ಸಾಶಾ ಸಾವಿನ ಬೆನ್ನಲ್ಲೇ ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ

ಸಾಶಾ ಸಾವಿನ ಬೆನ್ನಲ್ಲೇ ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿರುವ ಚೀತಾವೊಂದು 4 ಮರಿಗಳಿಗೆ ಜನ್ಮ ನೀಡಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ 8 ಚೀತಾಗಳನ್ನು ಕರೆತರಲಾಗಿತ್ತು. ಅವುಗಳಲ್ಲಿ ಸಾಶಾ ಚೀತಾ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿದೆ. ಇದಾದ ಮೂರು ದಿನಗಳ ಬಳಿಕ ಹೆಣ್ಣು ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

ಇದನ್ನೂ ಓದಿ: ಸೂಪರ್‌ ಸ್ಪೀಡ್‌ ಚೀತಾ – ವೈರಲ್‌ ವಿಡಿಯೋ ಹೇಗಿದೆ ನೋಡಿ!

ಈ ಬಗ್ಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ 8 ಚಿರತೆಗಳನ್ನು ಕರೆತರಲಾಗಿತ್ತು. ಅವುಗಳಲ್ಲಿ ಒಂದು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಅಂತಾ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ಮಧ್ಯದಲ್ಲಿ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ಕರೆ ತರಲಾಗಿತ್ತು. ಇವುಗಳಲ್ಲಿ ಸಾಶಾ ಮೃತಪಟ್ಟಿದೆ. ಉಳಿದ 7 ಚೀತಾಗಳು ಆರೋಗ್ಯವಾಗಿದ್ದು,  ಉದ್ಯಾನವನದ ತೆರೆದ ಜಾಗದಲ್ಲಿ ಅವುಗಳನ್ನು ಬಿಡಲಾಗಿದೆ. ಅವುಗಳು ಸಂಪೂರ್ಣ ಆರೋಗ್ಯವಾಗಿವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್‌ ತಿಳಿಸಿದ್ದಾರೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಕರೆತರಲಾಗಿದೆ. ಅವುಗಳನ್ನು ಸದ್ಯದ ಮಟ್ಟಿಗೆ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಅವುಗಳು ಆರೋಗ್ಯವಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾಡಿಗೆ ಬಿಡಲಾಗುವುದು ಎಂದು ಚೌಹಾಣ್ ತಿಳಿಸಿದ್ದಾರೆ.

suddiyaana