ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಹೋದ ಅಂಗಡಿ ಮಾಲೀಕ – ಆಮೇಲೆ ನಡೆದಿದ್ದು ದೊಡ್ಡ ಅವಾಂತರ

ಬೆಂಗಳೂರು: ರಾತ್ರಿ ಇಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಮಲಗುವವರು ಕೊಂಚ ಯೋಚಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಂತೂ ಮೊಬೈಲ್ ಸ್ಪೋಟದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ನಿಮ್ಮ ಜೀವಕ್ಕೆ ಆಪತ್ತು ಎದುರಾಗೋ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಬೆಂಕಿಯ ರುದ್ರನರ್ತನ – ಬಾತ್ರೂಮ್ನಲ್ಲಿ ಅಡಗಿ ಕುಳಿತರೂ ಬದುಕಲಿಲ್ಲ ದಂಪತಿ..!
ಮೊಬೈಲ್ ಅಂಗಡಿ ಮಾಲೀಕನೊಬ್ಬ ರಾತ್ರಿ ಇಡೀ ಮೊಬೈಲ್ ಚಾರ್ಜ್ ಇಟ್ಟು ಹೋಗಿದ್ದಾನೆ. ಮುಂಜಾನೆ ವೇಳೆ ಶಾಕ್ ಸರ್ಕ್ಯೂಟ್ ನಿಂದಾಗಿ ಮೊಬೈಲ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಅಂಗಡಿ ಸಂಪೂರ್ಣ ಭಸ್ಮವಾಗಿದೆ.
ಈ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮನೆಗೆ ಹೋಗಿದ್ದ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಮಾಲೀಕನಿಗೆ ಶಾಕ್ ಆಗಿದೆ. ಶಾರ್ಟ್ಸರ್ಕ್ಯೂಟ್ನಿಂದ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.