ಚುನಾವಣಾ ಹೊಸ್ತಿಲಲ್ಲೇ ಮೀಸಲಾತಿ ಗಿಫ್ಟ್ ಕೊಟ್ಟ ಸರ್ಕಾರ – ವರ್ಕೌಟ್ ಆಗುತ್ತಾ ಜಾತಿ ಲೆಕ್ಕಾಚಾರ..?
ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಗಿಫ್ಟ್ ನೀಡಿದ್ದಾರೆ. ಒಕ್ಕಲಿಗರು, ಲಿಂಗಾಯತ ಪಂಚಮಸಾಲಿ, ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿಯ ಕೊಡುಗೆ ಕೊಟ್ಟಿದ್ದಾರೆ.
ಹಲವು ವರ್ಷಗಳಿಂದ ಪ್ರಮುಖ ಸಮುದಾಯಗಳ ಬೇಡಿಕೆಯಾಗಿದ್ದ ಪ್ರವರ್ಗ 2ಕ್ಕೆ ಸೇರ್ಪಡೆ ಮಾಡುವ ನಿರ್ಧಾರದ ಬೆನ್ನಲ್ಲೇ, ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ರಾಜ್ಯ ಸಾಕ್ಷಿಯಾಗಿದೆ.
ಶ್ರೀ @bsbommai ಸರ್ಕಾರವು ಒಕ್ಕಲಿಗ & ವೀರಶೈವ-ಲಿಂಗಾಯತ ಸಮುದಾಯಗಳ ಮೀಸಲಾತಿಯನ್ನು ಶೇ. 6 ಹಾಗೂ 7 ಕ್ಕೆ ಹೆಚ್ಚಿಸಿ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಮೆರೆದಿದೆ. pic.twitter.com/BPQXm0Bqnt
— BJP Karnataka (@BJP4Karnataka) March 24, 2023
ಶುಕ್ರವಾರ ಸಂಪುಟ ಸಭೆ ನಡೆಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಈಗ ಅದು ಅನುಷ್ಟಾನದಲ್ಲಿ ಇದೆ. 9 ಶೆಡ್ಯೂಲ್ ಗೆ ಕಳುಹಿಸಿ ಕೊಟ್ಟಿದ್ದೇವೆ. ಒಳ ಮೀಸಲಾತಿಗೆ ಸಾಕಷ್ಟು ಹೋರಾಟ ನಡೆದಿತ್ತು. ಸ್ಪೃಶ್ಯರು, ಅಸ್ಪೃಶ್ಯರು ಸೇರಿ ಒಳಗೊಂಡಂತೆ ಎಸ್ಸಿಗಳಲ್ಲಿ 101 ಪಂಗಡಗಳಿವೆ. ಭೋವಿ, ಲಂಬಾಣಿ, ಕೊರಚ, ಕೊರ್ಮ ಮೂಲ ಪರಿಶಿಷ್ಟ ಜಾತಿಯಲ್ಲಿದ್ದಾರೆ. ಎಸ್ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಆರ್ಟಿಕಲ್ 341/2 ಅನ್ವಯ ನಾಲ್ಕು ಗುಂಪುಗಳಿಗೂ ಎಸ್ಸಿ ಲೆಫ್ಟ್, ರೈಟ್, ಅಸ್ಪೃಶ್ಯರು, ಇತರರು, ಎಡಕ್ಕೆ ಶೇ.6, ಬಲಕ್ಕೆ ಶೇ.5.5, ಸ್ಪೃಶ್ಯರು ಶೇ.4.5 ಹಾಗೂ ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ ಎಂದರು.
ಒಳ ಮೀಸಲಾತಿಯ ದಶಕಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದ್ದು ದಲಿತ ಸಮುದಾಯದ ಏಳಿಗೆಯ ಬದ್ಧತೆಯನ್ನು ಮೆರೆದಿದೆ. ಎಡೆಗೈ, ಬಲಗೈ, ಭೋವಿ, ಬಂಜಾರಾ ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಬಿಜೆಪಿ ಸರ್ಕಾರದ ಈ ಐತಿಹಾಸಿಕ ನಿರ್ಣಯದಿಂದ ಮತ್ತಷ್ಟು ಸಾಮಾಜಿಕ ನ್ಯಾಯ ದೊರಕಲಿದೆ. #BJPYeBharavase pic.twitter.com/3trFHrBL9r
— BJP Karnataka (@BJP4Karnataka) March 24, 2023
ಇದನ್ನೂ ಓದಿ : ವರುಣಾದಿಂದ ಸಿದ್ದರಾಮಯ್ಯ ಅಖಾಡಕ್ಕೆ – ಕೋಲಾರ ಟಿಕೆಟ್ ಯಾರಿಗೆ?
3A, 3B ನಲ್ಲಿ ಒಕ್ಕಲಿಗ ಮತ್ತು ಇತರರು, ಲಿಂಗಾಯತ ಪಂಚಮಸಾಲಿ ಹಾಗೂ ಇತರರಿದ್ದು ಒಕ್ಕಲಿಗರ ಮೀಸಲಾತಿಯನ್ನು 4 ರಿಂದ ಶೇ.6ಕ್ಕೆ, ಲಿಂಗಾಯತ ಪಂಚಮಸಾಲಿಗೆ ಇದ್ದ ಶೇ.5 ಮೀಸಲಾತಿ ಶೇ.7ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಾಡು ಕುರುಬ, ಗೊಂಡ ಕುರುಬ ಈಗಾಗಲೇ ಹೋಗಿದೆ. ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಬಹುಕಾಲದಿಂದ ಸಮುದಾಯಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಳವನ್ನು ನಮ್ಮ ಸರ್ಕಾರ ಈಡೇರಿಸಿದೆ. ಒಕ್ಕಲಿಗ, ವೀರಶೈವ ಮತ್ತು ಒಳಪಂಗಡಗಳು ಸೇರಿದಂತೆ ಪ್ರವರ್ಗ 2C ಹಾಗೂ 2Dಯಲ್ಲಿ ಬರುವ ಸಮುದಾಯಗಳಿಗೆ ಶೇ.6 ಹಾಗೂ ಶೇ.7ಕ್ಕೆ ಮೀಸಲಾತಿಯನ್ನು ಏರಿಸಿ ಸಾಮಾಜಿಕ ನ್ಯಾಯದ ಬದ್ಧತೆ ಮೆರೆದಿದೆ.#BJPYeBharavase
1/2 pic.twitter.com/CSTEtsfmNz— BJP Karnataka (@BJP4Karnataka) March 24, 2023