ಸಫಾರಿ ವಾಹನವನ್ನು 1 ಕಿ. ಮೀ ಅಟ್ಟಿಸಿಕೊಂಡು ಬಂದ ಘೇಂಡಾಮೃಗ – ಇಲ್ಲಿದೆ ಭಯಾನಕ ವಿಡಿಯೋ

ಸಫಾರಿ ವಾಹನವನ್ನು 1 ಕಿ. ಮೀ ಅಟ್ಟಿಸಿಕೊಂಡು ಬಂದ ಘೇಂಡಾಮೃಗ – ಇಲ್ಲಿದೆ ಭಯಾನಕ ವಿಡಿಯೋ

ಸಫಾರಿಗೆ ಹೋದಂತಹ ಸಂದರ್ಭದಲ್ಲಿ ಮನುಷ್ಯರ ಅತಿರೇಕದ ವರ್ತನೆ ಪ್ರಾಣಿಗಳನ್ನು ಸಿಟ್ಟಿಗೇಳುವಂತೆ ಮಾಡುತ್ತೆ. ಈ ವೇಳೆ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿಗೆ ಮುಂದಾಗುವ ದೃಶ್ಯಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಘೇಂಡಾಮೃಗದ ಕೋಪದ ದೃಶ್ಯ. ಪ್ರವಾಸಿಗರಿದ್ದ ಜೀಪನ್ನು ಕಂಡ ತಕ್ಷಣ ಕಿರಿಕಿರಿಗೊಳಗಾದ ಘೇಂಡಾಮೃಗ ವಾಹನವನ್ನು ಬೆನ್ನಟ್ಟಿದೆ. ಈ ದೃಶ್ಯವನ್ನು ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ – ನಡೆದೇ ಹೋಯ್ತು ದುರಂತ!

ದಕ್ಷಿಣ ಆಫ್ರಿಕಾದ ಗ್ರೇಟರ್ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ಸಂಭವಿಸಿದೆ. ಅನಸ್ತಾಸಿಯಾ ಚಾಪ್ಮನ್ ಎಂಬುವವರು ತನ್ನ ಸ್ನೇಹಿತರೊಂದಿಗೆ ಸಫಾರಿಗೆ ಹೊರಟಿದ್ದಾಗ ಸಿಟ್ಟಿಗೆದ್ದ ಘೇಂಡಾಮೃಗ ಅವರಿದ್ದ ಜೀಪನ್ನು ಸುಮಾರು 1 ಕಿಲೋ ಮೀಟರ್ ಗೂ ಹೆಚ್ಚು ದೂರ ಬೆನ್ನಟ್ಟಿಸಿಕೊಂಡು ಬಂದಿದೆ. ಈ ವಿಡಿಯೋವೊಂದು ಭಾರಿ ವೈರಲ್ ಆಗಿದೆ.

latestkruger ಎಂಬ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಘೇಂಡಾಮೃಗವೊಂದು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬರುತ್ತದೆ. ಇದನ್ನು ಗಮನಿಸಿದ ಜೀಪ್‌ನ ಚಾಲಕ ಮಣ್ಣಿನ ರಸ್ತೆಯಲ್ಲಿ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಚಲಾಯಿಸುತ್ತಾನೆ. ಘೇಂಡಾಮೃಗವು 1 ಕಿಲೋಮೀಟರ್‌ಗೂ ಹೆಚ್ಚು ದೂರ ಹಿಂಬಾಲಿಸಿಕೊಂಡು ಬಂದಿದೆ. ಬಳಿಕ ಅದು ಹಿಂದೆ ಸರಿದಿದೆ.

ಈ ಭಯಾನಕ ಘಟನೆಯ ಬಗ್ಗೆ ಚಾಪ್ಮನ್ ಇನ್ಸ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಘೇಂಡಾಮೃಗದೊಂದಿಗೆ ವಿಚಿತ್ರ ಅನುಭವವಾಯಿತು. ಅದು ನಮ್ಮನ್ನು ಒಂದು ಕಿಲೋ ಮೀಟರ್‌ಗೂ ಹೆಚ್ಚು ದೂರ ಓಡಿಸಿಕೊಂಡು ಬಂದಿದೆ. ಇದರಿಂದ ನಮ್ಮನ್ನು ಪಾರು ಮಾಡಲು ನಮ್ಮ ಗೈಡ್ ಮಣ್ಣಿನ ರಸ್ತೆಯಲ್ಲಿ ಆದಷ್ಟು ವೇಗವಾಗಿ ಜೀಪ್ ಓಡಿಸಿದರು. ಹೀಗಾಗಿ ಅದರಿಂದ ಬಚಾವ್ ಆಗಿದ್ದೇವೆ ಅಂತಾ ಹೇಳಿದ್ದಾರೆ.

suddiyaana