SC, ST ಮೀಸಲಾತಿ ವಿಳಂಬ ನೀತಿಗೆ ಕಿಡಿ – ಸಿದ್ದು, ಡಿಕೆಶಿ ಸೇರಿ ‘ಕೈ’ ನಾಯಕರು ಪೊಲೀಸರ ವಶಕ್ಕೆ

SC, ST ಮೀಸಲಾತಿ ವಿಳಂಬ ನೀತಿಗೆ ಕಿಡಿ – ಸಿದ್ದು, ಡಿಕೆಶಿ ಸೇರಿ ‘ಕೈ’ ನಾಯಕರು ಪೊಲೀಸರ ವಶಕ್ಕೆ

ವಿಧಾನಸಭಾ ಚುನಾವಣೆ ಹತ್ತಿರದಲ್ಲೇ ಎಸ್‌ಸಿ, ಎಸ್‌ಟಿ ಮೀಸಲಾತಿ (SC, ST Reservation) ವಿಚಾರ ಮತ್ತೆ ಸದ್ದು ಮಾಡ್ತಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

SC, ST ಮೀಸಲಾತಿ ಹೆಚ್ಚಳ ಮಾಡಿ ಬಿಜೆಪಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ‌ ಶಿಫಾರಸ್ಸು ಮಾಡಿಲ್ಲ ಎಂದು‌ ಆರೋಪಿಸಿ ಕಾಂಗ್ರೆಸ್ (Congress) ಶುಕ್ರವಾರ ರಾಜಭವನ ಚಲೋ ಹಮ್ಮಿಕೊಂಡಿತ್ತು. ಕೆಪಿಸಿಸಿ ಕಚೇರಿಯಿಂದ (KPCC Office) ರಾಜಭವನಕ್ಕೆ ತೆರಳಲು ಮುಂದಾದಾಗ ಕಾಂಗ್ರೆಸ್‌ ನಾಯಕರನ್ನ ಅರ್ಧದಲ್ಲೇ ಪೊಲೀಸರು ತಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar), ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಸ್‌ನಲ್ಲಿ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ಚುನಾವಣಾ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಯ್ತಾ – ಚುನಾವಣಾಧಿಕಾರಿಗಳು ಬರೆದ ಪತ್ರದಲ್ಲೇನಿದೆ?  

ಪೊಲೀಸರು ವಶಕ್ಕೆ ಪಡೆಯುವ ಮುನ್ನ ಮಾತನಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ, ಬಿಜೆಪಿ (BJP) ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೋಸ ಮಾಡಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಅವರು ನಾವು ಪ್ರತಿಭಟನೆಗೆ ಮುಂದಾದ ಬಳಿಕ ಶಿಫಾರಸ್ಸು ಕಳುಹಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ನಾವು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಕೈಗೆತ್ತಿಕೊಂಡ ನಂತರ ಪರಿಶಿಷ್ಟ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ತರಾತುರಿಯಲ್ಲಿ ಕಣ್ಣೊರೆಸುವ ತಂತ್ರಕ್ಕೆ ಮೊರೆ ಹೋಗಿದೆ. ಇದು ಬಿಜೆಪಿ ಕರ್ನಾಟಕದ ಕಿವಿ ಮೇಲೆ ಹೂ ಇಡುವ ಕೆಲಸ ಎಂಬುದು ಸ್ಪಷ್ಟ. ಇಲ್ಲಿಯವರೆಗೆ ಸುಮ್ಮನಿದ್ದು, ಈಗ ಪ್ರಸ್ತಾವನೆ ಸಲ್ಲಿಸುವುದು ಮೂಗಿಗೆ ತುಪ್ಪ ಸವರಲು ಮಾತ್ರ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

suddiyaana