ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ – 5 ತಿಂಗಳ ಬಳಿಕ ಅತೀ ಹೆಚ್ಚು ಪಾಸಿಟಿವ್
ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ಮತ್ತೆ ತನ್ನ ವರಸೆ ಶುರು ಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,151 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದು ಕಳೆದ ವರ್ಷ ಅಕ್ಟೋಬರ್ನಿಂದ ಅತೀ ಹೆಚ್ಚು ದಾಖಲಾದ ಪಾಸಿಟಿವ್ ಪ್ರಕರಣ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 2,151 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳು 11,903 ಕ್ಕೆ ಏರಿದೆ. ಇದುವರೆಗೂ ಏಳು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 5,30,848 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ
ಮಹಾರಾಷ್ಟ್ರದಿಂದ ಮೂರು, ಕರ್ನಾಟಕದಿಂದ ಒಂದು ಮತ್ತು ಕೇರಳದಿಂದ ಮೂರು ಸಾವುಗಳು ವರದಿಯಾಗಿವೆ. ದೈನಂದಿನ ಪಾಸಿಟಿವ್ ಪ್ರಕರಣದ ದರವು 1.51 ಪ್ರತಿಶತ ಮತ್ತು ವಾರದ ಪಾಸಿಟಿವ್ ಪ್ರಕರಣ ದರವನ್ನು 1.53 ಪ್ರತಿಶತದಲ್ಲಿ ದಾಖಲಿಸಲಾಗಿದೆ.
ಹೊಸ ಪ್ರಕರಣಗಳು ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ದೇಶದಲ್ಲಿ ಒಟ್ಟು ಕೋವಿಡ್ ಸಂಖ್ಯೆ 4.47 ಕೋಟಿಯಾಗಿದೆ (4,47,09,676). ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.03 ಪ್ರತಿಶತವನ್ನು ಒಳಗೊಂಡಿವೆ. ಕೋವಿಡ್ನಿಂದ ಚೇತರಿಕೆಗೊಂಡವರ ಸಂಖ್ಯೆ 98.78 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.