99 ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಆನೆಗೆ ನಿವೃತ್ತಿ – ಭಾವುಕ ದೃಶ್ಯ ಸೆರೆ
ಉದ್ಯೋಗಿಗಳು ನಿವೃತ್ತಿ ಹೊಂದುವ ವೇಳೆ ಅವರಿಗೆ ಬೀಳ್ಕೊಡುಗೆ ಸಮಾರಂಭದ ಮೂಲಕ ಗೌರವಯುತವಾಗಿ ಕಳುಹಿಸಿಕೊಡಲಾಗುತ್ತದೆ. ಹಾಗೇ ಅವರ ಜೀವಮಾನದ ಕೆಲಸವನ್ನು ಸ್ಮರಿಸಿಕೊಳ್ಳಲಾಗುತ್ತದೆ. ಇದೀಗ ಇಂತಹದ್ದೇ ಒಂದು ಸಮಾರಂಭ ನಡೆದಿದೆ. ಇಲ್ಲಿ ಬೀಳ್ಕೊಡುಗೆ ಸಮಾರಂಭ ನಡೆದದ್ದು ಯಾವುದೇ ಕಂಪನಿ ಅಥವಾ ಸರ್ಕಾರಿ ಉದ್ಯೋಗಿಗೆ ಅಲ್ಲ. ಬದಲಾಗಿ ಇಲ್ಲಿ ಸಮಾರಂಭ ನಡೆದಿದ್ದು ಬರೋಬ್ಬರಿ 99 ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಆನೆಗೆ.
ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಹುಷಾರ್ – 500 ರೂಪಾಯಿ ದಂಡ!
ಹೌದು, ಈ ಅಭೂತಪೂರ್ವ ಕ್ಷಣಕ್ಕೆ ತಮಿಳುನಾಡಿನ Kozhiamuttthi ಆನೆ ಶಿಬಿರ ಸಾಕ್ಷಿಯಾಗಿತ್ತು. ಈ ಆನೆ ಶಿಬಿರದಲ್ಲಿ ಕಲೀಂ ಎಂಬ ಆನೆಯಿತ್ತು. ಇದು ಬರೋಬ್ಬರಿ 99 ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿತ್ತು. ಇದೀಗ ಈ ಆನೆಗೆ 60 ವರ್ಷ ತುಂಬಿದ್ದರಿಂದ ನಿವೃತ್ತಿ ಘೋಷಿಸಲಾಗಿದೆ. ಆನೆಯ ಕಾರ್ಯಾಚರಣೆ ಕಾರ್ಯ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಆನೆಗೆ ಸರ್ಕಾರಿ ಗೌರವಗಳ ಮೂಲಕ ಬೀಳ್ಕೊಡುಗೆ ಸಮಾರಂಭ ನಡೆಸಲಾಗಿದೆ.
ತಮಿಳುನಾಡು ಅರಣ್ಯ ಮತ್ತು ಪರಿಸರ, ಹವಾಮಾನ ಬದಲಾವಣೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು, ಆನೆ ಬೀಳ್ಕೊಡುಗೆ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. “ತಮಿಳುನಾಡಿನ Kozhiamuttthi ಆನೆ ಶಿಬಿರದಲ್ಲಿ ಕಲೀಂ ಹೆಸರಿನ ಆನೆ ಮಂಗಳವಾರ (ಮಾರ್ಚ್ 07) ನಿವೃತ್ತಿ ಹೊಂದಿದೆ. ಈ ವೇಳೆ ನಮ್ಮ ಕಣ್ಣುಗಳು ತೇವವಾಗಿದ್ದು, ಹೃದಯ ತುಂಬಿ ಬಂದಿದೆ” ಎಂದು ಸುಪ್ರಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸಾಹು ಹಂಚಿಕೊಂಡ ವಿಡಿಯೋದಲ್ಲಿ, ಅರಣ್ಯಾಧಿಕಾರಿಗಳಿಂದ ಕಲೀಂ ಆನೆ ಗೌರವ ವಂದನೆ ಸ್ವೀಕರಿಸುತ್ತಿದೆ. ಬಳಿಕ ಕಲೀಂ ತನ್ನ ಸೊಂಡಿಲನ್ನು ಎತ್ತಿ ಅಧಿಕಾರಿಗಳಿಗೆ ಪ್ರತಿವಂದನೆ ಸಲ್ಲಿಸಿ, ಘೀಳಿಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಾನು ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿರುವುದಾಗಿ ಮನದಟ್ಟು ಮಾಡಿಕೊಂಡಿರುವುದು ಕಲೀಂ ನಡವಳಿಕೆಯಲ್ಲಿ ಗಮನಿಸಬಹುದಾಗಿದ್ದು, ತಾನು ನಿವೃತ್ತಿಯಾಗಿರುವುದರಿಂದ ತನ್ನ ಸುತ್ತ ಮುತ್ತಲಿದ್ದ ಪ್ರತಿಯೊಬ್ಬರಿಗೂ ಪ್ರೀತಿಯನ್ನು ತೋರ್ಪಡಿಸಿದೆ.
Our eyes are wet and hearts are full with gratitude as Kaleem the iconic Kumki elephant of the Kozhiamuttthi elephant camp in Tamil Nadu retired today at the age of 60. Involved in 99 rescue operations he is a legend. He received a guard of honour from #TNForest #Kaleem pic.twitter.com/bA1lUOQmTw
— Supriya Sahu IAS (@supriyasahuias) March 7, 2023