ಅಮೆರಿಕದ ಎರಿಕ್ ಗರ್ಸೆಟ್ಟಿ ಭಾರತದ ನೂತನ ರಾಯಭಾರಿ – ಸೆನೆಟ್ ಸಮಿತಿಯಲ್ಲಿ ಅನುಮೋದನೆ..!

ಅಮೆರಿಕದ ಎರಿಕ್ ಗರ್ಸೆಟ್ಟಿ ಭಾರತದ ನೂತನ ರಾಯಭಾರಿ – ಸೆನೆಟ್ ಸಮಿತಿಯಲ್ಲಿ ಅನುಮೋದನೆ..!

ಲಾಸ್ ಏಂಜಲಿಸ್​​ನ ಮಾಜಿ ಮೇಯರ್ ಎರಿಕ್ ಗರ್ಸೆಟ್ಟಿಯವರನ್ನ ಭಾರತದ ರಾಯಭಾರಿಯಾಗಿ ನೇಮಕ ಮಾಡುವ ಪ್ರಸ್ತಾವಕ್ಕೆ ಅಮೆರಿಕ ಸೆನೆಟ್​ನ ವಿದೇಶಿ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ. ಈ ನಾಮನಿರ್ದೇಶನದ ದೃಢೀಕರಣ ಸಂಬಂಧ ಮತದಾನ ಮಾಡಲು ಸಮಿತಿ ಪೂರ್ಣ ಸೆನೆಟ್​ಗೆ ಕಳುಹಿಸಿಕೊಟ್ಟಿತ್ತು.

ಈ ನಾಮ ನಿರ್ದೇಶನವನ್ನ ಸೆನೆಟ್ ಸಮಿತಿ 13-8 ಮತಗಳ ಅಂತರದಿಂದ ಅನುಮೋದಿಸಿದೆ. ಗರ್ಸೆಟ್ಟಿಯವರ ಪರವಾಗಿ ಡೆಮಾಕ್ರಟಿಕ್ ಪಕ್ಷದ ಎಲ್ಲಾ ಸದಸ್ಯರ ಜತೆಗೆ ರಿಪಬ್ಲಿಕನ್ ಪಕ್ಷದ ಸೆನೆಟರ್​ಗಳಾದ ಟಾಡ್ ಯಂಗ್ ಹಾಗೂ ಬಿಲ್ ಹಗ್ರೆಟಿ ಮತ ಚಲಾಯಿಸಿದರು.

ಇದನ್ನೂ ಓದಿ : ಪ್ರಧಾನಿ ಮೋದಿಯನ್ನ ಭೇಟಿಯಾದ ಬಿಲ್ ಗೇಟ್ಸ್ – ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹೇಳಿದ್ದೇನು..? 

ಎರಿಕ್ ಅವರನ್ನ ಭಾರತದ ಅಮೆರಿಕ ರಾಯಭಾರಿಯನ್ನಾಗಿ 2021ರ ಜುಲೈನಲ್ಲೇ ಜೋ ಬೈಡನ್ ನಾಮ ನಿರ್ದೇಶನ ಮಾಡಿದ್ದರು. ಆದ್ರೆ ಹುದ್ದೆಗೆ ನೇಮಕಾತಿ ಮಾಡಲು ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷಕ್ಕೆ ಸಾಕಷ್ಟು ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಈ ವರ್ಷದ ಜನವರಿಯಲ್ಲಿ ಜೋಬೈಡನ್ ಅವರು ಮತ್ತೊಮ್ಮೆ ಎರಿಕ್ ಅವರನ್ನ ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು.

ಸೆನೆಟ್ ಕೈಗೊಂಡಿರುವ ಕ್ರಮವನ್ನ ಶ್ಲಾಘಿಸುತ್ತೇವೆ. ಭಾರತಕ್ಕೆ ದೃಢೀಕೃತ ರಾಯಭಾರಿಯ ಅಗತ್ಯ ಇದೆ. ನಮ್ಮ ತಳಮಟ್ಟದ ರಾಯಭಾರಿ ಸ್ಥಾನದಲ್ಲಿ ಅದ್ಭುತ ಕಾರ್ಯ ಮಾಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ನೆಡ್ ಪೈಸ್ ಪ್ರತಿಕ್ರಿಯಿಸಿದ್ದಾರೆ.

suddiyaana