ಹೋಳಿಯಾಡಿ ಸ್ನಾನಕ್ಕೆ ಹೋದಾಗ ನಡೀತು ದುರಂತ – ಬಾತ್‌ರೂಮ್‌ನಲ್ಲಿ ನವದಂಪತಿ ದಾರುಣ ಅಂತ್ಯ

ಹೋಳಿಯಾಡಿ ಸ್ನಾನಕ್ಕೆ ಹೋದಾಗ ನಡೀತು ದುರಂತ – ಬಾತ್‌ರೂಮ್‌ನಲ್ಲಿ ನವದಂಪತಿ ದಾರುಣ ಅಂತ್ಯ

ಸಂಭ್ರಮದಲ್ಲಿ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದ ನವವಿವಾಹಿತರು ನಂತರ ದಾರುಣ ಅಂತ್ಯ ಕಂಡ ಘಟನೆ ಮುಂಬೈನ ಘಾಟ್ಕೋಪರ್ ನಲ್ಲಿ ನಡೆದಿದೆ. ಮುಂಬೈನ ಘಾಟ್ಕೋಪರ್‌ನ ನಿವಾಸಿಗಳಾದ ದೀಪಕ್ ಷಾ ಮತ್ತು ಟೀನಾ ಶಾ ಕುಕ್ರೇಜಾ ಟವರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ವಿವಾಹವಾಗಿದ್ದ ದಂಪತಿ, ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮೈತುಂಬಾ ಬಣ್ಣ ಹಚ್ಚಿಕೊಂಡು ರಂಗಿನಾಟದಲ್ಲಿ ಸಂಭ್ರಮ ಪಟ್ಟಿದ್ದರು. ನಂತರ ಮನೆಗೆ ಮರಳಿ ಸ್ನಾನ ಮಾಡಲು ಬಾತ್‌ರೂಮ್ ನಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ್ದಾರೆ. ನಂತರ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ದಾರುಣವಾಗಿ ನವದಂಪತಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:  ಬಿಎಂಟಿಸಿ ಬಸ್ ನಲ್ಲಿ ಬೆಂಕಿ – ನಿರ್ವಾಹಕ ಸಜೀವ ದಹನ

ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರ ಪ್ರಕಾರ, ಶಾ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಬ್ಬರು ಕಾಲಿಂಗ್ ಬೆಲ್ ಬಾರಿಸಿದರೂ ಯಾರೂ ಬಾಗಿಲು ತೆರೆಯಲಿಲ್ಲ. ನಂತರ ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಪೊಲೀಸರು ಡುಪ್ಲಿಕೇಟ್ ಕೀಲಿಯಿಂದ ಬಾಗಿಲು ತೆರೆದಾಗ ಬಾತ್ ರೂಮ್‌ನಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಗಂಡ ಹೆಂಡತಿ ಪ್ರಾಣಬಿಟ್ಟಿದ್ದರು. ವೈದ್ಯರು ಕೂಡಾ ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದರು.

suddiyaana