ರೌಡಿ ಸುನೀಲನ ರಾಜಕೀಯ ಕನಸಿಗೆ ಎಳ್ಳುನೀರು ಬಿಟ್ಟ ಬಿಜೆಪಿ – ಸದಸ್ಯತ್ವ ರದ್ದುಗೊಳಿಸಿದ ಕೇಸರಿ ಬ್ರಿಗೇಡ್!   

ರೌಡಿ ಸುನೀಲನ ರಾಜಕೀಯ ಕನಸಿಗೆ ಎಳ್ಳುನೀರು ಬಿಟ್ಟ ಬಿಜೆಪಿ – ಸದಸ್ಯತ್ವ ರದ್ದುಗೊಳಿಸಿದ ಕೇಸರಿ ಬ್ರಿಗೇಡ್!   

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರೌಡಿಗಳ ಆಟ ಜೋರಾಗಿದೆ. ಇಷ್ಟು ದಿನ ತೆರೆಮರೆಯಲ್ಲಿದ್ದವರೆಲ್ಲಾ ಪಕ್ಷಗಳಿಗೆ ಎಂಟ್ರಿ ಕೊಡೋ ಮೂಲಕ ರಾಜಕೀಯದತ್ತ ಮುಖ ಮಾಡ್ತಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕರ ಜೊತೆ ಸಾಲು ಸಾಲು ಪುಡಿರೌಡಿಗಳು ಕಾಣಿಸಿಕೊಂಡಿದ್ದರು. ಪಕ್ಷದ ಬಾವುಟ ಹಿಡಿಯೋದರ ಜೊತೆಗೆ ವೇದಿಕೆ ಮೇಲೆ ಸಚಿವರು, ಶಾಸಕರ ಜೊತೆಯೇ ಕಾಣಿಸಿಕೊಂಡಿದ್ದರು. ಚಾಮರಾಜಪೇಟೆಯಲ್ಲಿ ರೌಡಿಶೀಟರ್ ಸೈಲೆಂಟ್ ಸುನಿಲ ಕೂಡ ಬಿಜೆಪಿ ಲೀಡರ್ಸ್ ಜೊತೆ ವೇದಿಕೆ ಏರಿದ್ದ. ಈಗ ಸೈಲೆಂಟ್ ಸುನೀಲ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ ಎನ್ನುವ ಕಾರ್ಡ್ ವೈರಲ್ ಆಗಿದೆ.

ಇದನ್ನೂ ಓದಿ : ಕೋಲಾರ ರಣಕಣದಿಂದ ಹಿಂದೆ ಸರಿದ ಸಿದ್ದರಾಮಯ್ಯ – ಕಾರಣಗಳೇನು.. ಯಾವ ಕ್ಷೇತ್ರದಿಂದ ಸ್ಪರ್ಧೆ..?

ಇವರಲ್ಲಿ ರೌಡಿಶೀಟರ್ ಸೈಲೆಂಟ್ ಸುನೀಲ (Silent Sunila) ಕೂಡ ಒಬ್ಬನಾಗಿದ್ದು, ಬಿಜೆಪಿ ಸದಸ್ಯತ್ವ ಪಡೆದಿದ್ದ. ಈ ಸದಸ್ಯತ್ವದ ಐಡಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ. ಸುನೀಲ್ ಬಿಜೆಪಿ (BJP Karnataka) ಸೇರಿದ್ದ ಬಗ್ಗೆ ಫೋಟೋ ವೈರಲ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸುನೀಲ್ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ಸದಸ್ಯತ್ವ ನೋಂದಣಿ ವೇಳೆ ಆನ್‌ಲೈನ್‌ ಮೂಲಕ ಬಿಜೆಪಿ ಸದಸ್ಯತ್ವ ಪಡೆದಿದ್ದನು. ಈ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಘಟಕದಿಂದ ರದ್ದುಪಡಿಸಿದ್ದೇವೆ. ಸುನೀಲ್ ಸದಸ್ಯತ್ವ ರದ್ದಿನ ಬಗ್ಗೆ ರಾಜ್ಯ ಘಟಕಕ್ಕೂ ಶಿಫಾರಸು ಮಾಡಲಾಗಿದೆ. ಈ ರೀತಿಯ ಘಟನೆಯಿಂದ ಬಿಜೆಪಿಗೂ ಮುಜುಗರವಾಗಿದೆ ಎಂದಿದ್ದಾರೆ.

ರೌಡಿಸಂ ಹಾಗೂ ರಾಜಕಾರಣಿಗಳಿಗೂ ಎಲ್ಲಿಲ್ಲದ ನಂಟು. ಯಾಕಂದ್ರೆ ರಾಜಕೀಯ ತೆರೆಯ ಮುಂದಿನ ಕೆಲಸ ಮಾಡಿದರೆ, ರೌಡಿಸಂ ತೆರೆಯ ಹಿಂದಿನ ಕೆಲಸ ಮಾಡುತ್ತದೆ. ರೌಡಿಸಂ ಹಿನ್ನೆಲೆಯಿರುವ ಸೋಕಾಲ್ಡ್ ಡಾನ್​ಗಳು ಈಗ ರಾಜಕೀಯಕ್ಕೆ ಬರಲು ಮುಂದಾಗಿದ್ದಾರೆ. ಇಂಥವರ ಪೈಕಿ ಸೈಲೆಂಟ್ ಸುನೀಲ ಸಹ ಒಬ್ಬನಾಗಿದ್ದನು. ಒಂದು ಕಾಲದ ಗೂಂಡಾ, ರೌಡಿಶೀಟರ್ ಹಾಗೂ ಬೆಂಗಳೂರಿನಲ್ಲಿ ಹವಾ ಇಟ್ಟಿದ್ದ ಸೈಲೆಂಟ್ ಸುನೀಲ ಈಗ ಸೈಲೆಂಟಾಗಿ ರೌಡಿ ಪಟ್ಟದಿಂದ ರಾಜಕೀಯ ಪುಢಾರಿ ಪಟ್ಟಕ್ಕೆ ಏರಿ ಕೂರಲು ಸಜ್ಜಾಗಿ ನಿಂತಿದ್ದ. ಅದಕ್ಕೆ ಸಾಕ್ಷಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ. ಸದ್ಯ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್​ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ಭವಿಷ್ಯ ಕಟ್ಟಿಕೊಳ್ಳಲು ಸೈಲೆಂಟಾಗಿ ಸುನೀಲ ಸ್ಕೆಚ್ ಹಾಕಿದ್ದ. ಇದು ಬೆಂಗಳೂರಿನ ಮಟ್ಟಿಗೆ ಭಾರಿ ಸಂಚಲನದ ಜೊತೆಗೆ ವಿವಾದವನ್ನೂ ಸೃಷ್ಟಿಸಿತ್ತು.

suddiyaana