ಬೆಕ್ಕಿನ ಗಾತ್ರದ ಇಲಿಗಳು ಪತ್ತೆ! – ಮನುಷ್ಯರನ್ನೂ ಭಯ ಬೀಳಿಸುತ್ತವೆ ಈ ಮೂಷಿಕಗಳು
ಸಾಮಾನ್ಯವಾಗಿ ಇಲಿಗಳು ಎಲ್ಲಾ ಕಡೆ ಇರುತ್ತವೆ. ಇಲಿಗಳನ್ನು ಕಂಡ ಕೂಡಲೇ ಬೆಕ್ಕುಗಳು ಅಟ್ಟಿಸಿಕೊಂಡು ಹೋಗುತ್ತವೆ. ಆದರೆ ಈ ನಗರದಲ್ಲಿ ಮಾತ್ರ ಇಲಿಗಳನ್ನು ಕಂಡರೆ ಬೆಕ್ಕುಗಳೇ ಭಯಪಡುತ್ತವೆ ಅಂದರೆ ನೀವು ನಂಬಲೇ ಬೇಕು.
ಹೌದು, ವೇಲ್ಸ್ ನಗರದ ಕಡಲತೀರ ಪ್ರದೇಶದಲ್ಲಿ ದೈತ್ಯಾಕಾರದ ಇಲಿಗಳು ಪತ್ತೆಯಾಗಿವೆ. ಈ ಇಲಿಗಳನ್ನು ಕಂಡು ಬೆಕ್ಕುಗಳು ಮಾತ್ರವಲ್ಲ ಮನುಷ್ಯರು ಭಯಪಡುವಂತೆ ಆಗಿದೆ.
ಇದನ್ನೂ ಓದಿ: ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?
ವೇಲ್ಸ್ ನಗರದ ಟೆನ್ ಬಿಯ ಕ್ಯಾಸಲ್ ಬೀಚ್ ಸುತ್ತಮುತ್ತ ಕಳೆದ ಕೆಲವು ತಿಂಗಳಿನಿಂದ ಬೆಕ್ಕಿನ ಗಾತ್ರದ ಇಲಿಗಳು ಪತ್ತೆಯಾಗುತ್ತಿವೆ. ಈ ಇಲಿಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿ ಮಾಡುತ್ತಿವೆ. ಈ ಇಲಿಗಳ ಹಲ್ಲುಗಳು ದೈತ್ಯವಾಗಿರುವುದರಿಂದ ಕಾಂಕ್ರೀಟ್ ನೆಲವನ್ನು ಕೂಡ ಸಲೀಸಾಗಿ ಕೊರೆಯುವ ಸಾಮರ್ಥ್ಯ ಹೊಂದಿವೆ ಅಂತಾ ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.
ದೈತ್ಯ ಇಲಿಗಳು ಈಗಾಗಲೇ ಜನವಸತಿ ಪ್ರದೇಶಗಳಲ್ಲಿ ಭೂಮಿ ಕೊರೆದು ವಾಸಿಸುತ್ತಿವೆ. ಈ ಇಲಿಗಳು ಸುಮಾರು 20 ಇಂಚು ಉದ್ದವಾಗಿರುತ್ತವೆ. ದೈತ್ಯ ಹೆಣ್ಣು ಇಲಿಗಳು ವರ್ಷಕ್ಕೆ ಆರು ಬಾರಿ ಮರಿ ಹಾಕುತ್ತವೆ. ಒಂದು ಬಾರಿ ಮರಿ ಹಾಕಿದಾಗ ಸುಮಾರು 12 ಮರಿಗಳಿಗೆ ಜನ್ಮ ನೀಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ನಗರದಲ್ಲಿ ದೈತ್ಯ ಇಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೆಂಬ್ರೋಕೆಶೈರ್ ಕೌನ್ಸಿಲ್ ಜನರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲಿನ ನಿವಾಸಿಗಳು ಯಾವುದೇ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಬಾರದು ಎಂದು ಹೇಳಿದೆ. ಇಲಿಗಳು ವಾಸಿಸುತ್ತಿರುವ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ, ಇಲಿ ಗೂಡು, ಕಡಲಿನ ಬಳಿ ಇರುವ ಬಂಡೆಗಳನ್ನು ಪರಿಶೀಲಿಸುತ್ತಿದ್ದಾರೆ.
‘ಕೆಲವೊಂದು ಇಲಿಗಳು ಬೆಕ್ಕುಗಳಿಗಿಂತ ದೊಡ್ಡದಾಗಿವೆ. ಅವುಗಳು ಈಗಾಗಲೇ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡುತ್ತಿವೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.