‘ದಿ ಎಲಿಫೆಂಟ್​ ವಿಸ್ಪರರ್ಸ್​’ ಖ್ಯಾತಿಯ ಬೆಳ್ಳಿ-ಬೊಮ್ಮನ್​ ದಂಪತಿಯನ್ನು ಭೇಟಿ ಮಾಡಲಿದ್ದಾರೆ ಪ್ರಧಾನಿ

‘ದಿ ಎಲಿಫೆಂಟ್​ ವಿಸ್ಪರರ್ಸ್​’ ಖ್ಯಾತಿಯ ಬೆಳ್ಳಿ-ಬೊಮ್ಮನ್​ ದಂಪತಿಯನ್ನು ಭೇಟಿ ಮಾಡಲಿದ್ದಾರೆ ಪ್ರಧಾನಿ

ಆನೆ ಮತ್ತು ದಂಪತಿ ನಡುವಿನ ಬಾಂಧವ್ಯ ಸಾಕ್ಷ್ಯಚಿತ್ರ  ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಗೆ ಆಸ್ಕರ್ ಪ್ರಶಸ್ತಿ ಗರಿಮೆ ಸಿಕ್ಕಿದೆ. ಪ್ರಶಸ್ತಿ ಸಿಕ್ಕ ಮೇಲೆ ಈ ಸಾಕ್ಷ್ಯಚಿತ್ರವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ಸಾವಿರಾರು ಮಂದಿ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಈ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: ದಿ ಎಲಿಫೆಂಟ್ ವಿಸ್ಪರರ್ಸ್ ‘ರಘು’ಗೆ ಸಖತ್ ಡಿಮ್ಯಾಂಡ್ – ವಿದೇಶದಿಂದಲೂ ಬರ್ತಿದ್ದಾರೆ ಫ್ಯಾನ್ಸ್..!

ಅನಾಥ ಆನೆಗಳನ್ನು ಸಾಕುವ ಕಾಯಕದಲ್ಲಿ ತೊಡಗಿರುವ ಬೆಳ್ಳಿ ಮತ್ತು ಬೊಮ್ಮನ್ ದಂಪತಿಯ ಜೀವನದ ಕಥೆಯನ್ನು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆ  ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ಏಪ್ರಿಲ್​ 9ರಂದು ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಳ್ಳಿ ಮತ್ತು ಬೊಮ್ಮನ್​ ದಂಪತಿ ಜೊತೆ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಪ್ರದೇಶಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಏಪ್ರಿಲ್​ 7ರಿಂದ ಏಪ್ರಿಲ್​ 9ರವರೆಗೆ ಹೋಟೆಲ್​, ಆನೆ ಸಫಾರಿಯನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ ವಾಹನಗಳ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಮೋದಿ ಆಗಮಿಸುವ ಹೆಲಿಕಾಪ್ಟರ್​ ನಿಲುಗಡೆಗಾಗಿ ಹೆಲಿಪ್ಯಾಡ್​ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಗಾಗುತ್ತಿದೆ. ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ.

suddiyaana