ಭಾರಿ ಪ್ರಮಾಣದ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಾ ಚಾಟ್ ಜಿಟಿಪಿ?
ಇದು ಸಂಪೂರ್ಣ ಡಿಜಿಟಲ್ ಯುಗ. ಎಲ್ಲಾ ಕೆಲಸ ಕುಳಿತಲ್ಲೇ ಆಗುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಹೀಗಿರುವಾಗ ಜನರು ಕೂಡ ಈ ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಹೀಗಾಗಿ ಅನೇಕ ಕಂಪನಿಗಳು ಹೊಸ ಹೊಸ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ಕೆಲಸದಲ್ಲಿ ಮಾನವ ಅವಲಂಬನೆಯನ್ನು ಕಡಿಮೆಗೊಳಿಸುತ್ತಿದೆ. ಈ ತಂತ್ರಜ್ಞಾನವೇ ಉದ್ಯೋಗ ನಷ್ಕಕ್ಕೆ ಕಾರಣವಾಗಲಿದ್ಯಾ ಅನ್ನೋ ಅನುಮಾನ ಕಾಡೋಕೆ ಶುರುವಾಗಿದೆ.
ಆಧುನಿಕ ತಂತ್ರಜ್ಞಾನ ಲೋಕದ ಹೊಸ ಭಾಷ್ಯ ಎಂದೇ ಕರೆಸಿಕೊಳ್ಳುತ್ತಿರುವ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಚಾಟ್ ಜಿಟಿಪಿಯಿಂದ ಭಾರಿ ಪ್ರಮಾಣದ ಉದ್ಯೋಗ ನಷ್ಟ ಅನುಭವಿಸಲಿದೆ ಅಂತಾ ಚಾಟ್ ಜಿಟಿಪಿ ಮಾತೃಸಂಸ್ಥೆ ಓಪನ್ ಐ ಕಂಪನಿ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಕ್ಕಿನ ಗಾತ್ರದ ಇಲಿಗಳು ಪತ್ತೆ! – ಮನುಷ್ಯರನ್ನೂ ಭಯ ಬೀಳಿಸುತ್ತವೆ ಈ ಮೂಷಿಕಗಳು
ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಚಾಟ್ ಜಿಟಿಪಿ ತಂತ್ರಜ್ಞಾನ ಸುಮಾಜದ ಹಲವು ಸ್ಥರಗಳಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಹೀಗಾಗಿ ಈ ತಂತ್ರಜ್ಞಾನ ಭಾರಿ ಪ್ರಮಾಣದ ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಆಲ್ಟ್ ಮ್ಯಾನ್ ಅಭಿಪ್ರಾಯಪಟ್ಟಿದ್ದಾರೆ.
ಈಗಿರುವ ಸಮಾಜವನ್ನು ಮತ್ತಷ್ಟು ಉತ್ತಮಗೊಳಿಸಲು ತಂತ್ರಜ್ಞಾನ ನೆರವಾಗಿದೆ. ಮನುಕುಲದ ಏಳ್ಗೆಗೆ ಕಂಡುಕೊಂಡ ತಂತ್ರಜ್ಞಾನಗಳಲ್ಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಿದೆ. ಆದರೂ ನಾವು ಸಾಕಷ್ಟು ಎಚ್ಚರದಿಂದ ಇರಬೇಕಾಗುತ್ತವೆ. ಏಕೆಂದರೆ ಚಾಟ್ ಜಿಟಿಪಿ ಅನೇಕ ಉದ್ಯೋಗ ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ನಮಗೂ ಆತಂಕವಿದೆ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.