ಮೋದಿ ಸರ್​​ನೇಮ್  ಹೇಳಿಕೆ ವಿವಾದ – ಏಪ್ರಿಲ್ 13 ರವರೆಗೂ ರಾಹುಲ್ ಗಾಂಧಿಗೆ ರಿಲೀಫ್

ಮೋದಿ ಸರ್​​ನೇಮ್  ಹೇಳಿಕೆ ವಿವಾದ – ಏಪ್ರಿಲ್ 13 ರವರೆಗೂ ರಾಹುಲ್ ಗಾಂಧಿಗೆ ರಿಲೀಫ್

ಸೂರತ್: ಮೋದಿ ಸರ್​​ನೇಮ್ ವಿಚಾರವಾಗಿ ​​2 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿರುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಏಪ್ರಿಲ್​​ 13ರವರೆಗೆ ಜಾಮೀನು ಪಡೆದಿದ್ದಾರೆ. ಏಪ್ರಿಲ್ 13ರಂದು ಮತ್ತೆ ಗುಜರಾತ್​ನ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: ಬಿ.ವೈ ವಿಜಯೇಂದ್ರ ಕ್ಷೇತ್ರ ಕೊನೆಗೂ ಫೈನಲ್ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ ಗೊತ್ತಾ?

ಮೋದಿ ಸರ್​​ನೇಮ್​ ಕೇಸ್​ನಲ್ಲಿ ತಪ್ಪಿತಸ್ಥ ಅನ್ನುವ ಆದೇಶವನ್ನು ಪ್ರಶ್ನಿಸಿ ರಾಹುಲ್​​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮೇ 3 ರಂದು ವಿಚಾರಣೆ ನಡೆಸಲಿದೆ. ರಾಹುಲ್​ ಗಾಂಧಿಗೆ ವಿಧಿಸಲಾಗಿರುವ 2 ವರ್ಷಗಳ ಜೈಲು ಶಿಕ್ಷೆ ಆದೇಶಕ್ಕೂ ತಡೆ ನೀಡುವಂತೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಸೋಮವಾರ ದೆಹಲಿಯಿಂದ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ  ಹೊರಟ ರಾಹುಲ್ ಗಾಂಧಿ ಮಧ್ಯಾಹ್ನ ವೇಳೆಗೆ ಸೂರತ್ ತಲುಪಿ ನ್ಯಾಯಾಲಯದ ಮುಂದೆ ಹಾಜರಾದರು. ಜಿಲ್ಲಾ ನ್ಯಾಯಲಯ ನೀಡಿದ ಆದೇಶ ರದ್ದು ಮಾಡಬೇಕು, ವಿಚಾರಣೆ ಅಂತ್ಯವಾಗುವವರೆಗೂ ಮಧ್ಯಂತರ ತಡೆ ನೀಡಬೇಕು ಅಂತಾ ರಾಗಾ ಪರ ವಕೀಲರು ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಲಯ ಮೇ 3 ರಂದು ವಿಚಾರಣೆ ನಡೆಸಲಾಗುವುದು. ಏಪ್ರಿಲ್ 13ರ ವರೆಗೂ ಜಾಮೀನು ವಿಸ್ತರಿಸಿದೆ ಎಂದು ತಿಳಿಸಿದೆ.

ರಾಹುಲ್ ಗಾಂಧಿ ವಿಚಾರಣೆ ವೇಳೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಸೆಷನ್ಸ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ವಿಚಾರಣೆ ಹಿನ್ನೆಲೆ ಸಾವಿರಾರು ಕಾರ್ಯಕರ್ತರು ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ, ಕಳ್ಳರೆಲ್ಲಾ ಮೋದಿ ಎಂಬ ಹೆಸರನ್ನೇ ಏಕೆ ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ  ಪೂರ್ಣೇಶ್‌ ಮೋದಿ  ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ  ವಿಧಿಸಿತ್ತು. ಈ ಶಿಕ್ಷೆಯನ್ನು ಆಧರಿಸಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

suddiyaana