ನಾಯಿಗಳಿಗೂ ಕೂಡಿ ಬಂತು ಕಂಕಣ ಭಾಗ್ಯ – “ರಿಯೋ-ರಿಯಾ” ಮದುವೆ ಸಂಭ್ರಮ ಹೇಗಿತ್ತು ಗೊತ್ತಾ?
ನವದೆಹಲಿ: ಸಾಕು ಪ್ರಾಣಿಗಳು ಈಗ ಕುಟುಂಬದ ಸದಸ್ಯರಂತೆ ಆಗಿವೆ. ಹೀಗಾಗಿ ಅವುಗಳನ್ನು ತಮ್ಮ ಮಗ, ಮಗಳಂತೆ ನೋಡಿಕೊಳ್ಳುತ್ತಾರೆ. ಕೆಲವರು ಅವುಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದಾರೆ. ಕೆಲ ತಿಂಗಳುಗಳ ಹಿಂದೆ ವ್ಯಕ್ತಿಯೊಬ್ಬ ನಾಯಿಯ ಜೀವವನ್ನು ಉಳಿಸಲು ತನ್ನ ಮನೆಯನ್ನೇ ಮಾರಲು ಸಿದ್ಧವಾಗಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ತಮ್ಮ ಮುದ್ದಿನ ಶ್ವಾನಗಳ ಹುಟ್ಟುಹಬ್ಬದ ಆಚರಣೆ, ಸೀಮಂತ ಮದುವೆ ಮಾಡಿಸುವ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ದೃಶ್ಯವೊಂದು ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆಹಾರವನ್ನೇ ನೀಡದೆ 1,000ಕ್ಕೂ ಹೆಚ್ಚು ಶ್ವಾನಗಳನ್ನ ಕೊಂದ ನೀಚ – ಮನೆಯ ತುಂಬಾ ಅಸ್ಥಿಪಂಜರಗಳು..!
ವೈರಲ್ ಆದ ವಿಡಿಯೋದಲ್ಲಿ ಮೆರವಣಿಗೆಯಲ್ಲಿ ಹೆಣ್ಣು, ಗಂಡು ಶ್ವಾನವನ್ನು ಕರೆದುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾರೆ. ಗಂಡು ಹಾಗೂ ಹೆಣ್ಣು ಎರಡು ಶ್ವಾನವನ್ನು ಮದುಮಕ್ಕಳಂತೆ ಕೆಂಪು ಬಣ್ಣದ ರೇಷ್ಮೆ ಶಾಲಿನ ಜೊತೆ ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ಅದರ ಜೊತೆಗೆ ಶ್ವಾನಕ್ಕೆ ಗಂಡು ಶ್ವಾನವನ್ನು ಪುಟ್ಟ ಕಾರಿನಲ್ಲಿ ಕರೆ ತಂದರೆ, ಹೆಣ್ಣು ಶ್ವಾನವನ್ನು ಹೆಣ್ಣಿನ ಕಡೆಯವರೆಲ್ಲಾ ಸೇರಿ ಕೈಯಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಪುಟ್ಟ ಕಾರಿನಲ್ಲಿ ರಿಯೋ ವೆಡ್ಸ್ ರಿಯಾ ಅಂತಾ ಶ್ವಾನಗಗಳ ಹೆಸರನ್ನು ಬರೆಯಲಾಗಿತ್ತು. ಶ್ವಾನಗಳ ಮಂಟಪಕ್ಕೆ ತರೆತಂದ ಬಳಿಕ ಮನೆ ಮಂದಿಯೆಲ್ಲಾ ಸೇರಿ ಮದ್ವೆ ಮಾಡಿಸಿದ್ದಾರೆ. ಅಲ್ಲದೇ ಈ ಶ್ವಾನ ಜೋಡಿಗೆ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯೂ ನಡೆದಿದೆ. ಬಳಿಕ ಮದ್ವೆಗೆ ಬಂದವರಿಗೆಲ್ಲಾ ಭೂರಿ ಭೋಜನ ಉಣಬಡಿಸಲಾಗಿದೆ. ಕೊನೆಯದಾಗಿ ಗಂಡು ಶ್ವಾನದ ಮನೆಗೆ ಹೆಣ್ಣು ಶ್ವಾನವನ್ನು ಕರೆದೊಯ್ಯಲಾಗಿದೆ.
ಶ್ವಾನಗಳ ಅದ್ದೂರಿ ಮದುವೆಯ ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಏನು ಬೇಕಾದರೂ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಈ ಕಣ್ಣಲ್ಲಿ ಇನ್ನು ಏನೆಲ್ಲಾ ನೋಡಬೇಕೋ ಎಂದು ಉದ್ಘರಿಸಿದ್ದಾರೆ. ಹಾಗೆಯೇ ಶ್ವಾನಪ್ರಿಯರನ್ನು ಉಲ್ಲೇಖಿಸಿ, ಒಂದು ವೇಳೆ ನೀವು ನಿಮ್ಮ ಶ್ವಾನಕ್ಕೆ ಹೀಗೆ ಮದ್ವೆ ಮಾಡಿಲ್ಲವೆಂದರೆ ನೀವು ಶ್ವಾನಪ್ರಿಯರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
They Had An Indian Wedding For Their Dogs.
😭😭😭😭
Deo Aapne Vichaar… pic.twitter.com/BsxMpi1nmE
— ਹਤਿੰਦਰ ਸਿੰਘ (@Hatindersinghr3) March 8, 2023