ಟ್ರಾಫಿಕ್ ಫೈನ್ 50% ಡಿಸ್ಕೌಂಟ್ – ಚಾಲಕರ ವೇತನದಿಂದಲೇ ದಂಡ ಕಟ್ಟಿದ ಬಿಎಂಟಿಸಿ

ಟ್ರಾಫಿಕ್ ಫೈನ್ 50% ಡಿಸ್ಕೌಂಟ್ – ಚಾಲಕರ ವೇತನದಿಂದಲೇ ದಂಡ ಕಟ್ಟಿದ ಬಿಎಂಟಿಸಿ

ಬೆಂಗಳೂರು: ಕಳೆದ ಫೆಬ್ರವರಿಯಿಂದ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ. 50 ರಷ್ಟು ರಿಯಾಯಿತಿ ನೀಡಿತ್ತು. ಈ ಆಫರ್ ಅನ್ನು ಈಗ ಬಿಎಂಟಿಸಿ ಕೂಡ ಬಳಕೆ ಮಾಡಿಕೊಂಡಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ ಪ್ರಕರಣಗಳಲ್ಲಿ ಒಟ್ಟು ದಂಡ 66 ಲಕ್ಷ ರೂಪಾಯಿ ಆಗಿದ್ದು, ಶೇ.50 ಆಫರ್ ಮೂಲಕ 33 ಲಕ್ಷ ರೂಪಾಯಿ ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 1,300 ಉದ್ಯೋಗಿಗಳ ಬೆನ್ನಲ್ಲೇ ಅಧ್ಯಕ್ಷರಿಗೂ ಗೇಟ್ ಪಾಸ್ – ‘ಜೂಮ್’ನಲ್ಲಿ ಸಿಬ್ಬಂದಿ ವೇತನಕ್ಕೂ ಕತ್ತರಿ..!

ಬಿಎಂಟಿಸಿ ಬಸ್ ಚಾಲಕರು ನಗರದಲ್ಲಿ 12 ಸಾವಿರ ಬಾರಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಇದರಿಂದಾಗಿ ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ನಷ್ಟವುಂಟಾಗಿದೆ. ಇದೀಗ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ ಪ್ರಕರಣಗಳಲ್ಲಿ ಒಟ್ಟು ದಂಡ 66 ಲಕ್ಷ ರೂಪಾಯಿ ಆಗಿದ್ದು, ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ. ದಂಡದ ಮೊತ್ತವನ್ನು ನಿಯಮ ಉಲ್ಲಂಘನೆ ಮಾಡಿದ ಬಿಎಂಟಿಸಿ ಚಾಲಕರಿಂದ ವಸೂಲಿ ಮಾಡಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಚಾರ ನಿಯಮ ಉಲ್ಲಂಘನೆಗಾಗಿ 33 ಲಕ್ಷ ರೂಪಾಯಿ ದಂಡ ಪಾವತಿಸಿದ್ದೇವೆ. ನಿಯಮ ಉಲ್ಲಂಘನೆ ಮಾಡಿದ ಬಿಎಂಟಿಸಿ ಚಾಲಕರಿಂದ ವಸೂಲಿ ಮಾಡಿದ ನಂತರ ದಂಡದ ಮೊತ್ತವನ್ನು ಪಾವತಿಸಲಾಗಿದೆ. ಭವಿಷ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ತಡೆಯಲು ಚಾಲಕರ ವೇತನದಿಂದ ಈ ಮೊತ್ತವನ್ನು ಕಡಿತಗೊಳಿಸಲಾಗಿದೆ’ ಎಂದು ಬಿಎಂಟಿಸಿ ಎಂಡಿ ಸತ್ಯವತಿ ಹೇಳಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಕಳೆದ ಫೆಬ್ರವರಿ 7 ರಿಂದ 14 ರವರೆಗೆ ಶೇ 50 ರಷ್ಟು ವಿನಾಯಿತಿ ನೀಡಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ದಂಡ ವಿನಾಯಿತಿಯನ್ನು ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ.

 

suddiyaana