ಮದುವೆಯಾದ ಮೂರೇ ದಿನಕ್ಕೆ ಪತಿ ಎಸ್ಕೇಪ್ –  ಮದುವೆ ಅಲ್ಲ ಶಾರ್ಟ್ ಮೂವಿ ಅಂದ ಭೂಪ  

ಮದುವೆಯಾದ ಮೂರೇ ದಿನಕ್ಕೆ ಪತಿ ಎಸ್ಕೇಪ್ –  ಮದುವೆ ಅಲ್ಲ ಶಾರ್ಟ್ ಮೂವಿ ಅಂದ ಭೂಪ  

ಬೆಂಗಳೂರು: ಮದುವೆಯಾದ ಮೂರೇ ದಿನಕ್ಕೆ ಪತಿ ಪರಾರಿಯಾಗಿದ್ದಾನೆಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ವೇಳೆ ಆತನನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಆತ ಹೇಳಿದ್ದನ್ನು ಕೇಳಿ ಪೊಲೀಸರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಸುರೇಶ್ ಹಾಗೂ ಧರಣಿ ಇಬ್ಬರು 1 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಫೆಬ್ರವರಿ 15 ರಂದು ದೇವಸ್ಥಾನವೊಂದರಲ್ಲಿ ಇಬ್ಬರೂ ಮದುವೆಯಾಗಿದ್ದರು. ಪತಿ ಸುರೇಶ್ ಮದುವೆಯಾದ ಮೂರು ದಿನಗಳ ಬಳಿಕ ಬಿಟ್ಟು ಹೋಗಿದ್ದಾನೆ. ಅಷ್ಟೇ ಅಲ್ಲದೇ ಫೆಬ್ರವರಿ 18 ರಂದು ಮನೆಗೆ ಬಂದು ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾನೆ. ಪತ್ನಿ ಸುರೇಶ್ ಗಾಗಿ ಕಾದು ಕಾದು ಬಳಿಕ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇದನ್ನೂ ಓದಿ: ಯುವಕರಿಲ್ಲದೆ ಕಂಗೆಟ್ಟ ಚೀನಾದಿಂದ ಹೊಸ ಪ್ರಯೋಗ – ವಯಸ್ಸಾದವರನ್ನೇ ಮತ್ತಷ್ಟು ದುಡಿಸಲು ಪ್ಲ್ಯಾನ್!

ಪತ್ನಿ ಧರಣಿ ದೂರಿನ ಆಧಾರದ ಮೇಲೆ ಸುರೇಶ್ ನನ್ನು ಪೊಲೀಸರು ಠಾಣೆಗೆ ಕರೆಸಿ ಮದುವೆಯಾದ ಫೋಟೋಗಳನ್ನು ತೋರಿಸಿ ವಿಚಾರಿಸಿದ್ದಾರೆ. ಈ ವೇಳೆ ನಾನು ಈಕೆಯನ್ನು ಮದುವೆಯಾಗಿಲ್ಲ. ಇದು ಮದುವೆಯ ಫೋಟೋಗಳಲ್ಲ. ಶಾರ್ಟ್ ಮೂವಿಗಾಗಿ ತೆಗೆದ ಫೋಟೋಗಳಾಗಿವೆ. ಆಕೆಯೊಂದಿಗೆ ಕೇವಲ ಸ್ನೇಹಿತನಾಗಿದ್ದೆ ಅಂತಾ ಪೊಲೀಸರಿಗೆ ಹೇಳಿದ್ದಾನೆ. ಇದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ಫೆಬ್ರವರಿ 13ರಂದು ನಾವಿಬ್ಬರೂ ಮದುವೆಯಾಗಿದ್ದೆವು.  ಫೆ. 13ರಿಂದ 17ರವರೆಗೆ ಪತಿ-ಪತ್ನಿ ಇಬ್ಬರೂ ಜೊತೆಗೆ ಇದ್ದೆವು. ಆದರೆ, ಫೆಬ್ರವರಿ 18 ರಂದು ಮನೆಗೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ವಿವಾಹವಾಗಿ ಮೂರೇ ದಿನಗಳ ಅಂತರದಲ್ಲಿ ಪತಿ ನನ್ನಿಂದ ದೂರವಾಗಿದ್ದಾನೆ  ಎಂದು ಧರಣಿ ದೂರಿನಲ್ಲಿ ತಿಳಿಸಿದ್ದಾಳೆ.

ಧರಣಿಗೆ 2016 ರಲ್ಲಿ ಮದುವೆಯಾಗಿತ್ತು. ಕೌಟುಂಬಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದಳು. ಈ ಎಲ್ಲಾ ವಿಚಾರಗಳು ಸುರೇಶ್ ಗೂ ತಿಳಿಸಿದ್ದ ಧರಣಿ ಬಳಿಕ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಸುರೇಶ್ ಮೂರೇ ದಿನಕ್ಕೆ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

suddiyaana