ಸಿಲಿಕಾನ್ ಸಿಟಿಯಲ್ಲಿ ಐಫೋನ್ ತಯಾರಿಕಾ ಕಾರ್ಖಾನೆ ? -300 ಎಕರೆ ಪ್ರದೇಶದಲ್ಲಿ ಸ್ಥಾಪನೆ ಸಾಧ್ಯತೆ
ರಾಜ್ಯ ರಾಜಧಾನಿ ಬೆಂಗಳೂರಿನ ಬಳಿ ಐಫೋನ್ ತಯಾರಿಕಾ ಕಾರ್ಖಾನೆ ಸ್ಥಾಪನೆಯಾಗುವ ಸಾಧ್ಯತೆ ಇದೆ. ಆ್ಯಪಲ್ ಸಂಸ್ಥೆಯ ಪಾಟ್ನರ್ ಆಗಿರುವಂಥಾ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ ಐಪೋನ್ಗಳನ್ನ ತಯಾರಿಸುತ್ತೆ. ಇದೀಗ ಫಾಕ್ಸ್ಕಾನ್ ಭಾರತದಲ್ಲಿ 700 ಮಿಲಿಯನ್ ಡಾಲರ್ ಮೊತ್ತದ ಕಾರ್ಖಾನೆ ಸ್ಥಾಪಿಸೋಕೆ ಮುಂದಾಗಿದೆ. ಬೆಂಗಳೂರು ಏರ್ಪೋರ್ಟ್ ಬಳಿ 300 ಎಕರೆ ಪ್ರದೇಶದಲ್ಲಿ ಕಾರ್ಖಾನೆಯನ್ನ ನಿರ್ಮಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಕೂಡ ನಿರ್ಮಾಣ ಮಾಡಬಹುದು ಅನ್ನೋ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಬಳಿ ಐಫೋನ್ ನಿರ್ಮಾಣದ ಕಾರ್ಖಾನೆ ಸ್ಥಾಪನೆಯಾಗಿದ್ದೇ ಆದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕುವ ನಿರೀಕ್ಷೆ ಇದೆ. ಸದ್ಯ ಚೀನಾದಲ್ಲಿ ಹೆಚ್ಚಿನ ಪ್ರಮಾಣದ ಐಫೋನ್ಗಳನ್ನ ಉತ್ಪಾದಿಸಲಾಗ್ತಿದೆ. ಆದ್ರೀಗ ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಹೀಗಾಗಿ ಅಮೆರಿಕ ಮೂಲದ ಆ್ಯಪಲ್ ಮತ್ತು ಫಾಕ್ಸ್ಕಾನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡೋಕೆ ಆಸಕ್ತಿ ತೋರಿವೆ.