ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ – 10 ಸಾವಿರ ನೌಕರರನ್ನ ವಜಾಗೊಳಿಸಲು ತೀರ್ಮಾನ..!

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ – 10 ಸಾವಿರ ನೌಕರರನ್ನ ವಜಾಗೊಳಿಸಲು ತೀರ್ಮಾನ..!

ಟೆಕ್ ದೈತ್ಯ ಸಂಸ್ಥೆಗಳಲ್ಲಿ ನೌಕರರ ವಜಾ ಸರಣಿ ಮುಂದುವರಿದಿದೆ. ಫೇಸ್​ಬುಕ್ ಮಾತೃಸಂಸ್ಥೆ ಮೆಟಾ ಮತ್ತೊಂದು ಸುತ್ತಿನಲ್ಲಿ ತನ್ನ ಸಿಬ್ಬಂದಿಯನ್ನ ವಜಾಗೊಳಿಸಲು ಮುಂದಾಗಿದೆ. ಈ ಸಲ ಬರೋಬ್ಬರಿ 10,000 ಕಾರ್ಮಿಕರನ್ನು ಕಡಿತ ಮಾಡಲಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

ಮೆಟಾ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, 10,000 ಕಾರ್ಮಿಕರನ್ನು ವಜಾಗೊಳಿಸಲಿದೆ ಎಂದು ವರದಿಯೊಂದು ತಿಳಿಸಿದೆ. ಜೊತೆಗೆ ಮೆಟಾ ಸಂಸ್ಥೆಯಲ್ಲಿ 5,000 ಓಪನ್ ಉದ್ಯೋಗಗಳನ್ನು ಸಹ ಭರ್ತಿ ಮಾಡುವುದಿಲ್ಲ ಎಂದು ತೀರ್ಮಾನಿಸಿದೆ. ನಾಲ್ಕು ತಿಂಗಳ ಹಿಂದಷ್ಟೇ 11,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೆಟಾ, ಮತ್ತೆ 10,000 ಉದ್ಯೋಗಗಳನ್ನು ಕಡಿತಗೊಳಿಸಲು ಮುಂದಾಗಿದೆ.

ಇದನ್ನೂ ಓದಿ : 1,300 ಉದ್ಯೋಗಿಗಳ ಬೆನ್ನಲ್ಲೇ ಅಧ್ಯಕ್ಷರಿಗೂ ಗೇಟ್ ಪಾಸ್ – ‘ಜೂಮ್’ನಲ್ಲಿ ಸಿಬ್ಬಂದಿ ವೇತನಕ್ಕೂ ಕತ್ತರಿ..!

ಉದ್ಯೋಗ ಕಡಿತದ ಘೋಷಣೆಯ ಬೆನ್ನಲ್ಲೇ ಕಂಪನಿಯ ಷೇರು ಬೆಲೆ ಶೇಕಡಾ 6ರಷ್ಟು ಜಿಗಿದಿದೆ. ‘ಏಪ್ರಿಲ್‌ ಮತ್ತು ಮೇನಲ್ಲಿ ಬಹುತೇಕ ಉದ್ಯೋಗಗಳ ಕಡಿತ ಘೋಷಣೆಯಾಗಲಿವೆ. ಈ ಪ್ರಕ್ರಿಯೆ ವರ್ಷವಿಡೀ ಮುಂದುವರಿಯಬಹುದು’ ಎಂದು ಮೆಟಾದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌ ತಿಳಿಸಿದ್ದಾರೆ.

ಕಂಪನಿಯು ದೊಡ್ಡಮಟ್ಟದ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವುದರಿಂದ 2ನೇ ಸುತ್ತಿನಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. Lay Off ಸುದ್ದಿ ಹೊರಬಿದ್ದ ನಂತರ Metaದ ಷೇರುಗಳು ಶೇ6ರಷ್ಟು ಏರಿಕೆಯಾಗಿದೆ. ಉದ್ಯೋಗ ಕಡಿತದ ಜೊತೆಗೆ ಕಂಪನಿಯು 5 ಸಾವಿರ ಹೊಸ ಉದ್ಯೋಗಿಗಳ ನೇಮಕಾತಿಯನ್ನು ರದ್ದುಗೊಳಿಸಿದೆ.

ಹೆಚ್ಚುತ್ತಿರುವ ಬಡ್ಡಿದರಗಳಿಂದ ಆರ್ಥಿಕ ಕುಸಿತದ ಚಿಂತೆಗಳು ಕಾರ್ಪೊರೇಟ್ ಅಮೆರಿಕದಾದ್ಯಂತ ಸಾಮೂಹಿಕ ಉದ್ಯೋಗ ಕಡಿತ ನಡೆಯುತ್ತಿದೆ. ವಾಲ್ ಸ್ಟ್ರೀಟ್ ಬ್ಯಾಂಕ್‌ಗಳಾದ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿಯಿಂದ ಹಿಡಿದು Amazon.com ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಬಿಗ್ ಟೆಕ್ ಸಂಸ್ಥೆಗಳು ತಮ್ಮ ಉದ್ಯೋಗಗಳಿಗೆ ಗೇಟ್‍ಪಾಸ್ ನೀಡುತ್ತಿವೆ.

suddiyaana