ಮನೆಗೆಲಸ ಮಾಡಿದ್ದ ಪತ್ನಿಗೆ ₹1.75 ಕೋಟಿ ಸಂಬಳ ನೀಡಿದ ಪತಿ – ಏಕೆ ಗೊತ್ತಾ?
ಗೃಹಿಣಿ ಮನೆಯಲ್ಲಿಯೇ ಇದ್ದು ಮನೆಗೆಲಸ ಮಾಡಿಕೊಂಡಿರುತ್ತಾಳೆ. ಹೀಗಾಗಿ ಆಕೆಗೆ ಯಾವುದೇ ಸಂಬಳವನ್ನು ನೀಡೋದಿಲ್ಲ. ಹೀಗಿದ್ರೂ ಕೂಡ ಆಕೆ ಮನೆಯವರೆಲ್ಲರ ಸೇವೆ ಮಾಡುತ್ತಾಳೆ. ಕೆಲವೊಂದು ಬಾರಿ ಆಕೆ ಏನು ಕೆಲಸ ಮಾಡೋದಿಲ್ಲ. ಸುಮ್ಮನೆ ಮನೆಯಲ್ಲಿ ಬಿದ್ದಿರುತ್ತಾಳೆ ಅಂತಾ ದೂರಲಾಗುತ್ತದೆ. ಇದೀಗ ಪುರುಷರ ಈ ವರ್ತನೆಗೆ ಮಹಿಳೆಯೊಬ್ಬಳು ಬೇಸತ್ತು ಕೋರ್ಟ್ ಮೆಟ್ಟಿಲೇರಿರುವ ಘಟನೆ ಸ್ಪೇನ್ ನಲ್ಲಿ ನಡೆದಿದೆ.
ಇದನ್ನೂ ಓದಿ: ಮದುವೆಯಾದ ಮಾರನೇ ದಿನವೇ ಮದುಮಗ ಮಾಯ – ಟ್ರಾಫಿಕ್ ಜಾಮ್ ನಲ್ಲೇ ಪತ್ನಿ ಬಿಟ್ಟು ಪರಾರಿ..!
ಹೌದು, ದಕ್ಷಿಣ ಸ್ಪೇನ್ನ ವೆಲೆಜ್ ಮಲಗಾದಲ್ಲಿನ ಮಹಿಳೆ ಇವಾನ್ ಮೊರಾಲ್ 25 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಾಳೆ. ಆಕೆ ಮದುವೆಯಾದಾಗಿನಿಂದ ಮನೆಯಲ್ಲಿಯೇ ಇದ್ದು, ತನ್ನ ಪತಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಪತಿ ಆಕೆಯನ್ನು ಹೊರಗೆ ಕೆಲಸಕ್ಕೆ ಹೋಗಲು ಬಿಡುತ್ತಿರಲಿಲ್ಲ. ಪತಿ ಜಿಮ್ ನಡೆಸುತ್ತಿದ್ದರಿಂದ ಮನೆಗೆಲಸ ಮಾಡಿ ಉಳಿದ ಅವಧಿಯಲ್ಲಿ ಜಿಮ್ ಕೆಲಸವನ್ನು ಆಕೆಯ ಬಳಿ ಮಾಡಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಆಕೆ, ಪತಿಯಿಂದ ವಿಚ್ಚೇದನ ಕೇಳಿದ್ದಾಳೆ. ಬಳಿಕ 2020ರಲ್ಲಿ ವಿಚ್ಚೇದನದ ಮೂಲಕ ದಂಪತಿ ಬೇರ್ಪಟ್ಟಿದ್ದಾರೆ.
ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ವಿಚ್ಚೇದನದ ಬಳಿಕ ಇಬ್ಬರು ಮಕ್ಕಳು ಇವಾನ್ ಜೊತೆಗಿದ್ದರು. ಪತಿ ವಿಚ್ಚೇದನ ನೀಡೋ ವೇಳೆ ಈಕೆಗೆ ಯಾವುದೇ ಪರಿಹಾರ ನೀಡಿರಲಿಲ್ಲ. ಹೀಗಾಗಿ ಇವಾನ್ ಗೆ ಇಬ್ಬರು ಮಕ್ಕಳನ್ನ ನೋಡಿಕೊಂಡು ಜೀವನ ನಡೆಸೋದು ಕಷ್ಟವಾಗಿದೆ. ಹೀಗಾಗಿ ಆಕೆ ಕೋರ್ಟ್ ಮೊರೆ ಹೋಗಿದ್ದಾಳೆ.
ತನ್ನನ್ನು ಸುಮಾರು 25 ವರ್ಷಗಳ ಕಾಲ ಸಂಬಳವಿಲ್ಲದೆ ದುಡಿಸಿಕೊಂಡಿದ್ದಾನೆ. ಅಲ್ಲದೇ ಆತ ಹೊರಗೆ ಕೆಲಸಕ್ಕೆ ಹೋಗಲು ನಿರಾಕರಿಸಿದ್ದಾನೆ. ಮನೆಗೆಲಸದ ಬಳಿಕ ಆತ ತನ್ನ ಜಿಮ್ ನಲ್ಲಿ ಕೆಲಸ ಮಾಡಿಸುತ್ತಿದ್ದ. ನನ್ನ ಪತಿ ಸುಮಾರು $ 6.4 ಮಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ. ಕೆಲ ಒಪ್ಪಂದಗಳ ಹೊರತಾಗಿಯೂ ಪತಿ ನನಗೆ ಸಂಬಳವಾಗಲಿ, ವ್ಯವಹಾರದಲ್ಲಿ ಯಾವುದೇ ಲಾಭಂಶವನ್ನು ನೀಡಿಲ್ಲ. ಎಲ್ಲಾ ಆಸ್ತಿ, ಆದಾಯವೂ ಆತನ ಹೆಸರಿನಲ್ಲಿತ್ತು ಎಂದು ಇವಾನಾ ಮೋರಲ್ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ದಕ್ಷಿಣ ಸ್ಪೇನ್ನ ವೆಲೆಜ್ ಮಲಗಾದಲ್ಲಿನ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಪತ್ನಿಗೆ ಸುಮಾರು 25 ವರ್ಷಗಳ ಕಾಲ ಸಂಬಳ ನೀಡದೇ ಕೆಲಸ ಮಾಡಿಸಿಕೊಂಡಿದ್ದಕ್ಕಾಗಿ ಪರಿಹಾರವನ್ನು ಲೆಕ್ಕಹಾಕಲಾಗಿದೆ. ಬಳಿಕ 1.75 ಕೋಟಿ (1,80,000 ಪೌಂಡ್) ಹಣವನ್ನು ಮಾಜಿ ಪತ್ನಿಗೆ ಪಾವತಿಸಲು ಮಾಜಿ ಪತಿಗೆ ಆದೇಶಿಸಿದೆ. ಜೊತೆಗೆ ನಮಾಜಿ ಪತಿ ತಮ್ಮ ಹೆಣ್ಣುಮಕ್ಕಳಿಗೆ ಮಾಸಿಕ ಶಿಶುಪಾಲನಾ ಶುಲ್ಕವನ್ನು ಪಾವತಿಸಬೇಕು ಎಂದು ತೀರ್ಪು ನೀಡಿದೆ.