2050 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ! – ವಿಶ್ವಸಂಸ್ಥೆ ಕೊಟ್ಟ ಎಚ್ಚರಿಕೆ ಏನು?

2050 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ! – ವಿಶ್ವಸಂಸ್ಥೆ ಕೊಟ್ಟ ಎಚ್ಚರಿಕೆ ಏನು?

2050ರ ವೇಳೆಗೆ ಭಾರತದಲ್ಲಿ ನೀರಿಗೆ ಭಾರಿ ಕೊರತೆಯಾಗಲಿದೆ ಅಂತಾ ವಿಶ್ವಸಂಸ್ಥೆ ವರದಿ ಮಾಡಿದೆ. ಏಷ್ಯಾದಲ್ಲಿ ಈಗಾಗ್ಲೇ ಶೇಕಡಾ 80ರಷ್ಟು ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅದ್ರಲ್ಲೂ ಭಾರತ, ಪಾಕಿಸ್ತಾನ ಮತ್ತು ಚೀನಾದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದ್ರೆ 2050ರ ವೇಳೆಗೆ ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಕೊರತೆಯನ್ನ ಎದುರಿಸಲಿದೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ತಂದೆ ಸಾವು – 5 ವರ್ಷದ ಮಗನಿಗೆ ಕಾನ್ಸ್ ಸ್ಟೇಬಲ್ ಹುದ್ದೆ!

ಸದ್ಯ ಜಾಗತಿಕವಾಗಿ 200 ಕೋಟಿಗೂ ಅಧಿಕ ಮಂದಿ ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಜಗತ್ತಿನಲ್ಲಿ ಶೇಕಡಾ 70ರಷ್ಟು ನೀರು ಕೃಷಿ, ಕೈಗಾರಿಕೆ ಮತ್ತು ನಗರಗಳಲ್ಲೇ ಬಳಕೆಯಾಗುತ್ತಿವೆ. ಹೀಗಾಗಿ ನೀರನ್ನ ಬೇಕಾಬಿಟ್ಟಿ ಪೋಲು ಮಾಡುವ ಮುನ್ನ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸಬೇಕಾಗಿದೆ.

suddiyaana