ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ಅವಿರೋಧ ಆಯ್ಕೆ

ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ಅವಿರೋಧ ಆಯ್ಕೆ

ಸರ್ವಾಧಿಕಾರಿ ಕ್ಸಿ ಜಿನ್​ಪಿಂಗ್ ಸತತ ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಗದ್ದುಗೆಯಲ್ಲಿರುವ ಕ್ಸಿ ಜಿನ್​​ಪಿಂಗ್ ಇನ್ನೂ ಐದು ವರ್ಷಗಳ ಕಾಲ ಯಾವುದೇ ಅಡ್ಡಿ ಇಲ್ಲದೆ ಕಮ್ಯುನಿಸ್ಟ್ ರಾಷ್ಟ್ರವನ್ನ ಆಳಲಿದ್ದಾರೆ. ಚೀನಾದ ಮೂರು ಸಾವಿರ ರಬ್ಬರ್​​ಸ್ಟ್ಯಾಂಪ್ ಸಂಸದರು ಕಮಕ್ ಕಿಮಕ್ ಎನ್ನದೆ ಕ್ಸಿ ಜಿನ್​​ಪಿಂಗ್​ರನ್ನ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅಸಲಿಗೆ ಜಿನ್​​ಪಿಂಗ್​​ ಪರವಾಗಿ ವೋಟ್ ಹಾಕದೆ ಬೇರೆ ವಿಧಿಯೂ ಇರಲಿಲ್ಲ. ಈ ಹಿಂದೆ ಚೀನಾ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಲು ಅವಕಾಶವಿತ್ತು. ಆದ್ರೆ 2018ರಲ್ಲಿ ಈ ನಿಯಮವನ್ನ ಸ್ವತ: ಕ್ಸಿ ಜಿನ್​ಪಿಂಗ್ ಕಿತ್ತು ಹಾಕಿದ್ರು. ಹೀಗಾಗಿ ರಾಜಕೀಯದಿಂದ ನಿವೃತ್ತಿಯಾಗೋವರೆಗೂ ಅಥವಾ ಸಾಯೋತನಕ ಬೇಕಾದ್ರೂ ಅಧ್ಯಕ್ಷರಾಗಿ ಕ್ಸಿ ಜಿನ್​​ಪಿಂಗ್​ ಚೀನಾವನ್ನ ಆಳಬಹುದು. ಈ ಮೂಲಕ ಮಾವೊ ಜೆಡಾಂಗ್​ ಬಳಿಕ ಕ್ಸಿ ಜಿನ್​ಪಿಂಗ್ ಚೀನಾದ ಅತ್ಯಂತ ಪವರ್​​​ಫುಲ್ ಲೀಡರ್ ಎನ್ನಿಸಿಕೊಂಡಿದ್ದಾರೆ.

suddiyaana