ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಾ – ಮಾರ್ಚ್ 31ರೊಳಗೆ ಮಾಡಿದ್ರೆ ನೀವು ಸೇಫ್..!

ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಾ – ಮಾರ್ಚ್ 31ರೊಳಗೆ ಮಾಡಿದ್ರೆ ನೀವು ಸೇಫ್..!

ಮಾರ್ಚ್ 31ರೊಳಗೆ ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದಲೇ ನಿಷ್ಕ್ರಿಯವಾಗುತ್ತದೆ. ಪ್ಯಾನ್ – ಆಧಾರ್ ನಂಬರ್‌ಗಳನ್ನು ಜೋಡಣೆ ಮಾಡಲು ನೀಡಿರುವ ಗಡುವು ಮಾರ್ಚ್ 31ಕ್ಕೆ ಅಂತ್ಯವಾಗಲಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಹಿಂದೆಯೂ ಹಲವಾರು ಬಾರಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಲಿಂಕ್‌ಗೆ ಗಡುವನ್ನು ವಿಸ್ತರಿಸಿತ್ತು. ಆದರೂ ಕೂಡಾ ಅನೇಕರು ಇನ್ನೂ ಪ್ಯಾನ್ – ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ಇಂಥವರು ಇನ್ನಾದರೂ ಲಿಂಕ್ ಮಾಡಲೇಬೇಕಿದೆ. ಯಾಕೆಂದರೆ, ಈ ಬಾರಿಯೂ ಮತ್ತೆ ಗಡುವನ್ನು ವಿಸ್ತರಿಸುವ ಸಾಧ್ಯತೆಗಳು ಕಡಿಮೆ. ಗಡುವನ್ನು ವಿಸ್ತರಿಸುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಸಿಬಿಡಿಟಿಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 1,000 ರೂ. ದಂಡದೊಂದಿಗೆ ಮಾರ್ಚ್ 31ರ ತನಕ ಪ್ಯಾನ್ – ಆಧಾರ್ ಲಿಂಕ್ ಮಾಡಲು ಅವಕಾಶವಿದೆ.

ಇದನ್ನೂ ಓದಿ: ಕ್ಷುದ್ರಗ್ರಹದಲ್ಲಿದೆ ಒಬ್ಬೊಬ್ಬರನ್ನೂ ಕುಬೇರರನ್ನಾಗಿಸುವಷ್ಟು ಸಂಪತ್ತು – ಭೂಮಿಗೆ ತರಲು ಅದೆಷ್ಟು ಸಾಹಸ..?

ಪ್ಯಾನ್ ನಂಬರ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸ ನಿಭಾಯಿಸುವುದು ಕಷ್ಟ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡುವವರೆಗೆ ಎಲ್ಲ ಕೆಲಸಗಳಿಗೂ ಪ್ಯಾನ್ ಕಾರ್ಡ್ ಬೇಕು. ಅಂತಹ ಪರಿಸ್ಥಿತಿಯಲ್ಲಿ, ಪ್ಯಾನ್ ಕಾರ್ಡ್ ಇಲ್ಲದಿದ್ದರೆ ನಿಮ್ಮ ಅನೇಕ ಹಣಕಾಸು ಕೆಲಸಗಳು ಸ್ಥಗಿತವಾಗಬಹುದು. ನೀವು ಇನ್ನೂ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು. ಕೂಡಲೇ ಕೆಲಸ ಮುಗಿಸಿ ಎನ್ನುವುದು ತಜ್ಞರ ಸಲಹೆಯಾಗಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇನ್ನೂ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ. ನೀವು ಇನ್ನೂ ನಿಮ್ಮ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡದೇ ಇದ್ದಲ್ಲಿ, ಈ ಕೆಳಗಿನ ಆಯ್ಕೆಗಳ ಮೂಲಕ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು. ಮೊದಲಿಗೆ ನೀವು www.income tax.gov.in ಜಾಲತಾಣಕ್ಕೆ ಹೋಗಿ, ಅಲ್ಲಿ ಎಡಭಾಗದಲ್ಲಿರುವ ಲಿಂಕ್ ಆಧಾರ್ ಎನ್ನುವ ಆಯ್ಕೆ ಕ್ಲಿಕ್ ಮಾಡಿ, ಆಗ ಮಾಹಿತಿ ತೆರೆದುಕೊಳ್ಳುತ್ತದೆ. ಅಥವಾ ಡೈರೆಕ್ಟ್ ಆಗಿ https://eportal.incometax.gov.in/iec/foservices/#/pre-login/bl-link-aadhaar 1,000 ರೂ. ಶುಲ್ಕ ಪಾವತಿಸಿ ಆಧಾರ್ – ಪ್ಯಾನ್ ಲಿಂಕ್ ಮಾಡಬಹುದು. ಎಸ್ಎಂಎಸ್ ಮೂಲಕವೂ ನೀವು ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ. ಮೆಸೇಜ್ ಬಾರ್‌ನಲ್ಲಿ UIDPAN (ಸ್ಪೇಸ್) 12 ಅಂಕಿಯ ಆಧಾರ್ ಸಂಖ್ಯೆ (ಸ್ಪೇಸ್) 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ಟೈಪ್ ಮಾಡಿ. ಬಳಿಕ ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ ಎಸ್ಎಂಎಸ್ ಕಳುಹಿಸಿ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು. ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ, 1,000 ರೂಪಾಯಿ ದಂಡ. ಆನಂತರ 10,000 ರೂಪಾಯಿಗಳವರೆಗೂ ದಂಡ ತೆರಲೇಬೇಕು.

suddiyaana