ನಾಲ್ಕನೇ ಮದುವೆಯಾದ ನರೇಶ್ – ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ತೆಲುಗು ನಟ
ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಇಷ್ಟು ದಿನಗಳವರೆಗೂ ವಿವಾದದಲ್ಲೇ ಮುಂದುವರೆದಿತ್ತು. ಈಗಲೂ ವಿವಾದಗಳ ನಡುವೆಯೇ ಇಬ್ಬರೂ ಮದುವೆಯಾಗಿದ್ದಾರೆ.
ಪವಿತ್ರಾಗೆ ಕಿಸ್ ಮಾಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ಈಗ ಅವರು ಮದುವೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. “ಒಂದು ಪವಿತ್ರ ಬಂಧ, ಎರಡು ಮನಸ್ಸುಗಳು, ಮೂರು ಗಂಟುಗಳು, ಏಳು ಹೆಜ್ಜೆಗಳು… ನಮಗೆ ನಿಮ್ಮೆಲರ ಆಶೀರ್ವಾದ ಬೇಕು. ನಮ್ಮ ಜೀವನದಲ್ಲಿ ಇದೊಂದು ಹೊಸ ಹೆಜ್ಜೆ, ಇಂತಿ ನಿಮ್ಮ ಪವಿತ್ರಾ ನರೇಶ್” ಎಂದು ನಟ ನರೇಶ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋ ನೋಡುತ್ತಿದ್ದರೆ ಇದೊಂದು ಸಿನಿಮಾ ಶೂಟಿಂಗ್ ವಿಡಿಯೋದಂತೆ ಕಾಣುತ್ತಿದೆ.
ಇದನ್ನೂ ಓದಿ: ಪವಿತ್ರಾ ಲೋಕೇಶ್ – ನರೇಶ್ ಸಂಬಂಧದ “ರಿಯಲ್” ಸಿನಿಮಾ! – ಹೀರೋ, ಹೀರೋಯಿನ್ ಯಾರು ಗೊತ್ತಾ?
ತಮ್ಮ ಜೀವನದ ಕುರಿತಾದ ಸಿನಿಮಾವೊಂದನ್ನು ಮಾಡುತ್ತಿರುವುದಾಗಿ ಕೆಲವು ದಿನಗಳ ಹಿಂದೆ ನರೇಶ್ ಹೇಳಿಕೊಂಡಿದ್ದರು. ಬಹುಶ: ಇದು ಆ ಸಿನಿಮಾದ ಶೂಟಿಂಗ್ ವಿಡಿಯೋ ಇರಬೇಕು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇನ್ನೂ ಕೆಲವರು ಕಮೆಂಟ್ ಮಾಡಿ, ಶೂಟಿಂಗ್ ನೆಪದಲ್ಲಿ ಇಬ್ಬರೂ ನಿಜವಾಗಲೂ ಮದುವೆ ಆಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಇದು ನಿಜವಾದ ಮದುವೆಯೋ , ಶೂಟಿಂಗ್ ಮದುವೆಯೋ ಅನ್ನೋ ಗೊಂದಲವೂ ಇದೆ.
Seeking your blessings for a life time of peace & joy in this new journey of us🤗
ఒక పవిత్ర బంధం
రెండు మనసులు
మూడు ముళ్ళు
ఏడు అడుగులు 🙏మీ ఆశీస్సులు కోరుకుంటూ ఇట్లు
– మీ #PavitraNaresh ❤️ pic.twitter.com/f26dgXXl6g— H.E Dr Naresh VK actor (@ItsActorNaresh) March 10, 2023
ಪವಿತ್ರಾ ಲೋಕೇಶ್ ಜೊತೆ ಮದುವೆಯಾಗಿರುವ ವಿಡಿಯೋನ ನರೇಶ್ ಅವರೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆಶೀರ್ವಾದ ಮಾಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿದ್ದಾರೆ. ಹೀಗಾಗಿ ಇದು ನಿಜವಾಗಿದ್ದರೂ ಇರಬಹುದು ಎನ್ನಲಾಗ್ತಿದೆ. ಅದೇನೇ ಇದ್ದರೂ ನಾಲ್ಕನೇ ಮದುವೆಯಾದ ನರೇಶ್ ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೂಡಾ ನೀಡದೆ, ಪವಿತ್ರಾ ಲೋಕೇಶ್ ಜೊತೆ ದಿನಕ್ಕೊಂದು ವಿಡಿಯೋ ಹಾಕ್ತಿರುವುದರ ಬಗ್ಗೆ ನೆಗೆಟಿವ್ ಕಮೆಂಟ್ಸ್ ಕೂಡಾ ಬರ್ತಿದೆ. ಕಿಸ್ ಮಾಡಿರುವ ವಿಡಿಯೋ ಹಾಕಿರುವ ನಟನಿಗೆ, ಈ ಮದುವೆ ವೀಡಿಯೋ ಹಾಕಲು ಯಾವ ಮುಲಾಜಿಲ್ಲ ಅನ್ನೋದು ಕೂಡಾ ಅಭಿಮಾನಿಗಳಿಗೆ ಗೊತ್ತಿದೆ. ಆದರೆ, ಈ ವಿಡಿಯೋ ಮಾತ್ರ ರೀಲಾ ರಿಯಲ್ಲಾ ಅನ್ನೋದರ ಬಗ್ಗೆ ನಂತರದ ದಿನಗಳಲ್ಲಿ ನರೇಶ್ ಸ್ವತಃ ಸತ್ಯ ಹೇಳಿದರೂ ಹೇಳಬಹುದು.