ಮಹಿಳಾ ದಿನಾಚರಣೆ ದಿನವೇ ಹೆಣ್ಣು ಮಗುವಿನ ತಂದೆಯಾದ ಟೀಮ್ ಇಂಡಿಯಾ ಬೌಲರ್

ಮಹಿಳಾ ದಿನಾಚರಣೆ ದಿನವೇ ಹೆಣ್ಣು ಮಗುವಿನ ತಂದೆಯಾದ ಟೀಮ್ ಇಂಡಿಯಾ ಬೌಲರ್

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಮಹಿಳಾ ದಿನಾಚರಣೆ ದಿನವೇ ಗುಡ್‌ನ್ಯೂಸ್ ಸಿಕ್ಕಿದೆ. ಮಹಿಳಾ ದಿನಾಚರಣೆ ಇವರಿಗೆ ವಿಶೇಷ ದಿನವಾಗಿದೆ. ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್, ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಉಮೇಶ್ ಯಾದವ್ ಪತ್ನಿ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ಸ್ವತಃ ಉಮೇಶ್ ಯಾದವ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಉಮೇಶ್ ಯಾದವ್ ಅವರ ತಂದೆ ಸಾವನ್ನಪ್ಪಿದ್ದರು. ಆದರೆ ಈಗ ಅವರ ಮನೆಗೆ ಪುಟ್ಟ ದೇವತೆ ಬಂದಿರುವುದು ಉಮೇಶ್ ಕುಟುಂಬದ ನೋವನ್ನು ಕೊಂಚ ಕಡಿಮೆ ಮಾಡಿದೆ.

ಇದನ್ನೂ ಓದಿ: ತೊಟ್ಟಿಲು ತೂಗುವಳು.. ಜಗವನ್ನೂ ಆಳುವಳು – ವಿಶ್ವ ಮಹಿಳಾ ದಿನ ಹುಟ್ಟಿಕೊಂಡಿದ್ದೇಗೆ ಗೊತ್ತಾ..?

2013ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಉಮೇಶ್ ಯಾದವ್ ಮತ್ತು ತಾನ್ಯಾ ದಂಪತಿಗಳಿಗೆ 2021 ರಲ್ಲಿಯೇ ಹೆಣ್ಣು ಮಗು ಜನಿಸಿತ್ತು. ಇದೀಗ ಇನ್ನೊಬ್ಬಳು ಮುದ್ದಿನ ಮಗಳು ಮನೆಗೆ ಬಂದಿದ್ದಾಳೆ. ಉಮೇಶ್ ಯಾದವ್ ವೃತ್ತಿ ಬದುಕಿನ ಬಗ್ಗೆ ಮಾತನಾಡುವುದಾದರೆ, ಸದ್ಯ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಮೇಶ್ ಆಡುತ್ತಿದ್ದಾರೆ. ಇಂದೋರ್ ಟೆಸ್ಟ್ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಯಾದವ್ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ನೆರವಾಗಿದ್ದರು.

suddiyaana