ಮದುವೆ ಖರ್ಚು ಹೆಚ್ಚಾಗಿದ್ದಕ್ಕೆ ಅತಿಥಿಗಳಿಗೆ ನೀರು ಮಾತ್ರ ಕೊಡಲು ನಿರ್ಧರಿಸಿದ ವಧು!

ಮದುವೆ ಖರ್ಚು ಹೆಚ್ಚಾಗಿದ್ದಕ್ಕೆ ಅತಿಥಿಗಳಿಗೆ ನೀರು ಮಾತ್ರ ಕೊಡಲು ನಿರ್ಧರಿಸಿದ ವಧು!

ಮದುವೆ ಅಂದಾಗ ಅಲ್ಲಿ ಊಟಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮದುವೆ ಎಷ್ಟೇ ಸಿಂಪಲ್ ಆಗಿ ಇದ್ರೂ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಇನ್ನೂ ಇತ್ತೀಚಿನ ದಿನಗಳಲ್ಲಂತೂ ನಮ್ಮ ಮದುವೆ  ಎಲ್ಲರಿಗಿಂತಲೂ ಡಿಫರೆಂಟ್ ಆಗಿರಬೇಕೆಂದು ಸ್ಪೆಷಲ್ ಅರೇಂಜ್‌ಮೆಂಟ್ಸ್ ಮಾಡಿಕೊಳ್ಳುತ್ತಾರೆ. ಮದುವೆ ಖರ್ಚಿಗಾಗಿ ಲಕ್ಷಗಟ್ಟಲೆ ಸಾಲವನ್ನೂ ಮಾಡುತ್ತಾರೆ. ಜಮೀನು, ಮನೆಯನ್ನು ಸಹ ಮಾರಿ ಮದುವೆ ಮಾಡುವವರೂ ಇದ್ದಾರೆ. ಆದ್ರೆ ಈ ಇಲ್ಲೊಬ್ಬಳು ವಧು ತನ್ನ ಮದುವೆಯಲ್ಲಿ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿದ್ದಾಳೆ. ಮದುವೆಗೆ ಬಂದ ಅತಿಥಿಗಳಿಗೆ ಕೂಲ್ಡ್‌ಡ್ರಿಂಕ್ಸ್, ಆಲ್ಕೋಹಾಲ್‌ ಕೊಡೋ ಬದಲು ನೀರನ್ನು ನೀಡಲು ನಿರ್ಧರಿಸಿದ್ದಾಳೆ.

ಇದನ್ನೂ ಓದಿ: ತಂದೆ ಮೃತದೇಹದ ಮುಂದೆಯೇ ಮದುವೆಯಾದ ಮಗ! – ಕಾರಣವೇನು ಗೊತ್ತಾ?

ಇಂದಿನ ದಿನಗಳಲ್ಲಿ ಮದುವೆ ದುಬಾರಿಯಾಗಿದೆ. ಮದುವೆ ಮಾಡಿ ಮುಗಿಸುವುದರೊಳಗೆ ವಧು, ವರರ ಪೋಷಕರು ರೋಸಿಹೋಗಿರುತ್ತಾರೆ. ಹೀಗಾಗಿ ಇಲ್ಲೊಬ್ಬಳು ಯುವತಿ ತನ್ನ ಮದುವೆಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಅಂತಾ ನಿರ್ಧರಿಸಿದ್ದಾಳೆ. ಅಷ್ಟೇ ಅಲ್ಲದೇ ವಧು, ವರರು  ತಮ್ಮ ಮದುವೆ ಖರ್ಚು ವೆಚ್ಚವನ್ನು ಅವರೇ ಭರಿಸಿದ್ದಾರೆ. ಹೀಗಾಗಿ ಅವರು ತಮ್ಮ  ಮದುವೆಯ ಊಟದ ಮೆನುವಿನಿಂದ ಆಲ್ಕೋಹಾಲ್ ಮತ್ತು ಇತರ ಪಾನೀಯಗಳನ್ನು ಕಡಿತಗೊಳಿಸಿದ್ದಾರೆ. ಅದರ ಬದಲಿಗೆ ಫಿಲ್ಟರ್‌ ನೀರನ್ನು ಸರ್ವ್ ಮಾಡಲು ಬಯಸಿದ್ದಾರೆ.

‘ನಮ್ಮ ಮದುವೆಯಲ್ಲಿ ಯಾವುದೇ ರೀತಿಯ ಮದ್ಯ ಇರುವುದಿಲ್ಲ. ಯಾಕೆಂದರೆ ನಾನು ಹಾಗೂ ನನ್ನ ಸಂಗಾತಿ ಮದ್ಯ ಕುಡಿಯುವುದಿಲ್ಲ. ಹೀಗಾಗಿ ನಾವು ಮದ್ಯ ಅಥವಾ ಕೂಲ್ಡ್ ಡ್ರಿಂಕ್ಸ್ ಗಳಿಗೆ ಪಾವತಿಸಲು ಬಯಸುವುದಿಲ್ಲ, ಇದು ಹೆಚ್ಚುವರಿ ವೆಚ್ಚವಾಗಿದೆ. ಇದಕ್ಕಿಂತ ನಾವು ಕಡಿಮೆ ವೆಚ್ಚದಲ್ಲಿ ಫಿಲ್ಟರ್ ನೀರನ್ನು ಕೊಡಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವಧು-ವರರ ಈ ನಿರ್ಧಾರವು  ಅನೇಕ ಅತಿಥಿಗಳನ್ನು ಅಸಮಾಧಾನಗೊಳಿಸಿದೆ. ವಧುವಿನ ನಿರ್ಧಾರಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮದುವೆ ಮನೆಯಲ್ಲಿ ಓಪನ್ ಬಾರ್‌ ಇಟ್ಟುಕೊಳ್ಳಬಹುದಿತ್ತು. ಇದು ಅತಿಥಿಗಳು ಹಣ ನೀಡಿ ಡ್ರಿಂಕ್ಸ್ ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಮದುವೆ ಮನೆಗೆ ಬಂದು ಎಲ್ಲರೂ ನೀರು ಕುಡಿಯಬೇಕು ಅಂತಾ ನಿರೀಕ್ಷಿಸುವುದು ತಪ್ಪು ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ. ಮತ್ತೊಬ್ಬರು ‘ನಾನು ಸಿಂಪಲ್ ವಿವಾಹವನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಮದುವೆಯಲ್ಲಿ ನೀರು ಮಾತ್ರ ಸರ್ವ್ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

suddiyaana