ಭಾರತೀಯ ಯೋಧರಿಗೆ ಜೆಟ್ ಪ್ಯಾಕ್ ಸೂಟ್ – ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿದ್ದೇಗೆ?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆ ಬಲಾಢ್ಯಗೊಳ್ಳುತ್ತಲೇ ಇದೆ. ಶತ್ರು ರಾಷ್ಟ್ರಗಳನ್ನು ಹೆಡೆಮುರಿ ಕಟ್ಟಲು ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ. ಚೀನಾ ಮತ್ತು ಪಾಕಿಸ್ತಾನ ನರಿಬುದ್ದಿಯನ್ನು ಆಗಾಗ ತೋರಿಸುತ್ತಿವೆ. ಹೀಗಾಗಿ ಚೀನಾ ಮತ್ತು ಪಾಕಿಸ್ತಾನ ಗಡಿ ಪ್ರದೇಶಗಳ ಭದ್ರತೆ ದೃಷ್ಟಿಯಿಂದ ಸೇನೆ ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಇದೀಗ ಭಾರತೀಯ ಸೇನೆ ಚೀನಾ ಗಡಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧತಂತ್ರದ ಚಲನ ಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಜೆಟ್ಪ್ಯಾಕ್ ಸೂಟ್ಗಳನ್ನು ಖರೀದಿಸುತ್ತಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಐಫೋನ್ ತಯಾರಿಕಾ ಕಾರ್ಖಾನೆ ? -300 ಎಕರೆ ಪ್ರದೇಶದಲ್ಲಿ ಸ್ಥಾಪನೆ ಸಾಧ್ಯತೆ
ಬ್ರಿಟಿಷ್ ಕಂಪನಿ “ಗ್ರಾವಿಟಿ ಇಂಡಸ್ಟ್ರೀಸ್’ಈ ಜೆಟ್ ಪ್ಯಾಕ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸೂಟ್ ಧರಿಸಿದರೆ ಯೋಧರು ನದಿಯ ನೀರಿನ ಮೇಲೆ, ರಸ್ತೆಗಳ ಮೇಲೆ ಹಾರಬಹುದು. ಈ ಜೆಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಈಗಾಗಲೇ ಡೆಮೊ ನೀಡಲಾಗಿದೆ. ಆರಂಭದಲ್ಲಿ ಭಾರತೀಯ ಸೇನೆ ಸುಮಾರು 48 ಜೆಟ್ಪ್ಯಾಕ್ ಸೂಟ್ಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಗ್ರಾವಿಟಿ ಇಂಡಸ್ಟ್ರೀಸ್ ಸಂಸ್ಥಾಪಕ ರಿಚರ್ಡ್ ಬ್ರೌನಿಂಗ್, ಜೆಟ್ಪ್ಯಾಕ್ ಸೂಟ್ ಧರಿಸಿ ಆಗ್ರಾದಲ್ಲಿ ಡೆಮೊ ನೀಡಿದ್ದಾರೆ. ಈ ಸೂಟ್ ಅನ್ನು ಧರಿಸಿ ನದಿ ಬಳಿ, ರಸ್ತೆ, ಹೊಲಗಳಲ್ಲಿ ಹಾರಾಟ ನಡೆಸಿದ್ದಾರೆ. ಈ ಜೆಟ್ ನ ಡೆಮೊ ನೀಡುತ್ತಿರುವ ದೃಶ್ಯವನ್ನು ಭಾರತೀಯ ಸೇನೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Yesterday, Richard Browning the founder of #Gravity Industries gave a demo of their #Jetpack system to the Indian Army in #Agra.
The #IndianArmy has issued the requirement to procure 48 such systems.#IADN pic.twitter.com/0dcEW3hjyb
— Indian Aerospace Defence News (IADN) (@NewsIADN) February 28, 2023