ಕೋಟಿ ಕೋಟಿ ಗಳಿಸಿ ನೀವೂ ಶ್ರೀಮಂತರಾಗಬೇಕೇ..? – ‘ಮಾಡಾಳ್ ತಳಿ ಅಡಕೆ ಗಿಡಗಳು’ ಬಂದಾಯ್ತು..!
ಮನೆ, ಕಚೇರಿ ತುಂಬೆಲ್ಲಾ ಕಂತೆ ಕಂತೆ ಕಾಸು ಇಟ್ಟುಕೊಂಡು ಪುತ್ರ ಲೋಕಾಯುಕ್ತ ಬಲೆಗೆ ಬಿದ್ರೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ದೌಲತ್ತು ಮಾತ್ರ ಕಮ್ಮಿ ಆಗಿಲ್ಲ. ಸಿಕ್ಕಿರೋ ದುಡ್ಡೆಲ್ಲಾ ನಂದೇ. ಅದೆಲ್ಲಾ ಅಡಕೆತೋಟ ಹಾಗೂ ಕ್ರಷರ್ನಿಂದ ಬಂದ ಹಣ ಎಂದಿದ್ರು. ಅಷ್ಟಕ್ಕೂ ರೇಡ್ ವೇಳೆ ಸಿಕ್ಕಿದ್ದು ಹತ್ತಿಪ್ಪತ್ತು ಲಕ್ಷ ಅಲ್ಲ. ಬರೋಬ್ಬರಿ 8.12 ಕೋಟಿ. ಹೀಗಾಗಿ ಜೆಡಿಎಸ್ ಪಡೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ತಿರುಗಿ ಬಿದ್ದಿದೆ.
ಇದನ್ನೂ ಓದಿ : ಬೇಲ್ ಸಿಗ್ತಿದ್ದಂತೆ ಬಿಲದಿಂದ ಹೊರಬಂದ ಬಿಜೆಪಿ ಶಾಸಕ – ಬೆಂಬಲಿಗರೊಂದಿಗೆ ಮಾಡಾಳ್ ಮೆರವಣಿಗೆ..!
ಮಾಡಾಳ್ ತಳಿಯ ಅಡಕೆ ಗಿಡಗಳನ್ನು ಬೆಳೆಸಿ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸಿ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಜೆಡಿಎಸ್ ಹರಿ ಹಾಯ್ದಿದೆ. ಟ್ವಿಟ್ನಲ್ಲೇ ಏಟು ಕೊಟ್ಟಿದೆ. ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ, ಮೊಂಡುತಿರಿ ಸಮಸ್ಯೆಗಳಿಂದ ಬಳಲುತ್ತಿರುವ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿಕರೇ ಚಿಂತೆ ಬಿಡಿ. ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ. ನಾವು ನಿಮಗಾಗಿಯೇ ಹೊಸ ಅಡಿಕೆ ತಳಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಗಿಡಗಳಿಗಾಗಿ ಸಂಪರ್ಕಿಸಿ ಎಂದು ವ್ಯಂಗ್ಯವಾಡಿದ್ದಾರೆ. ‘ನಮ್ಮಲ್ಲಿ ಮಾಡಾಳ್ ತಳಿಯ ಅಡಕೆ ಗಿಡಗಳು ದೊರೆಯುತ್ತವೆ’ ಎಂದು ಕಾಲೆಳೆದಿದ್ದಾರೆ.
ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ.#ಕಮೀಷನ್_ರಾಜ್ಯವಲ್ಲ_ಕರ್ನಾಟಕ pic.twitter.com/VziwH5RQuf
— Janata Dal Secular (@JanataDal_S) March 8, 2023
ಹಾಗೇ ಬಿಜೆಪಿ ಕಾರ್ಯಕರ್ತ ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಾ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ. ಭ್ರಷ್ಟರಿಗೆ ಜೈಕಾರ ಹಾಕುವುದೆ ಬಿಜೆಪಿ ಇಂಡಿಯಾ ಹೇಳುವ ದೇಶ ಪ್ರೇಮ. ನಿಮ್ಮ ನಾಚಿಕೆಯಿಲ್ಲದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ಛೀಮಾರಿ ಹಾಕಿದೆ. ನಾಪತ್ತೆಯಾಗಿದ್ದ ಶಾಸಕ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅರಗ ಜ್ಞಾನೇಂದ್ರ ಅವರೇ ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೆ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ?ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ನಾಪತ್ತೆಯಾಗಿದ್ದ ಶಾಸಕ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. @JnanendraAraga ಅವರೇ ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೆ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ?ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ. 2/3#ಭ್ರಷ್ಟಬಿಜೆಪಿ #CorruptBJP
— Janata Dal Secular (@JanataDal_S) March 8, 2023
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೆ ನೀವು ಪದೇ ಪದೇ ರಾಜ್ಯಕ್ಕೆ ಬರುತ್ತಿರುವುದು ಮಾಡಾಳು ವಿರೂಪಾಕ್ಷ ಅವರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ಎಂದು ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಬಾರಿ ಬಂದಾಗ ಸ್ಪಷ್ಟೀಕರಣ ನೀಡಿ ಎಂದು ಜೆಡಿಎಸ್ ಒತ್ತಾಯಿಸಿದೆ.