ಮದುವೆ ಮನೆಯಲ್ಲಿ ‘ಧಮ್’ ಎಳೆದ ಬಾಲಿವುಡ್ ಬೆಡಗಿ – ಅನನ್ಯಾ ಪಾಂಡೆ ನೋಡಿ ಅಭಿಮಾನಿಗಳು ಶಾಕ್

ಮದುವೆ ಮನೆಯಲ್ಲಿ ‘ಧಮ್’ ಎಳೆದ ಬಾಲಿವುಡ್ ಬೆಡಗಿ – ಅನನ್ಯಾ ಪಾಂಡೆ ನೋಡಿ ಅಭಿಮಾನಿಗಳು ಶಾಕ್

ನಟ ನಟಿಯರು ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ. ಅದರಲ್ಲೂ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಕೂಡಾ ತನ್ನದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಲೈಗರ್ ಸಿನಿಮಾದ ನಂತರ ಅನನ್ಯಾ ಪಾಂಡೆ ಸಾಕಷ್ಟು ಫೇಮಸ್ ಕೂಡಾ ಆಗಿದ್ದರು. ಆದರೆ, ಅನನ್ಯಾ ಪಾಂಡೆ ಬರೀ ಇಂಟರ್‌ವ್ಯೂನಲ್ಲಿ ಏನೇನೋ ಮಾತಾಡಿದ್ದಳು ಅಂತಾ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಬೇಜಾರಾಗಿತ್ತು. ಸೆಕ್ಸ್ ಬಗ್ಗೆ ಮಾತಾಡಿ ಅಭಿಮಾನಿಗಳಿಗೆ ಹರ್ಟ್ ಮಾಡಿದ್ದ ಅನನ್ಯಾ ಪಾಂಡೆ ಈಗ ಮದುವೆ ಮನೆಯಲ್ಲಿ ಆರಾಮಾಗಿ ಧಮ್ ಎಳೆಯುವುದರ ಮತ್ತಷ್ಟೂ ಹಲ್‌ಚಲ್ ಸೃಷ್ಟಿಸಿದ್ದಾರೆ.

ಇದನ್ನೂ ಓದಿ:  ಆಸ್ಕರ್ ಗೆದ್ದ ‘ನಾಟು ನಾಟು’ ನೋಡಲು ಮುಗಿಬಿದ್ದ ಜನ – 24 ಗಂಟೆಗಳಲ್ಲೇ ಅದೆಷ್ಟು ಮಿಲಿಯನ್ ವೀಕ್ಷಣೆ..?

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರ ಸಂಬಂಧಿ ಅಲನಾ ಪಾಂಡೆ ಅವರ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಮಾರ್ಚ್ 14ರಂದು ಮೆಹಂದಿ ಕಾರ್ಯಕ್ರಮವಿತ್ತು. ಇದರಲ್ಲಿ ಅನನ್ಯಾ ಪಾಂಡೆ ಪಾಲ್ಗೊಂಡಿದ್ದರು. ಕುಟುಂಬದವರೆಲ್ಲಾ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಅನನ್ಯಾ ಮಾತ್ರ ಧಮ್ ಎಳೆದುಕೊಂಡು ನಿಂತಿದ್ದರು. ಇದನ್ನು ಕಾರ್ಯಕ್ರಮಕ್ಕೆ ಬಂದವರು ವಿಡೀಯೋ ಮಾಡಿದ್ದಾರೆ. ನಂತರ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಅನನ್ಯಾ ಸಿಗರೇಟು ಸೇದುತ್ತಾ ನಿಂತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಡಿಯೋವನ್ನು ಡಿಲೀಟ್ ಮಾಡಿಸುವ ಪ್ರಯತ್ನ ಕೂಡ ನಡೆದಿದೆಯಂತೆ. ಅಷ್ಟರಲ್ಲಿ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನನ್ಯಾ ಪಾಂಡೆ ಅವರ ಈ ನಡೆಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಸ್ಟಾರ್ ಕಿಡ್ಸ್ ಯಾವತ್ತಿಗೂ ಹೀಗೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಬಹುಶಃ ವಿಜಯ್ ದೇವರಕೊಂಡ ಅವರೇ ಕಲಿಸಿರಬೇಕು ಎಂದು ಕಾಲೆಳೆದವರೂ ಇದ್ದಾರೆ. ಈ ನಟಿಗೆ ಇಂಥದ್ದೊಂದು ಕೆಟ್ಟ ಅಭ್ಯಾಸ ಇದೆ ಎಂದು ಗೊತ್ತಿರಲಿಲ್ಲ ಎಂದು ಅಚ್ಚರಿ ಪಟ್ಟವರೂ ಇದ್ದಾರೆ. ಅನನ್ಯಾ ಪಾಂಡೆ ಒಳ್ಳೆಯ ನಟಿಯಲ್ಲ ಎಂಬುದು ಗೊತ್ತಿತ್ತು. ಆದರೆ, ಸ್ಮೋಕರ್ ಅನ್ನೋದು ಗೊತ್ತಿರಲಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅನನ್ಯಾಗೆ ಛೀಮಾರಿ ಹಾಕಿದ್ದಾರೆ.

suddiyaana