ಬನ್ನೇರುಘಟ್ಟ ಪಾರ್ಕ್ ನಲ್ಲಿ ಹುಲಿಗಳಿಗಿಲ್ಲ ಉಳಿಗಾಲ – ವ್ಯಾಘ್ರಗಳ ಜೀವಕ್ಕೆ ಕಂಟಕವಾಗುತ್ತಿದೆಯಾ ವಿಚಿತ್ರ ವೈರಸ್

ಬನ್ನೇರುಘಟ್ಟ ಪಾರ್ಕ್ ನಲ್ಲಿ ಹುಲಿಗಳಿಗಿಲ್ಲ ಉಳಿಗಾಲ – ವ್ಯಾಘ್ರಗಳ ಜೀವಕ್ಕೆ ಕಂಟಕವಾಗುತ್ತಿದೆಯಾ ವಿಚಿತ್ರ ವೈರಸ್

ಇಡೀ ದೇಶದಲ್ಲೀಗ ನಮೀಬಿಯಾದಿಂದ ಬಂದ ಚೀತಾಗಳದ್ದೇ ಮಾತು. ಅಷ್ಟೇ ಅಲ್ಲದೇ ಚೀತಾಗಳನ್ನು ಬರಮಾಡಿಕೊಂಡ ಬಳಿಕ ಅವುಗಳಿಗೆ ಬದುಕಲು ಬೇಕಾದ ಎಲ್ಲಾ ಸವಲತ್ತುಗಳನ್ನು ಮಾಡಿಕೊಡಲಾಗಿದೆ. ವಿಪರ್ಯಾಸ ಅಂದ್ರೆ, ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ನಲ್ಲಿ 26‌ಕ್ಕಿದ್ದ ಹುಲಿಗಳ ಸಂಖ್ಯೆ ಈಗ ಬರೀ 16‌ಕ್ಕೆ ಇಳಿದಿದೆ. ಇಲ್ಲದಿರುವ ಸಂತತಿ ಭಾರತಕ್ಕೆ ತಂದು ಖುಷಿ ಪಡುತ್ತಿರುವ ಸಂದರ್ಭದಲ್ಲಿ ಇರುವ ಸಂತತಿ ಉಳಿಸಿಕೊಳ್ಳಲು ಪರದಾಡುವಂತಾಗಿದೆ.

ಇದನ್ನೂ ಓದಿ: ಅಪೌಷ್ಠಿಕತೆಯಿಂದ ನರಳಿ ನರಳಿ ಪ್ರಾಣಬಿಟ್ಟ ಮಗು..!- ಈ ಶಾಪದಿಂದ ಬಡವರಿಗೆ ಮುಕ್ತಿ ಯಾವಾಗ?

ಬನ್ನೇರುಘಟ್ಟದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಸಫಾರಿ ಮತ್ತು ‘ಜೂ’ ನಲ್ಲಿದ್ದ ಆರಕ್ಕೂ ಹೆಚ್ಚು ಹುಲಿಗಳು ಅಸುನೀಗಿವೆ.‌ ಅದಕ್ಕೆ ಕಾರಣ ವಿಚಿತ್ರ ವೈರಸ್. ಇದು ಹುಲಿಗಳ ದೇಹ ಮತ್ತು ರಕ್ತದೊಳಗೆ ಸೇರುತ್ತಿದೆ. ಇದರಿಂದಾಗಿ ಹುಲಿಗಳು ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗುತ್ತಿವೆ. ಒಂದೂವರೆ ವರ್ಷದ ಹಿಂದೆ 26‌ಕ್ಕಿದ್ದ ಹುಲಿಗಳ ಸಂಖ್ಯೆ ಈಗ ಬರೀ 16‌ಕ್ಕೆ ಇಳಿದಿದೆ. ಅದರಲ್ಲೂ ಎರಡು ಹುಲಿಗಳು ಸಾಯುವ ಸ್ಥಿತಿಗೆ ತಲುಪಿವೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬನ್ನೇರುಘಟ್ಟ ‌ಪಾರ್ಕ್​ನಲ್ಲಿ ಚಿರತೆಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಬೆಂಗಳೂರು ಸುತ್ತಮುತ್ತ ಅನೇಕ ಗ್ರಾಮಗಳಿಗೆ ಉಪಟಳ ಕೊಟ್ಟ ಹಲವು ಚಿರತೆಗಳನ್ನು ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್‌‌ ನಲ್ಲಿ ಬಿಟ್ಟಿರುವುದು. ಇದೀಗ ಆ ಚಿರತೆಗಳನ್ನು ಕೂಡ ಸಿಬ್ಬಂದಿಯೇ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿರತೆಗಳನ್ನು ರೆಸ್ಕ್ಯೂ ಮಾಡಿ ಕಾಡಿಗೆ ಬಿಡಲಾಗುತ್ತಿತ್ತು. ಆದರೆ ಈಗ ಚಿರತೆಗಳ‌ ಸಂರಕ್ಷಣೆಗಾಗಿಯೇ ಹೊಸ ಬ್ಯಾರೆಕ್ ತಯಾರಿಸಿ ಅವುಗಳ ಪಾಲನೆ‌ ಮಾಡಲಾಗುತ್ತಿದೆ. ಅವುಗಳಿಗೆ ತಗಲುವ ಖರ್ಚಿಗಾಗಿ 6 ಕೋಟಿ ಹಣವನ್ನು ಅರಣ್ಯ ಇಲಾಖೆ ಭರಿಸಲು ಮುಂದಾಗಿದೆ.

suddiyaana