33 ಕೊಲೆ ಮಾಡಿದವನಿಗೆ 1,310 ವರ್ಷ ಜೈಲು! – ಅಚ್ಚರಿಯ ಶಿಕ್ಷೆ ವಿಧಿಸಿದ್ದೇಕೆ ಕೋರ್ಟ್?

33 ಕೊಲೆ ಮಾಡಿದವನಿಗೆ 1,310 ವರ್ಷ ಜೈಲು! – ಅಚ್ಚರಿಯ ಶಿಕ್ಷೆ ವಿಧಿಸಿದ್ದೇಕೆ ಕೋರ್ಟ್?

ಸಾಮಾನ್ಯವಾಗಿ ಕೊಲೆ, ಕಳ್ಳತನ, ದರೋಡೆ ಮಾಡಿದ ಆರೋಪಿಗಳಿಗೆ ಆರೋಪ ಸಾಬೀತಾದ ಮೇಲೆ ಕೋರ್ಟ್ ಅಪರಾಧಗಳಿಗನುಸಾರ ಶಿಕ್ಷೆ ವಿಧಿಸುತ್ತೆ. ಇನ್ನು ಆ ಅಪರಾಧಿ ದೊಡ್ಡ ಗ್ಯಾಂಗ್ ಸ್ಟರ್ ಆಗಿದ್ರೆ ಆತನಿಗೆ ಜೀವಾವಧಿ ಶಿಕ್ಷೆ, ಮರಣದಂಡನೆ ನೀಡೋದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಆರೋಪಿಗೆ ವಿಚಿತ್ರ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: 80 ಲಕ್ಷ ರೂ. ಆಫರ್ ಕೊಟ್ರೂ ಮಾಸ್ಕ್ ತೆಗೆಯದ ಮಹಿಳೆ – ಅಸಲಿ ಕಾರಣ ಏನು ಗೊತ್ತಾ..?

33 ಕೊಲೆ, 9 ಕೊಲೆ ಸಂಚು ಹಾಗೂ ಹಲವಾರು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದ ಅಪರಾಧಿಗೆ ಮಧ್ಯ ಅಮೆರಿಕದ ಎಲ್ ಸಾಲ್ವಡಾರ್ ರಾಷ್ಟ್ರದಲ್ಲಿ ಬರೋಬ್ಬರಿ 1,310 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ವಿಚಿತ್ರವಾದ್ರೂ ಸತ್ಯ.

ವಿಲ್ಮರ್ ಸೆಗೋವಿಯಾ ಎನ್ನುವ ಕುಖ್ಯಾತ ಗ್ಯಾಂಗ್ ಸ್ಟರ್ ಮಾರಾ ಸಾಲ್ವಟ್ರುಚಾ ಗ್ಯಾಂಗ್ ನ ಸದಸ್ಯನಾಗಿದ್ದಾನೆ. ಈತನನ್ನು MS-13 ಅಂತಾ ಕರೆಯುತ್ತಾರೆ. ಕೊಲೆ, ದಾಳಿಗಳು, ಬೆಂಕಿ ಹಚ್ಚುವಿಕೆ, ಸುಲಿಗೆ ಮುಂತಾದ ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಆತನಿಗೆ ದೀರ್ಘಕಾಲದ ಶಿಕ್ಷೆ ವಿಧಿಸಲಾಗಿದೆ. ಈತನೊಂದಿಗೆ ಮಿಗುಯೆಲ್ ಏಂಜೆಲ್ ಪೋರ್ಟಿಲೋ ಎನ್ನುವ ಮತ್ತೊಬ್ಬ ಅಪರಾಧಿಗೂ 945 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ದೇಶದಲ್ಲಿ ಕ್ರಿಮಿನಲ್ ಕೇಸ್ ಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲದೇ ಗ್ಯಾಂಗ್ ಸ್ಟರ್ ಗಳನ್ನು ಹತ್ತಿಕ್ಕೋ ಉದ್ದೇಶದಿಂದ ಅಧ್ಯಕ್ಷ ನಯೀಬ್ ಬುಕೆಲೆ ಈ ವಿಚಿತ್ರ ಶಿಕ್ಷೆಯನ್ನು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಗ್ಯಾಂಗ್ ಸ್ಟರ್ ಗಳನ್ನು ಶಿಕ್ಷೆಗೆ ಒಳಪಡಿಸಿ ಅವರನ್ನು ಇತ್ತೀಚೆಗಷ್ಟೇ ನಿರ್ಮಿಸಿದ ಬೃಹತ್ ಜೈಲಿಗೆ ದೂಡಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

suddiyaana