ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಸಿಡಿಸಿದ ಗಿಲ್ – ಬೇಗ ಔಟಾದರೂ ರೋಹಿತ್ ಶರ್ಮಾ ದಾಖಲೆ.!

ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಸಿಡಿಸಿದ ಗಿಲ್ – ಬೇಗ ಔಟಾದರೂ ರೋಹಿತ್ ಶರ್ಮಾ ದಾಖಲೆ.!

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಶುಭ್‌ಮನ್ ಗಿಲ್, ತಾಳ್ಮೆಯ ಆಟವಾಡಿ ಶತಕ ಸಿಡಿಸಿದ್ದಾರೆ. 194 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ತಮ್ಮ ಶತಕ ಪೂರೈಸಿದರು. ಅಷ್ಟೇ ಅಲ್ಲ, ಅಹಮದಾಬಾದ್‌ನ ಈ ಮೈದಾನದಲ್ಲಿ 39 ದಿನಗಳಲ್ಲಿ ಇದು ಗಿಲ್ ಅವರ ಎರಡನೇ ಶತಕವಾಗಿದೆ.

ಇದನ್ನೂ ಓದಿ: 43 ವರ್ಷಗಳ ನಂತರ ಭಾರತದಲ್ಲಿ ದಾಖಲೆ – ದ್ವಿಶತಕದ ಜೊತೆಯಾಟವಾಡಿದ ಆಸೀಸ್ ದಾಂಡಿಗರು

ಕಳೆದ ತಿಂಗಳು ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಗಿಲ್ ಶತಕ ಸಿಡಿಸಿದ್ದರು. ನಾಯಕ ರೋಹಿತ್ ವಿಕೆಟ್ ಬಳಿಕ ಜೊತೆಯಾದ ಗಿಲ್ ಹಾಗೂ ಪೂಜಾರ ಶತಕದ ಜೊತೆಯಾಟವನ್ನಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಅಂತಿಮವಾಗಿ 42 ರನ್ ಗಳಿಸಿದ ಪೂಜಾರ ಔಟಾಗುವುದರೊಂದಿಗೆ ಭಾರತಕ್ಕೆ ಎರಡನೇ ಹೊಡೆತ ಬಿದ್ದಿದೆ. ಈ ಮೊದಲು ರೋಹಿತ್ ಶರ್ಮಾ, 35 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದರು. ಕೇವಲ 35 ರನ್‌ಗೆ ಔಟ್‌ ಆದರೂ ಕೂಡಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಇನ್ನಿಂಗ್ಸ್​ನೊಂದಿಗೆ 17 ಸಾವಿರ ಅಂತಾರಾಷ್ಟ್ರೀಯ ರನ್ ಪೂರೈಸಿದ ರೋಹಿತ್, ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ 28ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

suddiyaana