ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ – ಟಿಕೆಟ್ ಅಂತಿಮಗೊಳಿಸಿ ಎಂದ ಮಾಜಿ ಸಿಎಂ..!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ನೀತಿ ಸಂಹಿತೆ ಜಾರಿಗೆ ತಯಾರಿ ಮಾಡಿಕೊಳ್ಳುವಂತೆ ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈ ಮೂಲಕ ಚುನಾವಣೆ ಯಾವಾಗ ಬೇಕಿದ್ರೂ ಘೋಷಣೆ ಆಗುವ ಸಾಧ್ಯತೆ ಇದೆ. ಆದರೆ ಚುನಾವಣೆ ಒಂದು ಕಡೆಯಾದ್ರೆ ವಿಪಕ್ಷನಾಯಕ ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆ ವಿಚಾರ ಜೋರಾಗಿ ನಡೆಯುತ್ತಿದೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಗೊಂದಲದ ನಡುವೆಯೇ ಹೊಸ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ
ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೀತಿದ್ರೆ ಮತ್ತೊಂದೆಡೆ ವಿಪಕ್ಷನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಭಾರೀ ಚರ್ಚೆಯಾಗ್ತಿದೆ. ಕೋಲಾರ, ಬಾದಾಮಿ, ಚಾಮರಾಜಪೇಟೆ, ಕುಷ್ಟಗಿ, ವರುಣಾ ಹೀಗೆ ಹಲವು ಕ್ಷೇತ್ರಗಳ ಹೆಸರು ತಳಕು ಹಾಕಿಕೊಳ್ತಿದೆ. ಆದ್ರೆ ಸಿದ್ದರಾಮಯ್ಯ ಅಂತಿಮವಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದು ಖಚಿತವಾಗುತ್ತಿದೆ. ಇದನ್ನ ಸ್ವತಃ ಸಿದ್ದರಾಮಯ್ಯರೇ ಹೇಳಿದ್ದಾರೆ.
ಕ್ಷೇತ್ರದ ಆಯ್ಕೆ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿರುವ ಸಿದ್ದು ‘25 ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ. ಎಲ್ಲಾ ಕಡೆಯೂ ಸ್ಪರ್ಧೆ ಸಾಧ್ಯವಿಲ್ಲ. ವರುಣಾದಿಂದ ಸ್ಪರ್ಧೆ ಮಾಡುವುದು ಸೂಕ್ತ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಾಗೇ ಮತ್ತೊಂದು ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ನಾನು ಕೂಡ ವರುಣಾ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸುವಂತೆ ಪಕ್ಷಕ್ಕೆ ತಿಳಿಸಿದ್ದೇನೆ. ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಗೊಂದಲದ ಚೆಂಡನ್ನ ಹೈಕಮಾಂಡ್ ಅಂಗಳಕ್ಕೆ ಹಾಕಿದ್ದಾರೆ.