ್ತಿದೆ. ಅವರಿಬ್ಬರೂ ಕಳೆದ 2 ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು ಎಂದು ಹೇಳಲಾಗುತ್ತಿತ್ತು. ಇದೀಗ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇತ್ತೀಚೆಗೆ, ನಟಿ ಕಿಮ್ ಶರ್ಮಾ ಮತ್ತು ಲಿಯಾಂಡರ್ ಪೇಸ್ ಈವೆಂಟ್ಗಳು ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಲಿಯಾಂಡರ್ ಪೇಸ್ ಜೊತೆಗಿನ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಕಿಮ್ ಶರ್ಮಾ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ನಟಿ ಪರಿಣಿತಿ ಚೋಪ್ರಾ, ಆಪ್ ನಾಯಕ ರಾಘವ್ ಚಡ್ಡಾ ನಡುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ?
ಕಿಮ್ ಮತ್ತು ಲಿಯಾಂಡರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಆಗಸ್ಟ್ 2021 ರಲ್ಲಿ ಗೋವಾದಲ್ಲಿ ಅವರ ಫೋಟೋಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಾಗ ಹೊರಬಂದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಓಪನ್ ಆಗಿದ್ದರು ಮತ್ತು ಆಗಾಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. 2022 ರ ದೀಪಾವಳಿಯಲ್ಲಿ, ಲಿಯಾಂಡರ್ ಪೇಸ್ ಅವರು ಪೂಜೆ ಮಾಡಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ, ಟೆನ್ನಿಸ್ ಆಟಗಾರನ ಜತೆಗೆ ಕಿಮ್ ಶರ್ಮಾ ಸಹ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರು ತಮ್ಮ ವಾರ್ಷಿಕೋತ್ಸವವನ್ನು ಒಟ್ಟಿಗೆ ಆಚರಿಸುವ ಕೆಲವು ಚಿತ್ರಗಳನ್ನು ಸಹ ಪೋಸ್ಟ್ ಮಾಡಿಕೊಂಡಿದ್ದರು. “ವಾರ್ಷಿಕೋತ್ಸವದ ಶುಭಾಶಯಗಳು ಮಿಚ್. 365 ದಿನಗಳ ನೆನಪುಗಳಿಗಾಗಿ ಮತ್ತು ಜೀವನದ ಒಲವನ್ನು ಪ್ರತಿದಿನ ಒಟ್ಟಿಗೆ ಸವಾರಿ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಬರೆದಿದ್ದರು.
ಲಿಯಾಂಡರ್ ಪೇಸ್ಗಿಂತ ಮೊದಲು ಕಿಮ್, ಹಸೀನ್ ದಿಲ್ರುಬಾ ನಟ ಹರ್ಷವರ್ಧನ್ ರಾಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಹಾಗೆ, ಭಾರತೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರೊಂದಿಗೂ ರಿಲೇಷನ್ಶಿಪ್ನಲ್ಲಿದ್ದರು. ಇನ್ನು, ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಮೊದಲಿಗೆ ಮಹಿಮಾ ಚೌಧರಿಯನ್ನು ಮದುವೆಯಾಗಿದ್ದರು. ಬಳಿಕ ಅವರಿಗೆ ವಿಚ್ಛೇದನ ನೀಡಿ ನಟ ಸಂಜಯ್ದತ್ರ ಮಾಜಿ ಪತ್ನಿ ರಿಯಾ ಪಿಳ್ಳೈ ಜೊತೆ ಹಲವು ವರ್ಷ ಜೀವನ ನಡೆಸಿದ್ದರು. 2014ರಲ್ಲಿ ರಿಯಾರಿಂದಲೂ ದೂರವಾಗಿದ್ದ ಪೇಸ್ 2021ರಲ್ಲಿ ಕಿಮ್ ಜೊತೆ ಕಾಣಿಸಿಕೊಂಡಿದ್ದರು. ಅಂದಿನಿಂದಲೂ ಇಬ್ಬರು ಲಿವ್ಇನ್ ಸಂಬಂಧದಲ್ಲಿ ಇದ್ದರು ಎನ್ನಲಾಗಿದೆ.