ಪಾಸ್ ಅನ್ನೋ ಬದಲಿಗೆ ಪಾಸ್ಡ್ ಅವೇ ಎಂದು ಅಂಕಪಟ್ಟಿಯಲ್ಲಿ ಬರೆದ ಟೀಚರ್ – ಮುಂದೇನಾಯ್ತು ಗೊತ್ತಾ?
ಇಂಗ್ಲಿಷ್ ಅನೇಕರಿಗೆ ಕಷ್ಟದ ಭಾಷೆಯಾಗಿದೆ. ಕೆಲವರ ಪಾಲಿಗಂತೂ ಅಕ್ಷರಶಃ ಕಬ್ಬಿಣದ ಕಡಲೆ ಎಂದೇ ಹೇಳಬಹುದು. ಇಂಗ್ಲಿಷ್ ಓದುವಾಗ, ಬರೆಯುವಾಗ ಕೆಲ ಮಕ್ಕಳು ಈ ಭಾಷೆಯನ್ನ ಯಾರು ಕಂಡುಹುಡುಕಿದರೋ ಅಂತಾ ಬಯ್ಯುವುದನ್ನು ನಾವು ಕೇಳಿದ್ದೇವೆ. ಅಷ್ಟೇ ಅಲ್ಲದೇ ಕೆಲವೊಂದು ಬಾರಿ ಏನೋ ಬರೆಯಲು ಹೋಗಿ ಇನ್ನೇನೋ ಅರ್ಥ ಬರೋದನ್ನು ನೋಡಿದ್ದೇವೆ. ಇಂತಹ ಸಂದರ್ಭ ನಗೆಪಾಟಲಿಗೀಡಾಗುವುದನ್ನು ನಾವು ನೋಡಿರುತ್ತೇವೆ. ಈಗ ಅಂಥದ್ದೇ ಸನ್ನಿವೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 7 ವರ್ಷದ ಮಗನಿಗಾಗಿ RRR ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ಜಪಾನ್ ಮಹಿಳೆ!
ಸಾಮಾನ್ಯವಾಗಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಮಾರ್ಕ್ಸ್, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಬರೆಯಬೇಕು. ಹೀಗಾಗಿ ಇಲ್ಲೊಬ್ಬ ಶಿಕ್ಷಕರು ವಿದ್ಯಾರ್ಥಿನಿ ಪಾಸ್ ಆಗಿದ್ದಾಳೆ ಅಂತಾ ಬರೆಯಲು ಹೋಗಿ ಎಡವಟ್ಟು ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
7ನೇ ತರಗತಿ ವಿದ್ಯಾರ್ಥಿನಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿನಿ ಪಾಸ್(ಉತ್ತೀರ್ಣ) ಆಗಿದ್ದಾಳೆ ಎಂದು ಬರೆಯುವ ಬದಲಿಗೆ, ಶಿಕ್ಷಕರು ವಿದ್ಯಾರ್ಥಿನಿ “ಪಾಸ್ಡ್ ಅವೇ’ ( ಸತ್ತು ಹೋಗಿದ್ದಾಳೆ)ಎಂದು ಬರೆದಿದ್ದಾರೆ. ಈ ಅಚಾತುರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಅನಂತ್ ಭನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಂಕಪಟ್ಟಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಅಂಕಪಟ್ಟಿಯನ್ನ ಕಂಡ ನೆಟ್ಟಿಗರು ಶಿಕ್ಷಕಿ ಮೇಲೆ ಕಿಡಿಕಾರಿದ್ದಾರೆ. “ಶಿಕ್ಷಕರೇ ಹೀಗಾದರೆ, ಮಕ್ಕಳ ಇಂಗ್ಲೀಷಿನ ಕಥೆ ಏನು’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
Oh, lord
Via FB pic.twitter.com/PApNboMp3X— Anant Bhan (@AnantBhan) March 27, 2023