ವರದಕ್ಷಿಣೆ ನಿಷೇಧ – ಮದುವೆಯಾಗದಿದ್ರೂ ಮಕ್ಕಳು ಮಾಡಿಕೊಳ್ಳಬಹುದು! – ಏನಿದು ಸರ್ಕಾರದ ಹೊಸ ರೂಲ್ಸ್?

ವರದಕ್ಷಿಣೆ ನಿಷೇಧ – ಮದುವೆಯಾಗದಿದ್ರೂ ಮಕ್ಕಳು ಮಾಡಿಕೊಳ್ಳಬಹುದು! – ಏನಿದು ಸರ್ಕಾರದ ಹೊಸ ರೂಲ್ಸ್?

ಕೊವಿಡ್ ಬಳಿಕ ಚೀನಾ, ಜಪಾನ್ ಸೇರಿ ಅನೇಕ ರಾಷ್ಟ್ರಗಳಲ್ಲಿ ಜನಸಂಖ್ಯೆ ಮಟ್ಟ ಇಳಿಮುಖವಾಗಿದೆ. ಇದರಿಂದಾಗಿ ಜನಸಂಖ್ಯೆ ಕಡಿಮೆಯಾದ್ರೆ ರಾಷ್ಟ್ರದ ಅಭಿವೃದ್ದಿ ಕೂಡ ಕುಂಠಿತಗೊಳ್ಳುತ್ತೆ ಅಂತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾನಾ ರೀತಿಯ ಸರ್ಕಸ್ ಮಾಡುತ್ತಿವೆ. ಇದೀಗ ಚೀನಾ ಸರ್ಕಾರ ಜನಸಂಖ್ಯೆ ಕುಸಿತವನ್ನು ತಡೆಯಲು ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ.

ಇದನ್ನೂ ಓದಿ: ಆಹಾರವನ್ನೇ ನೀಡದೆ 1,000ಕ್ಕೂ ಹೆಚ್ಚು ಶ್ವಾನಗಳನ್ನ ಕೊಂದ ನೀಚ – ಮನೆಯ ತುಂಬಾ ಅಸ್ಥಿಪಂಜರಗಳು..!

ಕಳೆದ ಕೆಲವು ದಶಕಗಳಿಂದ ಚೀನಾದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದೆ. ಇಲ್ಲಿ ಯುವಕರಿಗಿಂತ  ವೃದ್ಧರ ಜನಸಂಖ್ಯೆ ಹೆಚ್ಚಾಗಿದೆ. ಅಂದರೆ ಯುವಕರು ಮತ್ತು ದುಡಿಯುವ ಜನರು ಕಡಿಮೆಯಾಗಿದ್ದಾರೆ. ಇದರಿಂದ ತೊಂದರೆಗೀಡಾದ ಚೀನಾ ಕಳೆದ ಕೆಲವು ವರ್ಷಗಳಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.

ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು ಅಲ್ಲಿನ ಸರ್ಕಾರ ಅನೇಕ ಕ್ರಮಗಳನ್ನು ಯೋಜಿಸಿದೆ. ಅದ್ಧೂರಿ ಮದುವೆಗೆ ತಡೆ, ವರದಕ್ಷಿಣೆ ನಿಷೇಧ ಮಾತ್ರವಲ್ಲ ಮದುವೆಯನ್ನು ಹೆಚ್ಚು ಪ್ರೋತ್ಸಾಹಿಸಲು ನಿಶ್ಚಿತಾರ್ಥದ ಉಡುಗೊರೆಯನ್ನು ನೀಡುವ ಕೈಲಿ ಎಂಬ ಸಂಪ್ರದಾಯವನ್ನು ಸಹ ನಿಷೇಧಿಸಿದೆ ಎಂದು ವರದಿಯಾಗಿದೆ.  ಕೈಲಿ ಸಂಪ್ರದಾಯ ಎಂದರೆ ವರನು ತನ್ನ ಸಂಪತ್ತನ್ನು ಪ್ರದರ್ಶಿಸಿ ಮಹಿಳೆಯ ಕುಟುಂಬ ನಿರ್ಧಿಷ್ಟ ಮೊತ್ತ ಪಾವತಿಸಲು ಸೂಚಿಸುತ್ತಾನೆ. ಎಲ್ಲಾ ಚೀನೀ ವಿವಾಹಗಳು ಮೂರನೇ ಎರಡರಷ್ಟು ಕೈಲಿ ಪದ್ಧತಿಯನ್ನು ಒಳಗೊಂಡಿರುತ್ತದೆ. ಕುಟುಂಬಗಳು ದೊಡ್ಡ ಮೊತ್ತದ ಹಣವನ್ನು ವರನ ಕಡೆಯವರಿಗೆ ಪಾವತಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವ ಪದ್ಧತಿಯಾಗಿದೆ. ಸದ್ಯ ಈ ಪದ್ಧತಿಯನ್ನು ನಿಷೇಧ ಮಾಡಲಾಗಿದೆ.

ಚೀನಾದ ಸಿಚುವಾನ್ ನಲ್ಲಿ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಮದುವೆಯಾಗದವರು ಕೂಡ ಮಕ್ಕಳನ್ನು ಹೊಂದಬಹುದು ಅಂತಾ ಹೊಸ ನಿಯಮ ಜಾರಿಗೊಳಿಸಿದೆ. ಅಲ್ಲದೇ ಮದುವೆಯಾಗದೆ ಮಕ್ಕಳು ಹೊಂದುವವರಿಗೆ ಹೆರಿಗೆ ರಜೆ ಹಾಗೂ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ  ಭರಿಸುತ್ತದೆ. ಈ ಸೌಲಭ್ಯಗಳು ಇಲ್ಲಿವರೆಗೆ ವಿವಾಹಿತ ದಂಪತಿಗೆ ಮಾತ್ರ ಲಭ್ಯವಿತ್ತು. ಆದರೆ ಇನ್ನು ಮುಂದೆ ಅವಿವಾಹಿತ ಪೋಷಕರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.

60 ವರ್ಷಗಳಲ್ಲಿ ಮೊದಲ ಬಾರಿಗೆ ಜನಸಂಖ್ಯೆಯ ಇಳಿಕೆ ಕಂಡಿದೆ. ಹೀಗಾಗಿ  ಚೀನಾದಲ್ಲಿ ಜನನ ದರವನ್ನು ಹೆಚ್ಚಿಸುವ ಒತ್ತಡ ಹೆಚ್ಚಾಗಿದೆ. ಅದಕ್ಕಾಗಿ ಸರ್ಕಾರ ಹೊಸ ಹೊಸ ಯೊಜನೆಯನ್ನು ಜಾರಿ ಗೊಳಿಸುತ್ತಿದೆ.

suddiyaana