ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡು ಬರೆದ ವಿದ್ಯಾರ್ಥಿ! – ಯಾವ ಸಾಂಗ್ ಗೊತ್ತಾ?

ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡು ಬರೆದ ವಿದ್ಯಾರ್ಥಿ! – ಯಾವ ಸಾಂಗ್ ಗೊತ್ತಾ?

ಪ್ರತಿ ವರ್ಷವು ಮಾರ್ಚ್‌ ತಿಂಗಳು ಸಮೀಪಿಸುತ್ತಿದ್ದಂತೆ ಪೋಷಕರಲ್ಲಿ ಆತಂಕ ಶುರುವಾಗುತ್ತೆ. ಕಾರಣ ಈ ತಿಂಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುತ್ತೆ. ಹಿಂದೆಲ್ಲಾ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಎದುರಿಸುವ ಸಮಯದಲ್ಲಿ ಪೋಷಕರು ಹೆಚ್ಚು ಆತಂಕ ಪಡುತ್ತಿದ್ದರು. ಆದರೆ ಈಗ ಎಲ್‌ಕೆಜಿಯಿಂದಲೇ ಪರೀಕ್ಷೆಯ ಸಮಯದಲ್ಲಿ ಪೋಷಕರು ಒತ್ತಡಕ್ಕೊಳಗಾಗುತ್ತಾರೆ. ಯಾಕಂದ್ರೆ ಮಕ್ಕಳು ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯುತ್ತಾರೆ. ಹೀಗಾಗಿ ತಮ್ಮ ಮಗ, ಮಗಳು ಪರೀಕ್ಷೆಯಲ್ಲಿ ಸಿನಿಮಾ, ಸೀರಿಯಲ್ ಡೈಲಾಗ್  ಬರೆಯುತ್ತಾರೋ ಅಂತಾ ಪೋಷಕರಲ್ಲಿ ಆತಂಕ ಶುರುವಾಗುತ್ತೆ. ಇತ್ತೀಚೆಗೆ ಇಂತಹದ್ದೇ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: 7 ವರ್ಷದ ಮಗನಿಗಾಗಿ RRR ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ಜಪಾನ್ ಮಹಿಳೆ!

ಚಂಡೀಗಢದ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಹಿಂದಿ ಸಿನಿಮಾದ ಹಾಡುಗಳನ್ನು ಬರೆದಿದ್ದಾನೆ. ಈ ಉತ್ತರ ಪತ್ರಿಕೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ವಿದ್ಯಾರ್ಥಿಯು ತನ್ನ ಉತ್ತರ ಪತ್ರಿಕೆಯಲ್ಲಿ ಗಿವ್ ಮಿ ಸಮ್ ಸನ್‌ಶೈನ್ ಮತ್ತು ಭಗವಾನ್ ಹೈ ಕಹಾನ್ ರೆ ತು ಹಾಡಿನ ಸಾಲುಗಳನ್ನು ಬರೆದಿದ್ದಾನೆ. ಈ ಉತ್ತರ ಪತ್ರಿಕೆಯ ವಿಡಿಯೋವನ್ನು ಚಂಡೀಗಢ ಯೂನಿವರ್ಸಿಟಿ ಮೀಮ್ಸ್ ಎಂಬ ಇನ್‌ಸ್ಟಾಗ್ರಾಮ್‌ ಪೇಜ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಉತ್ತರ ಪತ್ರಿಕೆಯಲ್ಲಿ ಸೊನ್ನೆ ಅಂಕವನ್ನು ನೀಡಿರುವುದನ್ನು ಕಾಣಬಹುದು. ವಿದ್ಯಾರ್ಥಿಯು ಮೂರು ಪ್ರಶ್ನೆಗಳಿಗೆ ಉತ್ತರಿಸಿದ್ದು, 3 ಈಡಿಯಟ್ಸ್‌ನ “ಗಿವ್ ಮಿ ಸಮ್ ಸನ್‌ಶೈನ್” ಮತ್ತು ಪಿಕೆ ಯಿಂದ “ಭಗವಾನ್ ಹೈ ಕಹಾನ್ ರೇ ತೂ” ನಂತಹ ಜನಪ್ರಿಯ ಹಾಡುಗಳ ಸಾಹಿತ್ಯವನ್ನು ಬರೆದಿರುವುದನ್ನು ಕಾಣಬಹುದು.

suddiyaana