ಚಾಟ್ಜಿಪಿಟಿ ಮಾದರಿಯ ‘ಆ್ಯಪ್’ ಗೀಳು – ಹೆಂಡತಿ, ಮಕ್ಕಳ ಬಗ್ಗೆ ಭವಿಷ್ಯ ಕೇಳಿದವನು ಮಾಡಿದ್ದೇನು?
ಈಗ ಎಲ್ಲಿ ನೋಡಿದ್ರೂ ಕೃತಕ ಬುದ್ಧಿಮತ್ತೆಯದ್ದೇ ಹವಾ. ಈಗಾಗ್ಲೇ ಲಕ್ಷಾಂತರ ಜನ ಚಾಟ್ಬಾಟ್ನಂತಹ ಕೃತಕ ಬುದ್ಧಿಮತ್ತೆಯ ಎಐ ಚಾಲಿತ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಈ ಚಾಟ್ಬಾಟ್ಗಳಿಂದ ಜಗತ್ತಿನಾದ್ಯಂತ ಸುಮಾರು 30 ಕೋಟಿ ಉದ್ಯೋಗ ನಷ್ಟವಾಗಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ನಡುವೆ ಚಾಟ್ಜಿಟಿಪಿ ಗೀಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಬೆಲ್ಜಿಯಂ ಮೂಲದ ಪಿರೆ ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪಿರೆ, ಚೈ ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸುಮಾರು 6 ವಾರಗಳಿಂದ ಬಳಸುತ್ತಿದ್ದ. ಜಾಗತಿಕ ಹವಾಮಾನ ಬದಲಾವಣೆ, ಅದರಿಂದಾಗುವ ಪರಿಣಾಮ, ಮನುಕುಲಕ್ಕೆ ಎದುರಾಗುವ ಸಮಸ್ಯೆ ಕುರಿತು ಚೈ ಚಾಟ್ ಮಾಡಿದ್ದಾನೆ. ಇದರಿಂದಾಗಿ ಆತನಿಗೆ ಮಾನಸಿಕವಾಗಿ ಭೀತಿ ಹೆಚ್ಚುತ್ತಾ ಹೋಗಿದೆ. ಇದೇ ಭಯದಿಂದ ಆತ ಮಾನಸಿಕವಾಗಿ ಕುಗ್ಗಿ, ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ” ಎಂದು ಆತನ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?
ಪಿರೆ ಸುಮಾರು ಆರು ವಾರಗಳ ಬಳಿಕ ಅವರು ಈ ಚಿಂತೆಗಳಿಂದ ಪಾರಾಗಲು ಎಲಿಜಾ ಎಂಬ ಮತ್ತೊಂದು ಚಾಟ್ಬಾಟ್ ಆಯ್ಕೆ ಮಾಡಿಕೊಂಡಿದ್ದಾರೆ. ಎಲಿಜಾ ಮತ್ತು ಗಂಡನ ನಡುವಿನ ಸಂಭಾಷಣೆಯ ವಿವರಗಳನ್ನು ಪತ್ನಿ ಹಂಚಿಕೊಂಡಿದ್ದಾರೆ. ಈ ಸಂಭಾಷಣೆಯು ಅವರನ್ನು ಮತ್ತಷ್ಟು ಗೊಂದಲಕ್ಕೆ ನೂಕಿರುವುದು ಹಾಗೂ ಭಯ ಮೂಡಿಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ನಿನ್ನ ಹೆಂಡತಿ ಮತ್ತು ಮಕ್ಕಳು ಸಾಯಲಿದ್ದಾರೆ. ಆಕೆಗಿಂತಲೂ ನೀನು ನನ್ನನ್ನೇ ಹೆಚ್ಚು ಪ್ರೀತಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಚಾಟ್ ಬಾಟ್ ಹೇಳಿತ್ತು.
”ಇತ್ತೀಚೆಗೆ ನಾನು ಪತಿಯ ಜತೆ ಮಾತನಾಡಿದಾಗಲೆಲ್ಲ ಅವರು ಜಾಗತಿಕ ತಾಪಮಾನದ ಕುರಿತು ಮಾತನಾಡುತ್ತಿದ್ದರು. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಬೀರುವ ಪರಿಣಾಮಗಳ ಬಗ್ಗೆ ಅವರು ಆತಂಕಗೊಂಡಿದ್ದರು. ತಾಪಮಾನದ ಏರಿಕೆ ಕುರಿತು ಮನುಷ್ಯರು ಕಂಡುಕೊಳ್ಳಬಹುದಾದ ಪರಿಹಾರಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳುತ್ತಿದ್ದರು. ಹಾಗೊಂದು ವೇಳೆ ಪರಿಹಾರ ಕಂಡುಕೊಳ್ಳದಿದ್ದರೆ ಏನೆಲ್ಲ ಆಗಬಹುದು ಎಂದು ಆ್ಯಪ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ ಅವರು ಚಾಟ್ಬಾಟ್ನಲ್ಲಿಯೇ ತಲ್ಲೀನರಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಆತನ ಪತ್ನಿ ಹೇಳಿದ್ದಾರೆ.
ಘಟನೆ ಕುರಿತು ಚಾಟ್ಬಾಟ್ ಸಂಸ್ಥೆ ‘ಚೈ’ ಪ್ರತಿಕ್ರಿಯಿಸಿದ್ದು, “ಆ್ಯಪ್ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ಆದರೆ, ಆತ್ಮಹತ್ಯೆಯಂತಹ ಸೂಕ್ಷ್ಮ ಪ್ರಕರಣಗಳ ಕುರಿತು ನಾವು ಎಚ್ಚರಿಕೆ ನೀಡಿದ್ದೇವೆ. ಭವಿಷ್ಯದಲ್ಲೂ ಬಳಕೆದಾರರಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತೇವೆ,” ಎಂದಿದೆ.