ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಭೀತಿ –  ಒಂದೇ ದಿನ 3,016 ಪಾಸಿಟಿವ್  ಕೇಸ್ ಪತ್ತೆ

ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಭೀತಿ –  ಒಂದೇ ದಿನ 3,016 ಪಾಸಿಟಿವ್  ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ನ ಅಟ್ಟಹಾಸ ಮತ್ತೆ ತೀವ್ರಗೊಂಡಿದೆ. ಒಂದೇ ದಿನದಲ್ಲಿ 3 ಸಾವಿರದ 16 ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಕೊರೊನಾ ಕೇಸ್​​ಗಳು ಪತ್ತೆಯಾಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ  ಮುಂದಿನ 48 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆ!  

ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ತಲುಪಿದೆ. ಕೊವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,47,12,692ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೊವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,862ಕ್ಕೆ ಏರಿಕೆಯಾಗಿದೆ.

ಇನ್ನು ವಿವಿಧ ರಾಜ್ಯ ಸರ್ಕಾರಗಳು ತುರ್ತು ಸಭೆ ಕೂಡ ನಡೆಸಿದ್ದು, ಪರಿಸ್ಥಿತಿ ಕೈ ಮೀರಿ ಹೋಗದಂತೆ ಎಚ್ಚರಿಕೆ ವಹಿಸ್ತಿವೆ. ಮಹಾರಾಷ್ಟ್ರದಲ್ಲಂತೂ ವ್ಯಾಪಕ ಮಟ್ಟದಲ್ಲಿ ಕೊರೊನಾ ಕೇಸ್​ಗಳು ಹೆಚ್ಚಾಗ್ತಿವೆ. ಕೂಡಲೇ ಬೂಸ್ಟರ್​ ಡೋಸ್ ಪಡೆಯುವಂತೆ ಜನತೆಗೆ ಸೂಚಿಸಲಾಗಿದೆ.

suddiyaana