ದೆಹಲಿಯಲ್ಲಿ ಮೋದಿ ವಿರುದ್ಧ ಪೋಸ್ಟರ್ ವಾರ್! – 6 ಮಂದಿ ಬಂಧನ  

ದೆಹಲಿಯಲ್ಲಿ ಮೋದಿ ವಿರುದ್ಧ ಪೋಸ್ಟರ್ ವಾರ್! – 6 ಮಂದಿ ಬಂಧನ  

ನವದೆಹಲಿ: ಇಷ್ಟು ದಿನ ರಾಜ್ಯ ರಾಜಕೀಯದಲ್ಲಿ ಜೋರಾಗಿದ್ದ ಪೋಸ್ಟರ್ ವಾರ್ ಈಗ ದೆಹಲಿಯಲ್ಲೂ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯ ಹಲವೆಡೆ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಂಟಿಸಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನ ಬಂಧಿಸಿದ್ದಾರೆ. 44 ಕೇಸ್ ಗಳು ದಾಖಲಾಗಿವೆ.

ಇದನ್ನೂ ಓದಿ: ‘ಮುಂದಿನ ಸಲವೂ ನಾನೇ ಮುಖ್ಯಮಂತ್ರಿ’ ಎಂದ ಬೊಮ್ಮಾಯಿ – ಹೈಕಮಾಂಡ್​ ನಿಂದ ಸಿಕ್ಕಿತಾ ಸಮ್ಮತಿ?

ದೆಹಲಿಯಾದ್ಯಂತ ಮೋದಿ ಹಠಾವೋ..ದೇಶ್ ಬಚಾವೋ ಅನ್ನೋ ಸಾವಿರಾರು ಪೋಸ್ಟರ್ನ್ನ ಅಂಟಿಸಲಾಗಿದೆ. ಇದುವರೆಗೆ ಪೊಲೀಸರು ಎರಡು ಸಾವಿರಕ್ಕೂ ಅಧಿಕ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದಾರೆ. ಈ ನಡುವೆ ಮೋದಿ ವಿರೋಧಿ ಪೋಸ್ಟರ್ ಗಳನ್ನ ಸಾಗಿಸ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ವೇಲೆ ಚಾಲಕ, ಆಮ್ ಆದ್ಮಿ ಪಕ್ಷದ ಮುಖ್ಯ ಕಚೇರಿಗೆ ಸಾಗಿಸ್ತಿದ್ದೆ ಅಂತಾ ಹೇಳಿದ್ದಾನೆ. ಅಷ್ಟೇ ಅಲ್ಲ, ಸೋಮವಾರದಂದು ಕೂಡ ಆಪ್ ಕಚೇರಿಗೆ ಪೋಸ್ಟರ್ಗಳನ್ನ ಸಾಗಿಸಿದ್ದೆ ಎಂದಿದ್ದಾನೆ.

ಇನ್ನು ಮೋದಿ ವಿರೋಧ ಪೋಸ್ಟರ್ ವಿರುದ್ಧ ಪೊಲೀಸರ ಕ್ರಮಕ್ಕೆ ಆಪ್ ಕೆಂಡಾಮಂಡಲವಾಗಿದೆ. ಪೋಸ್ಟರ್ ಅಂಟಿಸಿ ಪ್ರತಿಭಟಿಸೋಕೆ ಸ್ವಾತಂತ್ರ್ಯವಿಲ್ಲ. ಇದು ಮೋದಿ ಸರ್ಕಾರದ ಸರ್ವಾಧಿಕಾರಿತನದ ಪರಮಾವಧಿ ಅಂತಾ ಟೀಕಾ ಪ್ರಹಾರ ಮಾಡಿದೆ.

suddiyaana