ಕಬ್ಬನ್ ಪಾರ್ಕ್‌ನಲ್ಲಿ ಓಡಲಿದೆ ಪುಟಾಣಿ ಎಕ್ಸ್ ಪ್ರೆಸ್- ಬೇಸಿಗೆ ರಜೆಯಲ್ಲಿ ಚಿಣ್ಣರಿಗೆ ಸಿಗಲಿದೆ ರೈಲಿನ ಸವಾರಿ
ಪರೀಕ್ಷೆ ಸಮಯ ಕಳೆದು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಸಿಗುವ ದಿನಗಳು ಹತ್ತಿರ ಬರುತ್ತಿದೆ. ಇದರ ಮಧ್ಯೆ ಮಕ್ಕಳಿಗೆ ಇಷ್ಟವಾಗುವ ಪುಟಾಣಿ ರೈಲನ್ನು ಓಡಿಸಲು ಕಬ್ಬನ್ ಪಾರ್ಕ್ ನಲ್ಲಿ ಸಿದ್ಧತೆ ಕೂಡಾ ನಡೀತಿದೆ. ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿದ್ದ, ಬೆಂಗಳೂರಿನ ಜನಪ್ರಿಯ ಪುಟಾಣಿ ರೈಲು ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಮತ್ತೆ ಓಡಲಿದೆ. ಮಕ್ಕಳಿಗೆ ಕಬ್ಬನ್ ಪಾರ್ಕ್ ಇಷ್ಟವಾಗಲು ಕಾರಣ ಕೂಡಾ ಇದೇ ಪುಟಾಣಿ ರೈಲು. ಜೊತೆಗೆ ಪ್ರವಾಸಿಗರಿಗೂ ಕೂಡಾ ಕಬ್ಬನ್ ಪಾರ್ಕ್ ನಲ್ಲಿರುವ ಈ ಪುಟಾಣಿ ಎಕ್ಸ್ ಪ್ರೆಸ್ ತುಂಬಾ ಇಷ್ಟ. ಹೀಗಾಗಿ ಈ ಬೇಸಿಗೆ ರಜೆಯಲ್ಲಿ ಕಬ್ಬನ್ ಪಾರ್ಕ್‌ಗೆ ಟೂರ್ ಪ್ಲಾನ್ ಇದ್ರೆ, ಪುಟಾಣಿ ರೈಲು ಮೈನ್ ಅಟ್ರಾಕ್ಷನ್ ಆಗಲಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಐಫೋನ್ ತಯಾರಿಕಾ ಕಾರ್ಖಾನೆ ? -300 ಎಕರೆ ಪ್ರದೇಶದಲ್ಲಿ ಸ್ಥಾಪನೆ ಸಾಧ್ಯತೆ
ಪುಟಾಣಿ ರೈಲು, 2019ರಲ್ಲಿ ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿತ್ತು. ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರು ಈ ರೈಲಿನಲ್ಲಿ ರೌಂಡ್ ಹೊಡೆಯುತ್ತಿದ್ದರು. 2019ರಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ಪುಟಾಣಿ ರೈಲು ಸವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಪುಟಾಣಿ ಎಕ್ಸ್ಪ್ರೆಸ್ನ್ನು 1968ರಲ್ಲಿ ಅಂದಿನ ಸಚಿವ ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಳಾ ಹೆಗ್ಡೆ ಅವರು ಮೊದಲ ಬಾರಿಗೆ ಉದ್ಘಾಟಿಸಿದ್ದರು. ಅಗಲಗೊಂಡಿರುವ ಟ್ರ್ಯಾಕ್‌ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ರೈಲಿಗೆ ಮರು-ಪೇಂಟಿಂಗ್ ಕೆಲಸಗಳು ಸಹ ಪ್ರಕ್ರಿಯೆಯಲ್ಲಿವೆ. ಶನಿವಾರದ ವೇಳೆಗೆ 900 ಮೀಟರ್ ಟ್ರ್ಯಾಕ್ ಸಿದ್ಧವಾಗಲಿದೆ. ಜೈವಿಕ ಇಂಧನದಲ್ಲಿ ಚಲಿಸುವ ಈ ಪುಟಾಣಿ ರೈಲು, ಚಿಕ್ಕ ಇಂಜಿನ್ ಇರುವ ಐದು ತೆರೆದ ಬೋಗಿಗಳನ್ನು ಹೊಂದಿದೆ.